ದಾವಣಗೆರೆ: ಮಾಜಿ ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಶೀಘ್ರವೇ ದೊಡ್ಡ ಸಮಾರಂಭ ಸಂಘಟಿಸಿ, ಹೊನ್ನಾಳಿ ಬಿಜೆಪಿ ತಾಲೂಕು ಘಟಕ, ಗ್ರಾಪಂ, ತಾಪಂ, ಜಿಪಂ, ಪಪಂ, ಎಪಿಎಂಸಿ ಸದಸ್ಯರೂ ಸೇರಿದಂತೆ ಸುಮಾರು 50 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕೆಜೆಪಿ ಸೇರುವುದಾಗಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ತಮ್ಮ ಅಭಿಮಾನಿಗಳು, ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಕೆಲವು ನಾಯಕರ ಕುತಂತ್ರದ ಹಿನ್ನೆಲೆಯಲ್ಲಿ ನಾನೂ ಬಿಜೆಪಿ ತೊರೆಯಲು ನಿರ್ಧರಿಸಿದ್ದೇನೆ ಎಂದರು. ವಿಧಾನಸಭೆ ಚುನಾವಣೆಯಲ್ಲಿ ಎದುರಾಳಿಗಳಿಗೆ ನಮ್ಮ ಮಾತು ಉತ್ತರವಾಗದೆ, ನಮ್ಮ ಮತ ಉತ್ತರವಾಗಬೇಕು. ಕೆಜೆಪಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಿಂದ ಯಾರೇ ನಿಂತರೂ ಚಿಂತೆ ಇಲ್ಲ. ನಮ್ಮ ಬಲ ಇಲ್ಲಿನ ಮತದಾರರು ಎಂದರು.