ಎಚ್.ಡಿ ದೇವೇಗೌಡ 
ರಾಜಕೀಯ

ನೈಸ್ ಅಕ್ರಮ ಸಿಬಿಐಗೆ ವಹಿಸಿ

ನೈಸ್ ಯೋಜನೆ ಒಡಂಬಡಿಕೆಯ ದಿನದಿಂದ ಇಲ್ಲಿಯವರೆಗೆ ನಡೆದಿರುವ ಅಕ್ರಮಗಳನ್ನು ಸಿಬಿಐ ತನಿಖೆಗೆ ವಹಿಸಬೇಕು...

ಬೆಂಗಳೂರು:  ನೈಸ್ ಯೋಜನೆ ಒಡಂಬಡಿಕೆಯ ದಿನದಿಂದ ಇಲ್ಲಿಯವರೆಗೆ ನಡೆದಿರುವ  ಅಕ್ರಮಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಸಂಸದ ಎಚ್.ಡಿ ದೇವೇಗೌಡ ಆಗ್ರಹಿಸಿದ್ದಾರೆ.

ನೈಸ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ, ನಿಯಮಬಾಹಿರ ವಾಣಿದ್ಯ ಚಟುವಟಿಕೆ, ರಸ್ತೆಗೆ ನೀಡಿದ ಜಾಗ  ಮಾರಾಟ ನೀಡಿರುವುದು ಸೇರಿದಂತೆ ಹಲವು ಅಕ್ರಮಗಳನ್ನು ಸಿಬಿಐ ತನಿಖೆಗೆ  ವಹಿಸಬೇಕಿದೆ. ಹಿಂದೆ ಈ ಅಕ್ರಮವ್ನು  ಸದನ ಸಮಿತಿಗೆ ವಹಿಸಿದ್ದರೂ, ತಪ್ಪಿತಸ್ಥರನ್ನು ಕಂಡು ಹಿಡಿಯಲು ಈವರೆಗೂ ಸಾಧ್ಯವಾಗಿಲ್ಲ. ಸಿಬಿಐ ನಿವೃತ್ತ ಅಧಿಕಾರಿಗಳನ್ನೊಳಗೊಂಡ ವಿಶೇಷ ತಂಡ ರಚಿಸಿ  ತನಿಖೆ ನಡೆಸಬೇಕು ಅಥವಾ ನೇರವಾಗಿ ಸಿಬಿಐ ತನಿಖೆಗೆ ವಹಿಸಬೇಕು. ಯೋಜನೆಗೆ ಸಂಬಂಧಿಸಿದ ಹಳೆಯ ಪ್ರಕರಣ ಡಿ.17ಕ್ಕೆ ಹೈಕೋರ್ಟ್‌ನಲ್ಲಿ  ವಿಚಾರಣೆಗೆ ಬರಲಿದ್ದು, ಸರ್ಕಾರ ಈ ವೇಳೆ ಪ್ರಬಲವಾಗಿ ವಾದ ಮಂಡಿಸಬೇಕಿದೆ. ಅಧಿಕಾರಿಗಳು, ರಾಜಕಾರಣಿಗಳು ಅಕ್ರಮದಲ್ಲಿ  ಭಾಗಿಯಾಗಿದ್ದು, ಸೂಕ್ತ ತನಿಖೆಯಿಂದ ಮಾತ್ರ ನ್ಯಾಯ ನೀಡಲು ಸಾಧ್ಯ.

ಈ ಬ್ಗಗೆ ಸಿಎಂ ಸಿದ್ಧರಾಮಯ್ಯ ಅವರಿಗೂ ಪತ್ರ ಬರೆಯಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು. ಹಿಂದೊಮ್ಮೆ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ತನಿಖೆಗೆ ಮುಂದಾದಾಗ ನೈಸ್ ಸಂಸ್ಥೆ ತಡೆಯಾಜ್ಞೆ ತಂದಿತ್ತು, 1995ರಿಂದ 2012 ರವರೆಗೆ ಒಂದು ರೂಪಾಯಿಯನ್ನೂ ಯೋಜನೆ ಜಾರಿಗಾಗಿ ಸಂಸ್ಥೆ ಹೂಡಿಕೆ ಮಾಡಿಲ್ಲ. ರಾಜ್ಯ ಸರ್ಕಾರ ನೀಡಿದ ಭೂಮಿಯನ್ನೇ ಐಸಿಐಸಿಐ ಬ್ಯಾಂಕ್‌ನಲ್ಲಿ  ಅಡಮಾನ ಇಟ್ಟು, 150 ಕೋಟಿ ಸಾಲ  ಪಡೆಯಲಾಗಿದೆ. ರೈತರ ಹಿತ ಕಾಪಾಡಬೇಕಾದ ಕೆಲವು ಜನಪ್ರತಿನಿಧಿಗಳೂ ಇದರಲ್ಲಿ ಭಾಗಿಯಾಗಿದ್ದಾರೆಯ ಸಂಸ್ಥೆ ಹಣಕ್ಕಾಗಿ ರಸ್ತೆಯ ಕೆಲವು ಭಾಗಗಳನ್ನೇ ಮಾರಿದೆ. ರಸ್ತೆಗಾಗಿ ನೀಡಿದ ಭೂಮಿಯಲ್ಲಿ ಸಾವಿರಾರು ರೈತರು ಕೃಷಿ ನಡೆಸುತ್ತಿದ್ದರು. ರೈತರಿಗೆ ಪುನರ್ವಸತಿ ಕಲ್ಪಿಸಬೇಕು ಅಥವಾ ನಿವೇಶನ ನೀಡಬೇಕು. ಆದರೆ ಈವರೆಗೂ ಪರಿಹಾರ ದೊರೆತಿಲ್ಲ ಎಂದರು. ಸರ್ಕಾರ ಅವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ದಾಖಲೆ ಕಳವು: ಅಕ್ರಮ ಮುಚ್ಚಿಹಾಕಲು ಕೆಲವು ಅಧಿಕಾರಿ ಹಾಗೂ ಸಂಸ್ಥೆಯವರು 137 ದಾಖಲೆ ಕಣ್ಮರೆಯಾಗುವಂತೆ ಮಾಡಿದ್ದಾರೆ. ಸುಪ್ರೀಂನಲ್ಲಿ ವಿಚಾರಣೆ ಬಾಕಿಯಿರುವಾಗಲೇ ದಾಖಲೆ ಕಳವು ಮಾಡಿದ್ದು, ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ. ಯೋಜನೆಯ ಕ್ರಿಯಾ ಒಪ್ಪಂದದ  ಪ್ರಕರ ಮೊದಲಿಗೆ 18,500 ಎಕರೆ ಭೂಮಿ  ಗುರುತಿಸಲಾಗಿದ್ದು, ಒಪ್ಪಂದದ ಪ್ರಕಾರ ನಾಲ್ಕು ಪಥದ ಸಿಮೆಂಟ್ ರಸ್ತೆ ನಿರ್ಮಿಸಬೇಕಿತ್ತು. ಆದರೆ ಹೆಚ್ಚುವರಿ ಜಾಗ ಕಬಳಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ ಇಡೀ ಗ್ರಾಮವನ್ನು ನೋಟಿಫೈ ಮಾಡಲಾಗಿದೆ.

ಅಕ್ರಮವಾಗಿ ಭೂ ಪರಿವರ್ತನೆಗೆ ಅವಕಾಶ, ಅಧಿಸೂಚನೆಯಿಂದ ಕೈ ಬಿಡುವಿಕೆ, ನಿರಾಕ್ಷೇಪಣಾ ಪತ್ರ ನೀಡುವ ಮೂಲಕ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.


ಪ್ರತಿಭಟನೆ: 
ಕೇಂದ್ರ ಸರ್ಕಾರದ ವೈಫಲ್ಯ ಖಂಡಿಸಿ ಡಿ.22ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ದೇವೇಗೌಡ ತಿಳಿಸಿದರು. ಪ್ರಧಾನಿಯಾಗಿ ಅಧಿಕಾರದಲ್ಲಿದ್ದಾಗ ಎಡಪಂಥೀಯ ಪಕ್ಷಗಳು ಆಡಳಿತ ನಡೆಸಲು ಸಹಕಾರ ನೀಡಿದ್ದವು. ಹೀಗಾಗಿ ಪ್ರತಿಭಟನೆಗೆ ಆ ಪಕ್ಷಗಳನ್ನು ಆಹ್ವಾನಿಸಲಾಗುವುದು. ತೃತೀಯ ರಂಗದ ಪಕ್ಷಗಳೊಂದಿಗೆ ಎಡಪಂಥೀಯ ಪಕ್ಷಗಳನ್ನೂ ಸೇರಿಸಿಕೊಂಡು ಪ್ರತಿಭಟನೆ  ನಡೆಸಲಾಗುವುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT