ಭ್ರಷ್ಟರಿಗೆ ಮಠಾಧೀಶರು ಬೆಂಬಲ ನೀಡಲ್ಲ: ಈಶ್ವರಪ್ಪ
ತುಮಕೂರು: ರಾಜ್ಯದ ಮಠಾಧೀಶರು ಭ್ರಷ್ಟ ರಾಜಕಾರಣಿಗಳಿಗೆ ಈ ಬಾರಿಯ ಚುನಾವಣೆಯಲ್ಲಿ ಬೆಂಬಲ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ತುಮಕೂರಿನಲ್ಲಿ ಬಿಜೆಪಿ 'ವಿಜಯ ಸಂಕಲ್ಪ ಯಾತ್ರೆ'ಯಲ್ಲಿ ಮಾತನಾಡಿ, ರಾಜ್ಯದ ಬಹುತೇಕ ಎಲ್ಲ ಜಾತಿಯ ಮಠಾಧೀಶರಿಗೆ ಭೂಮಿ, ಹಣ ನೀಡಲಾಗಿದೆ. ರಾಜ್ಯದ ಮಠಾಧೀಶರು ಭ್ರಷ್ಟರನ್ನು ಬೆಂಬಲಿಸಲ್ಲ ಎಂದು ತಿಳಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಕಳ್ಳ, ಸುಳ್ಳ, ಭ್ರಷ್ಟ ಅಂತೆಲ್ಲಾ ಹೇಳುತ್ತಿದ್ದ ಕಾಂಗ್ರೆಸ್, ಜೆಡಿಎಸ್ನವರು ಯಡಿಯೂರಪ್ಪ ಬಿಜೆಪಿ ಬಿಟ್ಟ ಮೇಲೆ ಸೊಲ್ಲೇ ಎತ್ತುತ್ತಿಲ್ಲ. ಈಗ ಕಾಂಗ್ರೆಸ್ನ ಎಸ್.ಎಂ. ಕೃಷ್ಣ, ಡಾ.ಜಿ. ಪರಮೇಶ್ವರ, ಸಿದ್ದರಾಮಯ್ಯ, ಯಡಿಯೂರಪ್ಪ ಅಣ್ಣ-ತಮ್ಮಂದಿರಂತೆ ಅನ್ಯೋನ್ಯವಾಗಿದ್ದಾರೆ. ಬಿಜೆಪಿಗೆ ಜಾತಿ, ಹಣ, ಹೆಂಡ ಮುಖ್ಯವಲ್ಲ. ಹಣ ಹಂಚಿ ದೇವರ ಪಟ್ಟ ಗಳಿಸೋ ಕೀಳುಮಟ್ಟದ ರಾಜಕಾರಣವನ್ನು ಬಿಜೆಪಿ ಮಾಡಲ್ಲ. ಬಿಜೆಪಿ ದೇಶ ಭಕ್ತರ ಪಕ್ಷ. ಜನ ಸಾಧನೆ ನೋಡುತ್ತಾರೆಯೇ ಹೊರತು ಜಾತಿ, ಹಣ, ಹೆಂಡವನ್ನಲ್ಲ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.