ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ) 
ರಾಜಕೀಯ

ಪ್ರಧಾನಿ ವಿರುದ್ದ ಸಿಎಂ ಆಕ್ರೋಶ

ಮಹದಾಯಿ ವಿವಾದದ ಬಗ್ಗೆ ಚರ್ಚಿಸಲು ರಾಜ್ಯದ ಸರ್ವಪಕ್ಷ ನಿಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ಸಮಯಾವಕಾಶ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ...

ಬೆಂಗಳೂರು: ಮಹದಾಯಿ ವಿವಾದದ ಬಗ್ಗೆ ಚರ್ಚಿಸಲು ರಾಜ್ಯದ ಸರ್ವಪಕ್ಷ ನಿಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ಸಮಯಾವಕಾಶ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಕಳಸಾಬಂಡೂರಿ ಹೋರಾಟಗಾರರು, ಜನಪ್ರತಿನಿಧಿಗಳು, ಮಾಜಿ ಶಾಸಕರು ಹಾಗೂ ಮಠಾಧೀಶರ ಜತೆ ಕಳಸಾ ಬಂಡೂರಿ ವಿವಾದ ಸಂಬಂಧ ಸುದೀರ್ಘ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ಸರ್ವಪಕ್ಷ ನಿಯೋಗಕ್ಕೆ ಸಮಯಾವಕಾಶ ನೀಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ನಿರಂತರ ಮನವಿ ಮಾಡುತ್ತಿದ್ದರೂ ನಿರ್ಲಕ್ಷ ಮಾಡುತ್ತಿರುವುದು ನೋವು ತಂದಿದೆ ಎಂದು ಕಿಡಿಕಾರಿದ್ದಾರೆ.

ಪ್ರಧಾನಿ ಅವರ ಈ ನಿರ್ಧಾರ ನನಗೆ ನಿರಾಸೆ ಜತೆ ನೋವು ತಂದಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಸಮಸ್ಯೆಗಳಿಗೆ ಪ್ರಧಾನ ಮಂತ್ರಿಗಳು ತಕ್ಷಣ ಸ್ಪಂದಿಸಬೇಕು. ಆದರೆ, ಅವರು ಏಕೆ ನಮ್ಮ ಮೊರೆ ಕೇಳುತ್ತಿಲ್ಲ. ಅಹವಾಲು ಆಲಿಸಲು ಮುಂದಾಗುತ್ತಿಲ್ಲ ಎಂಬುದೇ ಅರ್ಥವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಚುನಾವಣೆ ಬಳಿಕ ಆ.23 ರಂದು ರಾಜ್ಯ ಹೋರಾಟ ಹೇಗಿರಬೇಕೆಂಬುದನ್ನು ನಿರ್ಧರಿಸಲು ಸರ್ವಪಕ್ಷಗಳ ಸಭೆ ಕರೆಯುತ್ತೇನೆ. ವಿಧಾನಮಂಡಲದ ಉಭಯ ಸದನಗಳ ಮಂಡಲದ ಉಭಯ ಸದನಗಳ ಪ್ರಮುಖರು, ಎಲ್ಲ ಸಂದಸರನ್ನೂ ಸಭೆಗೆ ಆಹ್ವಾನಿಸುತ್ತೇನೆ. ರಾಜ್ಯದ ಕಾನೂನು ತಜ್ಞರು ಮತ್ತು ತಾಂತ್ರಿಕ ಪರಿಣಿತರಿಂದ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.

ಮಹದಾಯಿ ನದಿಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ 7 ಟಿಎಂಸಿ ನೀರನ್ನು ಕಳಸಾ ಬಂಡೂರಿ ಯೋಜನೆಗೆ ತಿರುವು ಮಾಡುವಂತೆ ಆಗ್ರಹಿಸಿ ಜುಲೈ 16ರಂದು ಹೋರಾಟ ಆರಂಭವಾಯಿತು. ಇಂದಿ ನಿಂದಲೂ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಜುಲೈ 27ರಂದೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ನಾನು ರಾಜ್ಯದ ಸರ್ವಪಕ್ಷ ನಿಯೋಗಕ್ಕೆ ಸಮಯ ನಿಗದಿ ಮಾಡುವಂತೆ ಆಗ್ರಹಿಸಿದ್ದೆ. ಕೇಂದ್ರದ ಸಚಿವರಾದ ಅನಂತ್‍ಕುಮಾರ್ ಹಾಗೂ ಡಿ.ವಿ.ಸದಾನಂದಗೌಡ ಅವರ ಜತೆ ಎರಡು ಬಾರಿ ಚರ್ಚಿಸಿದ್ದೆ. ನನ್ನ ಕಚೇರಿಯಿಂದ ಪ್ರಧಾನಿ ಕಾರ್ಯಾಲಯದ ಜತೆ ಸತತ ಸಂಪರ್ಕ ಸಾ„ಸಿ ಸಮಯ ನಿಗದಿಗೆ ಪ್ರಯತ್ನ ಮಾಡಿದೆ. ಮುಖ್ಯ ಕಾರ್ಯದರ್ಶಿ ಸಹ ದೆಹಲಿಗೆ ತೆರಳಿ ಸಾಕಷ್ಟು ಪ್ರಯತ್ನ ನಡೆಸಿದರು. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರೂ ಪ್ರಯತ್ನಿಸಿದ್ದಾರೆ. ಆದಾಗಿಯೂ ಆಗಸ್ಟ್ 13ರೊಳಗೆ ಪ್ರಧಾನಿ ಜತೆ ಚರ್ಚೆಗೆ ಸಮಯ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆರೋಪಿಸಲಾರೆ: ಪ್ರಧಾನಿ ಅವರು ರಾಜಕೀಯ ಕಾರಣಕ್ಕಾಗಿ ನಮಗೆ ಸಮಯ ಕೊಟ್ಟಿಲ್ಲ ಎಂಬ ಆರೋಪವನ್ನು ನಾನು ಮಾಡಲಾರೆ. ಆದರೆ, ಒಕ್ಕೂಟ ವ್ಯವಸ್ಥೆಯಲ್ಲಿ ಇಂಥ ಮನವಿಗಳನ್ನು ಸಲ್ಲಿಸಿದಾಗ ಪ್ರಧಾನಿಗಳು ಸಮಯಾವಕಾಶ ನೀಡಲೇಬೇಕು. ಕುಡಿಯುವ ನೀರಿನ ಅಗತ್ಯಕ್ಕಾಗಿ ಮಹದಾಯಿಯಿಂದ ಹೆಚ್ಚುವರಿಯಾಗಿ 7.45 ಟಿಎಂಸಿ ನೀರನ್ನು ಹರಿಸುವುದು ಅನಿವಾರ್ಯ. ಆ ಭಾಗದ ಎಲ್ಲ ರೈತರು, ಮಠಾಧೀಶರು, ಸಂಘಟನಾ ಮುಖ್ಯಸ್ಥರಲ್ಲಿ ನಾನು ಪ್ರಾರ್ಥನೆ ಮಾಡುವುದಿಷ್ಟೆ, `ಪ್ರತಿಭಟನೆ ಕೈ ಬಿಡಿ ನಾವು ಮತ್ತು ನಮ್ಮ ಸರ್ಕಾರ ನಿಮ್ಮ ಜತೆ ಇದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!