ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣ: ವಿಚಾರಣೆ ಮುಂದೂಡಿಕೆ
ಸಂಡೂರು: ಮಾಚಿ ಸಚಿವ ಜನಾರ್ದನ ರೆಡ್ಡಿ ಮತ್ತಿತರ ಮೂವರ ವಿರುದ್ಧ ಟಪಾಲ್ ನಾರಾಯಣ ರೆಡ್ಡಿ ಅವರು 2006ರಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಗಡಿ ಗುರುತು ನಾಶ ಹಾಗೂ ಜೀವ ಬೆದರಿಕೆ ಪ್ರಕರಣದ ವಿಚಾರಣೆ ಸೋಮವಾರ ಸಂಡೂರು ನ್ಯಾಯಾಲಯದಲ್ಲಿ ನಡೆಯಿತು. ನ್ಯಾಯಾಧೀಶ ಶಿವಾನಂದ ಮಾರುತಿ ಜಪರೆ ಮಾರ್ಚ್ 30ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.
ಈ ಪ್ರಕರಣದಲ್ಲಿ ಇತರೆ ಆರೋಪಿಗಳಾಗಿರುವ ರಾಮಚಂದ್ರ ರೆಡ್ಡಿ ಹಾಗೂ ಲಕ್ಷ್ಮೀ ಪ್ರಸಾದ್ ಸೋಮವಾರ ಸಂಡೂರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಜನಾರ್ದನ ರೆಡ್ಡಿ ಹಾಜರಾಗದ ಕಾರಣ, ಅವರಿಗೆ ಮುಂದಿನ ವಿಚಾರಣೆ ವೇಳೆ ಹಾಜರಾಗಲು ನ್ಯಾಯಾಧೀಶರು ವಾರೆಂಟ್ ಹೊರಡಿಸಿದರು. ಆರೋಪಿಗಳ ಪರ ವಕೀಲ ಪಾಟೀಲ್ ಸಿದ್ದಾರೆಡ್ಡಿ, ಸರ್ಕಾರದ ಪರವಾಗಿ ಎಪಿಪಿ ಶರಣಬಸಪ್ಪ ಹಾಜರಾಗಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.