ರಾಜಕೀಯ

ಶಾಸಕ ರಘುಪತಿ ಭಟ್ ಕಾಮಕೇಳಿ ಸಿಡಿ ಬಹಿರಂಗ

ಕ.ಪ್ರ. ವಾರ್ತೆ ಉಡುಪಿ ಮಾ.28-
ಉಡುಪಿಯ ಬಿಜೆಪಿ ಶಾಸಕ ಕೆ.ರಘುಪತಿ ಭಟ್ ಅವರದ್ದು ಎನ್ನಲಾಗಿರುವ ಕಾಮಕೇಳಿಯ ಸಿಡಿಯೊಂದು ಬಹಿರಂಗಗೊಂಡಿದ್ದು ರಾಜ್ಯ ಬಿಜೆಪಿಯಲ್ಲಿ ಕೋಲಾಹಲವನ್ನೆಬ್ಬಿಸಿದೆ.
ಈ ಪ್ರಕರಣದೊಂದಿಗೆ ರಘುಪತಿ ಭಟ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕಳೆದುಕೊಳ್ಳುವುದು ನಿಶ್ಚಿತವಾಗಿದೆ. ಈ ಸಿಡಿಯು ಕಳೆದೆರಡು ದಿನಗಳಿಂದ ಉಡುಪಿಯಲ್ಲಿ ಪಡ್ಡೆ ಹುಡುಗರ ಮೊಬೈಲ್‌ನಲ್ಲಿ ಚಲಾವಣೆಯಲ್ಲಿದ್ದು, ಗುರುವಾರ ಬೆಳಗ್ಗೆ ಟಿವಿ ಚಾನೆಲ್‌ಗಳಲ್ಲೂ ಪ್ರಸಾರವಾಯಿತು. ಈ ಸಿಡಿಯಲ್ಲಿ ಖಾಸಗಿ ಬದುಕಿನ ದೃಶ್ಯಗಳಿರುವುದರಿಂದ ಶಾಸಕರ ಮುಖ ಕಾಣದಂತೆ ದೃಶ್ಯಗಳನ್ನು ಪ್ರಸಾರ ಮಾಡಲಾಯಿತು. ಳಾಗಿರುವುದರಿಂದ ಚಾನೆಲ್‌ಗಳು ಪ್ರಸಾರ ಮಾಡದೇ ಕೇವಲ ಸುದ್ದಿಯನ್ನಷ್ಟೇ ಬಿತ್ತರಿಸಿದವು. ಈ ಘಟನೆಯಿಂದ ಬಿಜೆಪಿ ತೀವ್ರ ಮುಖಭಂಗ, ಮುಜುಗರಕ್ಕೊಳಗಾಗಿದೆ.  ಫೆ.11ರಂದು ಈ ದೃಶ್ಯಗಳನ್ನು ಉಡುಪಿ ಮೂಲದ ಉದ್ಯಮಿಯ ಮುಂಬೈನ ಹೊಟೇಲ್‌ವೊಂದರಲ್ಲಿ ಚಿತ್ರೀಕರಿಸಲಾಗಿದ್ದ, ಭಟ್ ಅವರೊಂದಿಗೆ ಕಾಣಿಸಿಕೊಂಡ ಮಹಿಳೆ ನೇಪಾಳಿ ಕಾಲ್‌ಗರ್ಲ್ ಎನ್ನಲಾಗುತ್ತಿದೆ.
ಚುನಾವಣೆಯಲ್ಲಿ ಸೋಲಿಸಲು ಹುನ್ನಾರ: ಆದರೆ, ಈ ದೃಶ್ಯಗಳಲ್ಲಿರುವುದು ನಾನಲ್ಲ. ತಮ್ಮ ಫೋಟೋ ಬಳಸಿಕೊಂಡು ಆಧುನಿಕ ತಂತ್ರಜ್ಞಾನದ ಮೂಲಕ ನಕಲಿ ಸಿಡಿ ತಯಾರಿಸಲಾಗಿದೆ ಎಂದು ಭಟ್ ಹೇಳಿದ್ದಾರೆ.
'ಚುನಾವಣೆಯಲ್ಲಿ ನನ್ನನ್ನು ಸೋಲಿಸಲಾಗದ ಪ್ರತಿಪಕ್ಷದವರು ಈ ರೀತಿ ನಕಲಿ ಸಿಡಿ ತಯಾರಿಸಿ ಬಹಿರಂಗಗೊಳಿಸಿ ನನ್ನ ಮಾನಹಾನಿ ಮಾಡುತ್ತಿದ್ದಾರೆ. ಆ ಮೂಲಕ ನನ್ನನ್ನು ಸೋಲಿಸಲು ಹುನ್ನಾರ ನಡೆಸಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!