ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ 
ರಾಜಕೀಯ

ಪ್ರಜಾಪ್ರಭುತ್ವ ಉಳಿಸಲು ಬಿಜೆಪಿ-ಜೆಡಿಎಸ್ ಹೊಸ ಮೈತ್ರಿ ಆರಂಭ: ಈಶ್ವರಪ್ಪ

ಮೇಲ್ಮನೆ ಉಪಸಭಾಪತಿಯಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಮರಿತಿಬ್ಬೇಗೌಡರ ಆಯ್ಕೆ ಮುಂದಿನ ರಾಜ್ಯ ರಾಜಕಾರಣದ ದಿಕ್ಸೂಚಿ ಎಂದು ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ....

ವಿಧಾನ ಪರಿಷತ್: ಮೇಲ್ಮನೆ ಉಪಸಭಾಪತಿಯಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಮರಿತಿಬ್ಬೇಗೌಡರ ಆಯ್ಕೆ ಮುಂದಿನ ರಾಜ್ಯ ರಾಜಕಾರಣದ ದಿಕ್ಸೂಚಿ ಎಂದು ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ನೂತನ ಉಪಸಭಾಪತಿ ಮರಿತಿಬ್ಬೇಗೌಡರಿಗೆ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಹೊಸ ಮೈತ್ರಿ ಇದಾಗಿದ್ದು, ಇದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದರು. ದೇಶದಲ್ಲಿ ಸರ್ವಾಧಿಕಾರಿ ಧೋರಣೆಯ ಪರಿಸ್ಥಿತಿ ತೊಲಗುತ್ತಿದೆ. ಕರ್ನಾಟಕದಲ್ಲೂ ಇಂತಹದ್ದೊಂದು ಬೆಳವಣಿಗೆ ಆಗುತ್ತದೆ. ಪ್ರಜಾಪ್ರಭುತ್ವ ರಕ್ಷಣೆಗೆ ಎರಡು ಪಕ್ಷ ಸೇರಿರುವುದು ಹೊಸ ಬೆಳವಣಿಗೆಯ ಸಂಕೇತ ಎಂದು ಬಣ್ಣಿಸಿದರು. ಸರ್ವಾಧಿಕಾರಿ ವ್ಯವಸ್ಥೆಯನ್ನು ತಳ್ಳಿ ಪ್ರಜಾಪ್ರಭುತ್ವ ಉಳಿಸಲು ಜೆಡಿಎಸ್ ಜತೆ ಬಿಜೆಪಿ ಸೇರಿತು, ಗೆಲುವು ಸಾಧಿಸಲೂ ಯಶಸ್ವಿಯಾಯಿತು. ಮರಿತಿಬ್ಬೇಗೌಡರು ಸರ್ವಾಧಿಕಾರ ಧೋರಣೆಯ ಕಾಂಗ್ರೆಸ್ ಬಿಟ್ಟು ಬಂದಿದ್ದಾರೆ ಎಂದರು. ಈ ಮಾತು ಕಾಂಗ್ರೆಸ್ ಪಕ್ಷದವರನ್ನು ಕೆರಳಿಸಿತು. ಪ್ರಮುಖವಾಗಿ ವೀರಣ್ಣ ಮತ್ತಿಕಟ್ಟಿ ಹಾಗೂ ವಿ.ಎಸ್. ಉಗ್ರಪ್ಪ ಈಶ್ವರಪ್ಪ ವಿರುದ್ಧ ಉರಿದುಬಿದ್ದರು.

ಬಿಜೆಪಿ-ಜೆಡಿಎಸ್‍ನದ್ದು ಅಪವಿತ್ರ ಮೈತ್ರಿ, ಜೆಡಿಎಸ್‍ನವರ ಜಾತ್ಯತೀತತೆ ಜನರಿಗೆ ಅರ್ಥವಾಗುತ್ತದೆ ಎಂದು ಉಗ್ರಪ್ಪ ಹೇಳಿದರೆ, ಕಾಂಗ್ರೆಸ್‍ನವರು ಮುಸ್ಲಿಂ ಲೀಗ್ ಜೊತೆ ಕೈ ಜೋಡಿಸಿರುವುದು ಯಾವ ಜಾತ್ಯತೀತತೆ ಎಂದು ಗೋ. ಮಧುಸೂಧನ್ ಕುಟುಕಿದರು. ಬಹುಮತ ಇಲ್ಲದೇ ಸೋಲುವ ಸಂದರ್ಭದಲ್ಲಿ ಮಾತ್ರ ನಿಮಗೆ ದಲಿತರು ನೆನಪಾಗುತ್ತಾರೆ. ಇಂತಹ ಸಂದರ್ಭದಲ್ಲಿ ದಲಿತರನ್ನು ಚುನಾವಣೆಗೆ ನಿಲ್ಲಿಸುತ್ತೀರಾ ಎಂದು ಈಶ್ವರಪ್ಪ ಕಾಂಗ್ರೆಸ್ ನಿಲುವನ್ನು ಪ್ರಶ್ನಿಸಿದರು.

ನಂತರ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ, ಸಭಾನಾಯಕ ಎಸ್.ಆರ್. ಪಾಟೀಲ್ ಅಭಿನಂದನಾ ನುಡಿಗಳನ್ನಾಡಿದರು. ನಂತರ ದೀರ್ಘವಾಗಿ ಮಾತನಾಡಿದ ಮರಿತಿಬ್ಬೇಗೌಡ, 30 ವರ್ಷದ ರಾಜಕೀಯ ಜೀವನದಲ್ಲಿ ನೋವು ನಲಿವು ಕಂಡಿದ್ದೇನೆ. ಈ ಬಾರಿ ಚುನಾವಣೆ ನಡೆಯುತ್ತದೆ ಎಂದು ಎಣಿಸಿರಲಿಲ್ಲ, ಆಯ್ಕೆಗೆ ಸಹಕರಿಸಿದ ಎಲ್ಲರನ್ನೂ ಸ್ಮರಿಸುವುದಾಗಿ ಹೇಳಿದರು.

ಮರಿತಿಬ್ಬೇಗೌಡರ ಆಯ್ಕೆ ಮುಂದಿನ ರಾಜ್ಯ ರಾಜಕಾರಣದ ದಿಕ್ಸೂಚಿ. ಪ್ರಜಾಪ್ರಭುತ್ವ ರಕ್ಷಣೆಗೆ ಎರಡು ಪಕ್ಷಗಳು ಸೇರಿರುವುದು ಖಂಡಿತವಾಗಿ ಹೊಸ ಬೆಳವಣಿಗೆಯ ಸಂಕೇತ.

ಕೆ.ಎಸ್. ಈಶ್ವರಪ್ಪ, ಪ್ರತಿಪಕ್ಷದ ನಾಯಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!