ರಾಜಕೀಯ

ಮತದಾನದ ಹಕ್ಕಿರಲಿಲ್ಲ, ಇದ್ದದ್ದು ಇಬ್ಬರೇ ಸಚಿವರು

ದೇಶದ ಪ್ರಥಮ ಪ್ರತಿನಿಧಿಗಳ ಸದನಕ್ಕೆ ಶಾಸನಬದ್ಧ ಸ್ಥಾನಮಾನ ಲಭ್ಯವಾದರೂ ಸದಸ್ಯರಿಗೆ ಮತದಾನದ ಹಕ್ಕಿರಲಿಲ್ಲ. ಈ ಸದನದ ಸದಸ್ಯರಿಗೆ ಪ್ರಾರಂಭಿಕವಾಗಿ ಯಾವುದೇ ರೀತಿಯ ಗುರುತರವಾದ ಹಕ್ಕುಗಳನ್ನು ನೀಡಿರಲಿಲ್ಲ. ಆದರೆ, ದಿವಾನರ ಭಾಷಣವನ್ನು ಆಲಿಸುವುದಕ್ಕೆ ಮಾತ್ರ ಸೀಮಿತವಾಗಿರಲೂ ಇಲ್ಲ. ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಸಲಹೆಗಳನ್ನು ನೀಡಬಹುದಿತ್ತು.
ಈ ಸದನಕ್ಕೆ ಮತದಾನ ಮಾಡುವ ಹಕ್ಕಿರಲಿಲ್ಲ. ಆದರೆ ಶಾಸನಬದ್ಧವಾದ ಕ್ರಮಗಳನ್ನು ಪ್ರಥಮ ಬಾರಿಗೆ ಸದನದಲ್ಲಿ ಸದಸ್ಯರ ಮುಂದಿಡಬೇಕಿತ್ತು. ಆ ಮೂಲಕ ಅವರ ಅಭಿಪ್ರಾಯ ಸಂಗ್ರಹಿಸಲಾಗುತ್ತಿತ್ತು. ಜನಪ್ರತಿನಿಧಿಗಳ ಸದನದ ಮುಖ್ಯ ವೈಶಿಷ್ಟ್ಯವೆಂದರೆ ಅದು ಸದಸ್ಯರಿಂದ ಸರ್ಕಾರಕ್ಕೆ ಪ್ರತಿನಿಧಿತ್ವ ಒದಗಿಸುವುದಾಗಿತ್ತು. 19ನೇ ಶತಮಾನದ ಆರಂಭದಲ್ಲಿ ಮಹಾರಾಜರ ಕೌನ್ಸಿಲ್‌ಗೆ ಸದನದ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕೆಂಬ ಒತ್ತಾಯವಿತ್ತು. 1940ರಲ್ಲಿ ಇಂತಹ ಭಾಗವಹಿಸುವಿಕೆಗೆ ಸರ್ಕಾರ ಅನುಮತಿ ನೀಡಿತು. 1940ರ ಮೈಸೂರು ಸರ್ಕಾರದ ಕಾಯಿದೆಯಲ್ಲಿ ಇಬ್ಬರು ಸದಸ್ಯರನ್ನು ಮಂತ್ರಿಗಳ ಕೌನ್ಸಿಲ್‌ಗೆ ಸಚಿವರನ್ನಾಗಿ ನೇಮಿಸಲು ಮಹಾರಾಜರಿಗೆ ಅನುಮತಿ ನೀಡಲಾಯಿತು. ಇದರಲ್ಲಿ ಒಬ್ಬರು ಸದನ ಹಾಗೂ ಮತ್ತೊಬ್ಬರು ಪರಿಷತ್‌ನಿಂದ ನೇಮಕವಾಗಬೇಕಿತ್ತು.
ಏಕೆಂದರೆ ಇದಕ್ಕೂ ಮುನ್ನ 1907ರಲ್ಲಿ ವಿಧಾನಪರಿಷತ್ ಆರಂಭವಾಗಿತ್ತು. ಅಧಿಕಾರೇತರ ಪ್ರಾಯೋಗಿಕ ಅನುಭವ ಮತ್ತು ಸ್ಥಳೀಯ ಜ್ಞಾನ ಹೊಂದಿರುವವರನ್ನು ನೇಮಿಸಿ ಸರ್ಕಾರಕ್ಕೆ ಕಾನೂನು ಮತ್ತು ನಿಯಮ ರೂಪಿಸಲು ಸಹಕಾರ ನೀಡುವ ಉದ್ದೇಶ ಇದರದ್ದಾಗಿತ್ತು. ದಿವಾನರು ಅಧ್ಯಕ್ಷರಾಗಿದ್ದರು. ಈ ಪರಿಷತ್‌ನಲ್ಲಿ 10ಕ್ಕಿಂತ ಕಡಿಮೆ ಇಲ್ಲದ ಹಾಗೂ 15ಕ್ಕಿಂತ ಹೆಚ್ಚು ಸದಸ್ಯರು ಇರುವಂತಿರಲಿಲ್ಲ. ಸರ್ಕಾರ ಇದಕ್ಕೆ ನಾಮನಿರ್ದೇಶನ ಮಾಡುತ್ತಿತ್ತು. ಇದರಲ್ಲಿ ಐವರಲ್ಲಿ ಒಬ್ಬರು ಅಧಿಕಾರೇತರರಾಗಿರಬೇಕಿತ್ತು. 1923ರಲ್ಲಿ ಗರಿಷ್ಠ ಸಂಖ್ಯೆಲ್ಲಿ 50ಕ್ಕೆ ಹೆಚ್ಚಿಸಿ, ಶೇ.60ರಷ್ಟು ಅಧಿಕಾರೇತರ ಸದಸ್ಯರಿಗೆ ಅವಕಾಶ ಮಾಡಿಕೊಡಲಾಯಿತು. ಮೈಸೂರು ವಿವಿ, ವಾಣಿಜ್ಯ, ವ್ಯಾಪಾರಿ, ಪ್ಲಾಂಟರ್‌ಗಳಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಯಿತು. ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಹಿಂದುಳಿದ ವರ್ಗಕ್ಕೆ ಸ್ಥಾನ ಮೀಸಲಿರಿಸಿ, ಅವರು ಆಯ್ಕೆಯಾಗದೆ ಹೋದರೆ ಸರ್ಕಾರವೇ ನಾಮನಿರ್ದೇಶನ ಮಾಡುತ್ತಿತ್ತು. 1940ರಲ್ಲಿ ಪರಿಷತ್‌ನ ಗರಿಷ್ಠ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿ, ಸದನದಿಂದ ಇಲ್ಲಿಗೆ ಕೆಲವರನ್ನು ನೇಮಿಸುವ ಅಧಿಕಾರವನ್ನು ಮಹಾರಾಜರಿಗೆ ನೀಡಲಾಯಿತು.

- ಕೆರೆ ಮಂಜು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!