ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಕುಷ್ಟಗಿಯಲ್ಲಿ ಸತತ 2ನೇ ಬಾರಿ ಯಾರೂ ಗೆದ್ದಿಲ್ಲ!

Parashurama
Updated On : 23 Mar 2013, 10:19 am

ಕೊಪ್ಪಳ ಜಿಲ್ಲೆಯ ಕುಷ್ಟಗಿ ವಿಧಾನಸಭೆ ಕ್ಷೇತ್ರ ಪ್ರತಿ ಬಾರಿ ಚುನಾವಣೆ ಬಂದಾಗ ಚರ್ಚೆಯಲ್ಲಿರುತ್ತದೆ. ಕಾರಣ ಇಲ್ಲಿ ಸತತವಾಗಿ ಎರಡನೇ ಬಾರಿ ಯಾರೂ ಗೆದ್ದಿಲ್ಲ! ಜಯಗಳಿಸಲು ನಡೆಸಿದ ಯತ್ನವೂ ಫಲಿಸಿಲ್ಲ. ಹೌದು. 1952ರಿಂದ ಇಲ್ಲಿಯವರೆಗೆ ಸುಮಾರು ಅಭ್ಯರ್ಥಿಗಳು ಎರಡನೇ ಬಾರಿ ಶಾಸಕರಾಗಲು ಸ್ಪರ್ಧಿಸಿದ್ದಾರೆ. ಆದರೆ, ಗೆಲವಿನ ರುಚಿ ಮಾತ್ರ ಸಿಕ್ಕಿಲ್ಲ. 1957ರಲ್ಲಿ ಈ ಕ್ಷೇತ್ರದಿಂದ ಗೆದ್ದಿದ್ದ ಕಾಂಗ್ರೆಸ್‌ನ ಪುಂಡಲೀಕಪ್ಪ ಸೇರಿದಂತೆ ಹಲವರು ಈ ದಾಖಲೆ ಮುರಿಯಲು ಪ್ರಯತ್ನಿಸಿ ನಿರಾಶರಾಗಿದ್ದಾರೆ. ಹಾಗಂತ ಎರಡು ಬಾರಿ ಯಾರೂ ಇಲ್ಲಿ ಶಾಸಕರಾಗಿಯೇ ಇಲ್ಲ ಎನ್ನುವಂತಿಲ್ಲ. ಒಂದು ಬಾರಿ ಗೆದ್ದು, ಮತ್ತೊಂದು ಬಾರಿ ಸೋತು ನಂತರ ಮತ್ತೆ ಸ್ಪರ್ಧಿಸಿ ಗೆದ್ದಿದ್ದಾರೆಯೇ ಹೊರತು ಸತತವಾಗಿ ಎರಡು ಬಾರಿ ಗೆದ್ದಿಲ್ಲ. ಹಾಲಿ ಶಾಸಕ ಕಾಂಗ್ರೆಸ್‌ನ ಅಮರೇಗೌಡ ಬಯ್ಯಾಪುರ ಅವರು ಎರಡನೇ ಬಾರಿ ಗೆಲ್ಲಲು ಕಣಕ್ಕಿಳಿದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments