ಕರ್ನಾಟಕ ಹೈ ಕೋರ್ಟ್ 
ರಾಜಕೀಯ

ಬಿಬಿಎಂಪಿ ಚುನಾವಣೆ: ನಾಳೆ ಹೈ ಆದೇಶ

ಬಿಬಿಎಂಪಿ ಚುನಾವಣೆ ವೇಳಾಪಟ್ಟಿ ಸೇರಿದಂತೆ ಮುಂದಿನ ಪ್ರಕ್ರಿಯೇಗಳಿಗೆ ಹೈಕೋರ್ಟ್ ಏ. 22(ಬುಧವಾರ)ದ ತನಕ ತಾತ್ಕಾಲಿಕ ತಡೆ ನೀಡಿದೆ. ಈ ಮೂಲಕ ರಾಜ್ಯ ಸರ್ಕಾರಕ್ಕೂ ಎರಡು ದಿನಗಳ ನಿರಾಳತೆ ತೋರಿದೆ.

ಬೆಂಗಳೂರು: ಬಿಬಿಎಂಪಿ ಚುನಾವಣೆ ವೇಳಾಪಟ್ಟಿ ಸೇರಿದಂತೆ ಮುಂದಿನ ಪ್ರಕ್ರಿಯೇಗಳಿಗೆ ಹೈಕೋರ್ಟ್ ಏ. 22(ಬುಧವಾರ)ದ ತನಕ ತಾತ್ಕಾಲಿಕ ತಡೆ ನೀಡಿದೆ. ಈ ಮೂಲಕ ರಾಜ್ಯ ಸರ್ಕಾರಕ್ಕೂ ಎರಡು ದಿನಗಳ ನಿರಾಳತೆ ತೋರಿದೆ.

ಮೇ 30ರ ಒಳಗೆ ಪಾಲಿಕೆ ಚುನಾವಣೆ ಪ್ರಕ್ರಿಯೇ ಮುಗಿಸುವಂತೆ ಹೈಕೋರ್ಟ್‍ನ ಏಕ ಸದಸ್ಯ ಪೀಠ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲಾ ಮತ್ತು ನ್ಯಾ.ರಾಮಮೋಹನ ರೆಡ್ಡಿ ವಿಭಾಗೀಯ ಪೀಠ ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದೆ.

ಸರಿಯಾದ ವೇಳೆಗೆ ಚುನಾವಣೆ ನಡೆಸದೇ ರಾಜ್ಯ ಚುನಾವಣಾ ಆಯೋಗ ಲೋಪವೆಸಗಿದೆ ಎಂದಿದೆ. ಆಯೋಗ ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸಿದ್ದರೆ ಈ ಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ವಿಭಾಗೀಯ ಪೀಠ ಕಿಡಿಕಾರಿದೆ.

ಅಡ್ವೊಕೇಟ್ ಜನರಲ್ ರವಿವರ್ಮಕುಮಾರ್ ವಾದ
* ಈಗಾಗಲೇ ಬಿಬಿಎಂಪಿ ವಿಸರ್ಜನೆ ಮಾಡಲಾಗಿದೆ. ಆಡಳಿತಾಧಿಕಾರಿಯನ್ನೂ ನೇಮಕ ಮಾಡಲಾಗಿದೆ.
* ಪಾಲಿಕೆಯಲ್ಲಿ ಸಾಕಷ್ಟು ಹಣಕಾಸಿನ ಅವ್ಯವಹಾರಗಳೂ ಆಗಿವೆ. ಹೀಗಾಗಿಯೇ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ.
* ಬಿಬಿಎಂಪಿ ವಿಸರ್ಜನೆಯಾಗಿರುವುದರಿಂದ ಚುನಾವಣೆಗೆ ಆರು ತಿಂಗಳ ಕಾಲಾವಕಾಶವಿದೆ.
* ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸಿದರೆ ಮತ್ತಷ್ಟು ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗುತ್ತದೆ.
* ಏಕಸದಸ್ಯ ಪೀಠ ಸರ್ಕಾರದ ಹೇಳಿಕೆ ದಾಖಲು ಮಾಡಲು ಅವಕಾಶ ನೀಡಿರಲಿಲ್ಲ.
* ಇದು ಚುನಾವಣೆ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿದೆ.
* ಪಾಲಿಕೆಯನ್ನು ವಿಸರ್ಜನೆ ಮಾಡಿರುವುದರಿಂದ, ಅದಕ್ಕೆ ಅಸ್ತಿತ್ವವೇ ಇಲ್ಲ.
* ಬಿಬಿಎಂಪಿ ಭಾಗ ಮಾಡುವ ಸಂಬಂಧ ವಿಶೇಷ ಅಧಿವೇಶನ ಕೂಡ ನಡೆಯುತ್ತಿದೆ.
* ಕೆಲ ವಾರ್ಡ್‍ಗಳಲ್ಲಿ 20 ಸಾವಿರ ಜನಸಂಖ್ಯೆ ಇದ್ರೆ, ಕೆಲ ವಾರ್ಡ್‍ಗಳಲ್ಲಿ 90 ಸಾವಿರವಿದೆ.
* ಈ ಮೂಲಕ ಜನಸಂಖ್ಯೆಯಲ್ಲೂ ಅಸಮಾನತೆ ಎದ್ದು ಕಾಣುತ್ತಿದೆ.
* ಹೀಗಾಗಿ ಏಕಸದಸ್ಯ ನೀಡಿದ್ದ ಚುನಾವಣೆ ನಡೆಸುವ ತೀರ್ಪಿಗೆ ತಡೆಯಾಜ್ಞೆ ನೀಡಿ.

ಪ್ರತಿವಾದಿಗಳ ಪರ ವಕೀಲ ನಂಜುಂಡರೆಡ್ಡಿ ಆಕ್ಷೇಪ
* ಸದಸ್ಯರ ಅಧಿಕಾರವಧಿ ಪೂರ್ಣಗೊಳ್ಳುವ ವೇಳೆ ಸೂಪರ್ ಸೀಡ್ ಮಾಡಿರುವುದು ಸಂವಿಧಾನಬಾಹಿರ.
* ಪಾಲಿಕೆ ಅಧಿಕಾರವಧಿ ಪೂರ್ಣಗೊಳ್ಳುವ ಮುನ್ನವೇ ಚುನಾವಣೆ ನಡೆಸಬೇಕಿತ್ತು.
* ಸದ್ಯ ಚುನಾವಣೆ ನಡೆಸುವ ಪ್ರಕ್ರಿಯೆ ಕುರಿತು ಸರ್ಕಾರ ಮಾಡಬೇಕಾದ್ದೇನಿಲ್ಲ.
* ಈಗ ಪಾಲಿಕೆ ಚುನಾವಣೆ ಪ್ರಕ್ರಿಯೆ ಸಂಬಂಧಿಸಿದಂತೆ ಚೆಂಡು ಆಯೋಗದ ಅಂಗಳದಲ್ಲಿದೆ.
* ಆಯೋಗಕ್ಕೆ ಚುನಾವಣೆ ನಡೆಸುವಂತೆ ವಿಭಾಗೀಯ ಪೀಠ ನಿರ್ದೇಶಿಸಬೇಕು.

ವಿಭಾಗೀಯ ಪೀಠದ ಛೀಮಾರಿ
ವಾರ್ಡ್‍ಗಳು ಇನ್ನು ರಚನೆಯಾಗಿಲ್ಲ. ಐದು ವರ್ಷದಿಂದ ಸರ್ಕಾರ ಏನು ಮಾಡುತ್ತಿತ್ತು?
* ಯಾವೊಬ್ಬರು ಹೈಕೋರ್ಟ್‍ಗೆ ಅರ್ಜಿ ದಾಖಲಿಸದಿದ್ದರೆ ಏನು ಮಾಡುತ್ತಿದ್ದೀರಿ?
* ಎಲ್ಲವೂ ನಿಮ್ಮ ಬಳಿಯೇ ಇತ್ತು. ನಿಮ್ಮ ತಪ್ಪಿಗಾಗಿ ಏಕಸದಸ್ಯ ಪೀಠದ ಆದೇಶವನ್ನು ತೆಗಳಬೇಡಿ.
* ನೀವು ಸಂಪೂರ್ಣ ಪ್ರಕ್ರಿಯೆಯ ದಿಕ್ಕನ್ನು ತಪ್ಪಿಸುತ್ತಿದ್ದೀರಿ. ಸರ್ಕಾರದ ಆದ್ಯತೆ ಏನೆಂಬುದು ನಮಗೆ ತಿಳಿದಿಲ್ಲ.
* ಆದರೆ ಸರ್ಕಾರ ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಬೇಕು ಹೊರತು ರಾಜಕೀಯದ ಆಟ ಆಡಬಾರದು.
* ಸರ್ಕಾರ ಈಗಾಗಲೇ ಬಿಬಿಎಂಪಿಯನ್ನು ವಿಸರ್ಜನೆ ಮಾಡಿರುವುದರಿಂದ ಇನ್ನೆರಡು ದಿನಗಳ ಮಟ್ಟಿಗೆ ಚುನಾವಣೆ ಅಸಾಧ್ಯ.
* ಸರ್ಕಾರದ ರಾಜಕೀಯ ಡ್ರಾಮಾ ಏನೇ ಇರಲಿ, ನ್ಯಾಯಾಲಯದ ಅದರ ಬಗ್ಗೆ ಕಾಳಜಿ ವಹಿಸುವುದಿಲ್ಲ.
* ಬದಲಾಗಿ ನಮ್ಮ ಮುಂದಿನ ಕಾನೂನಾತ್ಮಕ ಸನ್ನಿವೇಶಗಳನ್ನು ಮುಂದಿಟ್ಟುಕೊಂಡು ಅರ್ಜಿ ಇತ್ಯರ್ಥಪಡಿಸುತ್ತೇವೆ.
* ಮುಂದಿನ 6 ತಿಂಗಳ ಒಳಗೆ ಅಥವಾ ಶೀಘ್ರ ಚುನಾವಣೆ ನಡೆಸಲು ಸರ್ಕಾರ ಹಾಗೂ ಆಯೋಗಕ್ಕೆ ನಿರ್ದೇಶಿಸಬಹುದು.
* ಪ್ರತಿವಾದಿಗಳಿಗೇನಾದರೂ ಆಕ್ಷೇಪ ಇದ್ದರೆ ತಿಳಿಸಿ, ಅದನ್ನು ಸಹ ಆಲಿಸುತ್ತೇವೆ.

22ಕ್ಕೆ ಅರ್ಜಿ ಇತ್ಯರ್ಥ
ಸರ್ಕಾರ, ಆಯೋಗ ಮತ್ತು ಪ್ರತಿವಾದಿಗಳಾದ ಪಾಲಿಕೆ ಸದಸ್ಯರು ಮುಂದಿನ ಅಭಿಪ್ರಾಯ ತಿಳಿಸಿದರೆ, ಅರ್ಜಿಯನ್ನು ಏಪ್ರಿಲ್ 22ಕ್ಕೆ ಇತ್ಯರ್ಥಪಡಿಸಬಹುದು ಎಂದು ಪೀಠ ಹೇಳಿತು. ಇದಕ್ಕೆ ಸರ್ಕಾರ ಹಾಗೂ ಎಲ್ಲಾ ಪ್ರತಿವಾದಿಗಳ ಪರ ವಕೀಲರು ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಯಿತು.

ಮೀಸಲು ವಿಚಾರಣೆ ನಾಳೆ
ಸರ್ಕಾರ ಪ್ರಕಟಿಸಿದ್ದ ಮೀಸಲು ಅಂತಿಮ ಪಟ್ಟಿ ಪ್ರಶ್ನಿಸಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆಯನ್ನೂ ಏಕಸದಸ್ಯ ಪೀಠ ಏ.22ಕ್ಕೆ ಮುಂದೂಡಿದೆ. ಮೀಸಲು ಪಟ್ಟಿ ಅಸಂಬದ್ಧ ಹಾಗೂ ಅವೈಜ್ಞಾನಿಕವಾಗಿದೆ. ಮೀಸಲಿಗೆ ಸಂಬಂಧಿಸಿದಂತೆ ಹೇಳಲಾಗುವ ಸಂವಿಧಾನ ಪರಿಚ್ಛೇದ 243 ಟಿ ಅನ್ನು ಉಲ್ಲಂಘನೆಯಾಗಿದೆ.

ನ್ಯಾಯಮೂರ್ತಿಗಳ ಹಾಸ್ಯ
ವಿಚಾರಣೆ ವೇಳೆ ಪ್ರತಿವಾದಿಗಳ ಪರ ಹಿರಿಯ ವಕೀಲರ ದಂಡೆ ಇದ್ದಿದ್ದನ್ನು ಗಮನಿಸಿದ ಪೀಠ, ಪ್ರತಿವಾದಿಗಳ ಪರ ಭಾರಿ ಮಂದಿ ಇದ್ದೀರಿ. ನಾವು ಇಬ್ಬರು ಮಾತ್ರ ಇದ್ದೇವೆ ಎಂದು ಮುಖ್ಯ ನ್ಯಾ.ಮೂರ್ತಿಗಳು ಹಾಸ್ಯ ಚಟಾಕಿ ಹಾರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!