ನಿಗಮ ಮಂಡಳಿ ನೇಮಕ ಪ್ರಕ್ರಿಯೆ ಕುರಿತಂತೆ ವಸತಿ ಸಚಿವ ಅಂಬರೀಶ್ ಅಸಮಾಧಾನ (ಸಾಂದರ್ಭಿಕ ಚಿತ್ರ) 
ರಾಜಕೀಯ

ನಿಗಮ ನೇಮಕ: ಅಂಬಿ ಅಪಸ್ವರ

ನಿಗಮ-ಮಂಡಳಿ ನೇಮಕ ಪ್ರಕ್ರಿಯೆಯಲ್ಲಿ ತಮ್ಮ ಬೆಂಬಲಿಗರಿಗೆ ಅವಕಾಶ ಸಿಗದೇ ಇರುವ ಹಿನ್ನಲೆಯಲ್ಲಿ ವಸತಿ ಸಚಿವ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ನಿಗಮ-ಮಂಡಳಿ ನೇಮಕ ಪ್ರಕ್ರಿಯೆಯಲ್ಲಿ ತಮ್ಮ ಬೆಂಬಲಿಗರಿಗೆ ಅವಕಾಶ ಸಿಗದೇ ಇರುವ ಹಿನ್ನಲೆಯಲ್ಲಿ ವಸತಿ ಸಚಿವ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಬೆಂಬಲಿಗ ಅಮರಾವತಿ ಚಂದ್ರಶೇಖರ್ ಅವರಿಗೆ  ಅವಕಾಶ ಕೈ ತಪ್ಪಿರುವ ಹಿನ್ನಲೆಯಲ್ಲಿ ಅವರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಮಂಡ್ಯ ಕಾಂಗ್ರೆಸ್ ನಿಯೋಗ ಅಂಬರೀಶ್ ಅವರನ್ನು ಶುಕ್ರವಾರ ಭೇಟಿ ಮಾಡಿ ಚರ್ಚಿಸಿದ್ದು, ತಮ್ಮ ವಿರೋಧಿ ಬಣಕ್ಕೆ ಮಣೆ ಹಾಕಿರುವ ಬಗ್ಗೆ ಕಿಡಿಕಾರಿದ್ದಾರೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬರೀಶ್, ಸಂಭಾವ್ಯರ ಪಟ್ಟಿ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಮಂಡ್ಯದಲ್ಲಿ ಕಾಂಗ್ರೆಸ್ ಬಲಗೊಳಿಸಲು ಅಮರಾವತಿ ಚಂದ್ರಶೇಖರ್ ಸಾಕಷ್ಟು ಶ್ರಮವಹಿಸಿದ್ದಾರೆ. ಈ ಅವಧಿಯಲ್ಲಿ ಅವರು ಸಾಕಷ್ಟು ಪೆಟ್ಟೂ ತಿಂದಿದ್ದಾರೆ. ಹೀಗಾಗಿ ಪಕ್ಷ ಅಧಿಕಾರಕ್ಕೆ ಬಂದಾಗ ಅಂಥಹವರಿಗೆ ಅವಕಾಶ ನೀಡಬೇಕು. ಅವರು ಕಷ್ಟಪಟ್ಟಾಗ ಪಕ್ಷ ಅಧಿಕಾರದಲ್ಲಿ ಇರಲಿಲ್ಲ. ಈಗಲಾದರೂ ಅವರಿಗೆ ನಿಗಮ-ಮಂಡಳಿಯಲ್ಲಿ ಸ್ಥಾನ ನೀಡಲಿ ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿಯನ್ನು ಮುಚ್ಚಿಸಿದ್ದ ಇರಾನ್‌ನ IRGC ನೌಕಾಪಡೆ ಮುಖ್ಯಸ್ಥ ಅಲಿರೆಜಾನನ್ನು ಹೊಡೆದುರುಳಿಸಿದ ಇಸ್ರೇಲ್!

'ತನ್ನನ್ನು ಸರ್ವೋಚ್ಚ ನಾಯಕನನ್ನಾಗಿ ಮಾಡಲು ಇರಾನ್ ಬಯಸಿದೆ; ಆದರೆ ನಾನು ತಿರಸ್ಕರಿಸಿದೆ': ಡೊನಾಲ್ಡ್ ಟ್ರಂಪ್

ನಾವು VIPಗಳು, ಕ್ಯೂನಲ್ಲಿ ನಿಲ್ಲಲು ಸಾಧ್ಯವಿಲ್ಲ: ತಮ್ಮ ಕುಟುಂಬಕ್ಕೆ IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರ ಆಗ್ರಹ!

ಪಶ್ಚಿಮ ಏಷ್ಯಾ ಸಂಘರ್ಷ: ಭಾರತ ಸೇರಿ 5 ದೇಶಗಳಿಗೆ Hormuz ಮೂಲಕ ಸುರಕ್ಷಿತ ಸಂಚಾರಕ್ಕೆ Iran ಅನುಮತಿ!

Hormuz ಅಷ್ಟೇ ಅಲ್ಲ.. ಬಾಲ ಬಿಚ್ಚಿದ್ರೆ Bab al mandeb ಜಲಸಂಧಿಯನ್ನೂ ಮುಚುತ್ತೇವೆ: ಹೌತಿಗಳು ಬರ್ತಾರೆ ಎಂದು Iran ಎಚ್ಚರಿಕೆ

SCROLL FOR NEXT