ನೇಪಾಳ ಭೇಟಿಯಲ್ಲಿ ರಾಜಕೀಯವಿಲ್ಲ
ಮಡಿಕೇರಿ: ನೇಪಾಳದ ಪಶುಪತಿನಾಥ ದೇವಾಲಯಕ್ಕೆ ಖಾಸಗಿ ಭೇಟಿ ನೀಡಲು 2 ದಿನಗಳ ಕಾಲ ತೆರಳಿದ್ದೆನೆ ವಿನಾ ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಸಂವಿಧಾನಕ್ಕೆ ಅಪಚಾರ ಆಗುವಂತೆ ಸ್ಪೀಕರ್ ಹುದ್ದೆಯ ವಿರುದ್ಧ ಕೆಲವರು ಪ್ರತಿಕ್ರಿಯಿಸಿರುವ ಬಗ್ಗೆ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ವಿಷಾದಿಸಿದ್ದಾರೆ. ಮಡಿಕೇರಿಯ ತಮ್ಮ ನಿವಾಸ ವುಡ್ಲ್ಯಾಂಡ್ಸ್ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ತನ್ನಿಂದ ಸಂವಿಧಾನಕ್ಕೆ ಯಾವುದೇ ಚ್ಯುತಿ ಬರಲಿಲ್ಲ. ತನ್ನ ವಿರುದ್ಧ ವೃಥಾರೋಪ ಮಾಡುತ್ತಿರುವವರು ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಯಾರೋ ಏನೋ ಮಾತನಾಡುತ್ತಾರೆ ಎಂದರೆ ಅದಕ್ಕೆಲ್ಲ ತಾನು ಪ್ರತಿಕ್ರಿಯಿಸುವುದಿಲ್ಲ. ನನಗೆ ನನ್ನದೇ ಆತ್ಮಸಾಕ್ಷಿ, ಜವಾಬ್ದಾರಿ ಇದ್ದು, ಅದಕ್ಕೆ ತಕ್ಕಂತೆ ನಡೆಯುತ್ತೇನೆ ವಿನಾ ಯಾರದ್ದೋ ಮಾತುಕೇಳಿ ಕಾರ್ಯನಿರ್ವಹಿಸಲಾರೆ ಎಂದರು.
ರಾಜಿನಾಮೆ ಪ್ರಚಾರಕ್ಕೆ: ಕೆಲವರಿಗೆ ರಾಜಿನಾಮೆ ನೀಡುವುದು ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ. ಕಳೆದ 6 ತಿಂಗಳಿನಿಂದ ರಾಜಿನಾಮೆಗಳ ಬಗ್ಗೆ ಹೇಳುತ್ತಲೇ ಬಂದಿದ್ದಾರೆ. ಇವೆಲ್ಲ ಪ್ರಚಾರದ ಗಿಮಿಕ್ ಎಂದು ಬೋಪಯ್ಯ ಟೀಕಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.