ಜೋಶಿ ನೇಮಕದಿಂದ ಬಿಜೆಪಿ ದುರ್ಬಲ: ಧನಂಜಯ
ಕ.ಪ್ರ. ವಾರ್ತೆ ಉಡುಪಿ ಮಾ.22
ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ನೇಮಕದಿಂದ ಪಕ್ಷ ಇನ್ನಷ್ಟು ದುರ್ಬಲವಾಗಿದ್ದು, ಬಿಜೆಪಿಯೊಳಗೆ ಭಿನ್ನಾಭಿಪ್ರಾಯ ಇನ್ನಷ್ಟು ಹೆಚ್ಚಿದೆ. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ತನ್ನ ಭವಿಷ್ಯ ಕಳೆದುಕೊಂಡಿದೆ ಎಂದು ಕೆಜೆಪಿ ನಾಯಕ ಧನಂಜಯಕುಮಾರ್ ಟೀಕಿಸಿದರು.
ಉಡುಪಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜೋಶಿ ನೇಮಕದಿಂದ ತನ್ನ ಭವಿಷ್ಯ ಏನೆಂಬುದನ್ನು ತಿಳಿಯದೆ ಈಶ್ವರಪ್ಪ ಕಂಗಾಲಾಗಿದ್ದಾರೆ, ಇನ್ನೇನು ಬಿಜೆಪಿ ರಾಜ್ಯಾಧ್ಯಕ್ಷನಾದೆ ಎಂದುಕೊಳ್ಳುತ್ತಿದ್ದ ಡಿ. ವಿ.ಸದಾನಂದಗೌಡರಿಗಂತೂ ದಿಕ್ಕೆ ತೋಚುತ್ತಿಲ್ಲ. ಅವರಿಬ್ಬರೂ ಯಡಿಯೂರಪ್ಪ ಅವರನ್ನು ತೆಗಳುವ ಒಂದಂಶದ ಕಾರ್ಯಕ್ರಮ ಹಾಕಿಕೊಂಡು ವರಿಷ್ಠರನ್ನು ತೃಪ್ತಿಗೊಳಿಸಲು ಯತ್ನಿಸಿದರೂ ಅದು ಫಲ ನೀಡಿಲ್ಲ. ಇದೀಗ ಅವರಿಬ್ಬರೂ ಎಲ್ಲಿದ್ದಾರೆ ಎಂದೇ ಗೊತ್ತಿಲ್ಲ ಎಂದು ಲೇವಡಿ ಮಾಡಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರು ಜೋಶಿಯನ್ನು ನೇಮಿಸಿದ್ದು, ಜೋಶಿ ಅನಂತ್ ಡಮ್ಮಿಯಾಗಿ ಕೆಲಸ ಮಾಡುತ್ತಾರೆ. ಇದರಿಂದ ಪಕ್ಷದಲ್ಲಿ ಇನ್ನಷ್ಟು ಭಿನ್ನಾಭಿಪ್ರಾಯಗಳು ಹುಟ್ಟುವ ಮೂಲಕ ರಾಜ್ಯದಲ್ಲಿ ಪಕ್ಷ ಸೋಲಲಿದೆ ಎಂದರು.
ಕಾಂಗ್ರೆಸ್ನಲ್ಲಿ ನಾಯಕರೇ ಜಾಸ್ತಿ: ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಖರ್ಗೆ ತಾವೇ ಮುಖ್ಯಮಂತ್ರಿ ಎಂದುಕೊಳ್ಳುತ್ತಿದ್ದಾರೆ, ಎಸ್.ಎಂ. ಕೃಷ್ಣ ದೆಹಲಿಗೆ ಹೋಗಿ ಲಾಬಿ ನಡೆಸುತ್ತಿದ್ದಾರೆ, ಆ ಪಕ್ಷದಲ್ಲಿ ನಾಯಕರ ಸಂಖ್ಯೆ ಜಾಸ್ತಿಯಾಗಿರುವುದೇ ಆ ಪಕ್ಷ ಸೋಲುವುದಕ್ಕೆ ಕಾರಣವಾಗುತ್ತಿದೆ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.