ಆರ್. ಅಶೋಕ 
ರಾಜಕೀಯ

ಬೆಂಗಳೂರಿಗೆ ನಿಮ್ಮ ಕೊಡುಗೆ ಏನು? ಆರ್.ಅಶೋಕ

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದು ಎರಡು ವರ್ಷ ಕಳೆದಿವೆ. ಈ ಅವಧಿಯಲ್ಲಿ ಬೆಂಗಳೂರಿಗೆ ಕೊಟ್ಟ ಕೊಡುಗೆ ಏನು? ...

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದು ಎರಡು ವರ್ಷ ಕಳೆದಿವೆ. ಈ ಅವಧಿಯಲ್ಲಿ ಬೆಂಗಳೂರಿಗೆ ಕೊಟ್ಟ ಕೊಡುಗೆ ಏನು? ಕಳೆದ 10 ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಬೆಂಗಳೂರಿಗೆ ಕೊಟ್ಟ ಕೊಡುಗೆ ಏನೆಂಬ ನಮ್ಮ ಪ್ರಶ್ನೆಗೆ ಮುಖ್ಯಮಂತ್ರಿಸಿದ್ದರಾಮಯ್ಯ ಉತ್ತರಿಸಲಿ' ಎಂದು ಮಾಜಿ ಡಿಸಿಎಂ, ಶಾಸಕ ಆರ್. ಅಶೋಕ ಸವಾಲೆಸೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಈವರೆಗೆ ಸುಮಾರು ರೂ.45,000 ಕೋಟಿ ಸಾಲ ಮಾಡುವ ಮೂಲಕ ರಾಜ್ಯವನ್ನು ಸಾಲಗಾರರ ಪಟ್ಟಿಯಲ್ಲಿ ಸೇರಿಸಿದೆ. ರಾಜ್ಯ ಸರ್ಕಾರ ದಿವಾಳಿಯಾಗಿರುವುದರಿಂದ ಬೆಂಗಳೂರು ಅಭಿವೃದಿದ್ಧಿಗೆ ಅವರು ಎಲ್ಲಿಂದ ಹಣ ನೀಡಲು ಸಾಧ್ಯ? ಸಿದ್ದರಾಮಯ್ಯ ಎರಡು ವರ್ಷದಿಂದ ನಿದ್ದೆ ಮಾಡುತ್ತಿದ್ದರು ಎಂದು ಆರೋಪಿಸಿದರು. ಅದೇ ರೀತಿ, ನಾವು ಬೆಂಗಳೂರನ್ನು ವಿಭಜನೆ ಮಾಡುತ್ತೇವೆ.ಒಂದು ಮನೆಯಂತಿರುವ ಮನೆಯನ್ನು ಒಡೆಯುತ್ತೇವೆಂದು ಜನರ ಮುಂದೆ ಕಾಂಗ್ರೆಸ್ ನವರು ಹೋಗಲಿ. ವಿಭಜನೆ ವಿಧೇಯಕ ತಂದಾಗಲಂತೂ ಜನರ ಅಭಿಪ್ರಾಯ ಕೇಳಲಿಲ್ಲ, ಈಗಲಾದರೂ ಜನರ ಸಹಮತಿ ಇದೆಯೋ ಇಲ್ಲವೇ ಎಂದು ಕೇಳಿ. ಅದೇ ಚುನಾವಣೆ ವಿಷಯವಾಗಿ ತೀರ್ಮಾನವಾಗಲಿ ಎಂದು ಸವಾಲೆದೆರು.

ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದ ನಗರವಾಗಿ ಇನ್ನಷ್ಟು ಬೆಳೆಯಬೇಕಾದರೆ ಕೇಂದ್ರದಿಂದ ಹೆಚ್ಚು ಅನುದಾನ ಬರಬೇಕಾಗಿದೆ. ಆ ಅನುದಾನ ಬರುವಂತಹ ಪ್ರಯತ್ನವನ್ನು ನಾವು ಮಾಡುತ್ತೇವೆ, ನಮ್ಮ ಬೆಂಗಳೂರು ಬೆಳೆಯಲು ಕೇಂದ್ರದ ಮೇಲೆ ಒತ್ತಡ ಹೇರಿ ವಿಶೇಷ ಅನುದಾನ ಕೊಡುವ ರೀತಿ ಪ್ರಯತ್ನ ಮಾಡುತ್ತೇವೆ. ಈ ಹಿಂದೆ ಪ್ರಯತ್ನ ಮಾಡಿದ್ದಕ್ಕೆ ನಿದರ್ಶನ ಇದೆ ಎಂದರು.

ಕಾಂಗ್ರೆಸ್‍ನವರು ಚುನಾವಣೆಗೆ ಹೆದರಿ ಪಲಾಯನ ಮಾಡುತ್ತಿದ್ದರು. ಅವರನ್ನು ಹಿಡಿದು ಕಾನೂನು ಮುಖಾಂತರ ಕಟ್ಟಿ ಹಾಕಿ ಚುನಾವಣೆ ಅಖಾಡಕ್ಕೆ ತಂದು ನಿಲ್ಲಿಸಿದ್ದೇವೆ. ಇವತ್ತು ಗೆಲುವು ನಮ್ಮದು, ಬೆಂಗಳೂರು ಜನ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ.
- ಆರ್. ಅಶೋಕ, ಬಿಜೆಪಿ ಚುನಾವಣೆ ಉಸ್ತುವಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ