ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ರಾಜಕೀಯ ಜಂಜಾಟ ಶೆಟ್ಟರಿಗೆ ಬೀಗರೂಟ!

Parashurama
Updated On : 24 Jan 2013, 11:37 am

ಬಾಗಲಕೋಟೆ: ಅತ್ತ ಬೆಂಗಳೂರಿನಲ್ಲಿ ಕೆಜೆಪಿ ಪಾಳೆಯದ ರಾಜಿನಾಮೆ ಚಟುವಟಿಕೆ ವಿಭಿನ್ನ ಮಜಲು ಕಂಡುಕೊಳ್ಳುತ್ತಿದ್ದರೂ, ಇತ್ತ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತ್ರ ಗುರುವಾರ ಬಾಗಲಕೋಟೆ ಜಿಲ್ಲೆಯ ಬೀಗರ ಊರಿನಲ್ಲಿ ಸನ್ಮಾನ ಸ್ವೀಕರಿಸುತ್ತ ನಿರುಮ್ಮಳರಾಗಿದ್ದರು.
ಏನೂ ಆಗಿಯೇ ಇಲ್ಲ ಎನ್ನುವಂತೆ ತಣ್ಣಗೆ ಪತ್ನಿ, ಪುತ್ರರ ಸಮೇತರಾಗಿ ನಗು ನಗುತ್ತಲೇ ಸನ್ಮಾನ ಸ್ವೀಕರಿಸಿದರು.
ಬೀಗರ ಊರಾದ (ಪತ್ನಿ ಶಿಲ್ಪಾ ಶೆಟ್ಟರ್ ತವರು) ಐತಿಹಾಸಿಕ ಶಿಲ್ಪಕಲೆಯನ್ನು ಮಡಿಲಲ್ಲಿ ಇಟ್ಟುಕೊಂಡಿರುವ ಐಹೊಳೆ ಗ್ರಾಮ ಸ್ಥಳಾಂತರಕ್ಕೆ ಚಾಲನೆ ನೀಡಿದ ಬಳಿಕ, ಗ್ರಾಮದ ವಿಜಯ ಮಹಾಂತೇಶ್ವರ ಮಾಧ್ಯಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಶೆಟ್ಟರ್ ಅವರು ಪತ್ನಿ ಶಿಲ್ಪಾ, ಕಿರಿಯ ಪುತ್ರ ಸಂಕಲ್ಪ ಜತೆಯಾಗಿ ಸನ್ಮಾನ ಸ್ವೀಕರಿಸಿದರು.  ತಮ್ಮೂರಿನ ಅಳಿಯ, ಮಗಳು, ಮೊಮ್ಮಗನನ್ನು ಐಹೊಳೆ ಜನತೆ ಅತ್ಯಂತ ಪ್ರೀತಿಯಿಂದ ಸನ್ಮಾನಿಸಿದರು. ಮೂವರಿಗೂ ಸೇರಿಸಿ ದೊಡ್ಡ ಮಾಲೆ ಹಾಕಿ ಸಂಭ್ರಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments