'ಸೋಲಿನ ಸರದಾರ' ಎಂ. ಅಫ್ರೋಜ್ ಖಾನ್
ಮಂಡ್ಯ: ಚುನಾವಣೆಗಳಲ್ಲಿ ಗೆದ್ದರಷ್ಟೇ ಅಲ್ಲ, ಸೋತರೂ ದಾಖಲೆಯೇ. ಸೋಲು, ಗೆಲವಿನ ಅಂತರದಲ್ಲಿ ದಾಖಲೆ ನಿರ್ಮಿಸಿದವರು, ಒಂದೇ ಕ್ಷೇತ್ರದಿಂದ ಗೆದ್ದು, ಸೋತು ದಾಖಲೆ ಬರೆದವರು ರಾಜಕಾರಣದಲ್ಲಿ ಬಹಳಷ್ಟು ಮಂದಿ ಇದ್ದಾರೆ. ಆದರೆ, 5 ಬಾರಿ ಸ್ಪರ್ಧಿಸಿದರೂ ಸೋಲನ್ನೇ ಅನುಭವಿಸಿದ ವ್ಯಕ್ತಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿದ್ದಾರೆ! ರೈತಪರ ಹೋರಾಟಗಾರ ಕೆ.ಎಸ್. ನಂಜುಂಡೇಗೌಡ ಶ್ರೀರಂಗಪಟ್ಟಣ ಕ್ಷೇತ್ರದಿಂದ ರೈತ ಸಂಘದ ಅಭ್ಯರ್ಥಿಯಾಗಿ ಕಳೆದ ಐದು ಚುನಾವಣೆಗಳಿಂದಲೂ ಸ್ಪರ್ಧಿಸುತ್ತಿದ್ದಾರೆ. ಆದರೆ, ಒಂದು ಬಾರಿಯೂ ಗೆಲವಿನ ರುಚಿ ಕಂಡಿಲ್ಲ. ಈಗ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ.
1989ರಿಂದ 2008ರವರೆಗೆ ನಡೆದಿರುವ 5 ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ ನಂಜುಂಡೇಗೌಡ ಮೂರು ಚುನಾವಣೆಗಳಲ್ಲಿ 2ನೇ ಸ್ಥಾನ ಪಡೆದಿದ್ದರೆ, ಉಳಿದ ಎರಡು ಚುನಾವಣೆಗಳಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಆದರೆ, ಚುನಾವಣೆಯಿಂದ ಚುನಾವಣೆಗೆ ಶೇಕಡಾವಾರು ಮತದಾನ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದಾರೆ. 1989ರಲ್ಲಿ ಮೊದಲ ಚುನಾವಣೆ ಎದುರಿಸಿದ ನಂಜುಂಡೇಗೌಡ 18,851 (ಶೇ.21.98) ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆಗ ಕಾಂಗ್ರೆಸ್ ಅಭ್ಯರ್ಥಿ ದಮಯಂತಿ ಬೋರೇಗೌಡ (29,159 ಮತ) ಗೆಲವು ಸಾಧಿಸಿದ್ದರು. 1994ರಲ್ಲಿ ಜನತಾ ದಳ ಅಭ್ಯರ್ಥಿ ವಿಜಯಲಕ್ಷ್ಮಮ್ಮ, 1999ರ ಚುನಾವಣೆಯಲ್ಲಿ ಕಾಂಗ್ರೆಸ್ನ ಪಾರ್ವತಮ್ಮ ಶ್ರೀಕಂಠಯ್ಯ, 2004ರಲ್ಲಿ ಜೆಡಿಎಸ್ ವಿಜಯಲಕ್ಷ್ಮಮ್ಮ ಎದುರು ಸೋತು 2ನೇ ಸ್ಥಾನದಲ್ಲಿದ್ದ ನಂಜುಂಡೇಗೌಡರು, 2008ರ ಚುನಾವಣೆಯಲ್ಲಿ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.