ಮುಖ್ಯಮಂತ್ರಿ ಸಿದ್ದರಾಮಯ್ಯ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಅಂತೂ ಇಂತೂ ಬೆಂಗಳೂರು ನಗರವನ್ನು ಪ್ರತಿನಿಧಿಸುವ ರಾಜ್ಯ ಸರ್ಕಾರದ ಐವರು ಸಚಿವರು ಬಿಜೆಪಿಯ ಅಕ್ರಮದ ಬಗ್ಗೆ ಮಾತನಾಡಿದ್ದಾರೆ. ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕಾರವಧಿಯಲ್ಲಿ ನಡೆದ ಐವತ್ತು ಹಗರಣಗಳು ಮತ್ತು ಆಕ್ಷೇಪಾರ್ಹ ಅಂಶಗಳನ್ನು ಸಂಗ್ರಹಿಸಿ `ಮಹಾಶಯರೇ ಬೆಂಗಳೂರಿಗೆ ನೀವೇನು ಕೊಡುಗೆ ಕೊಟ್ಟಿದ್ದೀರಿ?' ಎಂಬ ಪ್ರಶ್ನೆಯೊಂದಿಗೆ ಪಂಚ ಸಚಿವರು ಬಿಜೆಪಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ, ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್, ರೋಷನ್ ಬೇಗ್, ದಿನೇಶ್ ಗುಂಡೂರಾವ್ ಹಾಗೂ ಕೃಷ್ಣ ಬೈರೇಗೌಡ ಬಿಜೆಪಿ ವಿರುದಟಛಿ ಆರೋಪ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಪ್ರಮುಖ ಆರೋಪಗಳೇನು?: ಜೆಡಿಎಸ್ ಜತೆಗಿನ ಸಮ್ಮಿಶ್ರ ಸರ್ಕಾರದ ಅಧಿಕಾರಾವಧಿ ಹಾಗೂ ಕಳೆದ ಐದು ವರ್ಷದ ಬಿಜೆಪಿ ಆಡಳಿತ ಸೇರಿ 50 ಪ್ರಮುಖ ವಿಚಾರಗಳನ್ನು ಈ
ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಅವುಗಳ ಸಂಕ್ಷೀಪ್ತ ವಿವರ ಹೀಗಿದೆ:
- ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 73 ಕಾಮಗಾರಿಗಳಿಗೆ ರು.1.10 ಕೋಟಿ ಮಂಜೂರಾಗಿದ್ದು, ಯಾವುದಕ್ಕೂ ಅನುಮೋದನೆ ನೀಡದೇ ವರ್ಕ್ ಕೋಡ್ ನೀಡಿ ಬಿಲ್ ಮಂಡಿಸಿ ಹಣ ಪಡೆದಿರುವುದು.
- 2009-10ನೇ ಸಾಲಿನಲ್ಲಿ ರು.4,280 ಕೋಟಿ ವರ್ಕ್ ಕೋಡ್ ಏರಿಕೆಯಾಗಿದ್ದು, ಇದು ಬಿಜೆಪಿಯ ದುರಾಡಳಿತ, ಅಕೃತ್ಯಕ್ಕೆ ನೀಡಿದ ಪ್ರೋತ್ಸಾಹ ಧನ.
- 230 ರಸ್ತೆ ನಿರ್ಮಾಣದ ಹೆಸರಿನಲ್ಲಿ ರು.560 ಕೋಟಿ ನಷ್ಟ ಮಾಡಿರುವುದು.
- ಕಸ ನಿರ್ವಹಣೆ ಹೆಸರಿನಲ್ಲಿ ವಾರ್ಷಿಕ ರು.350 ಕೋಟಿ ಅಪವ್ಯಯ. ಇದರಿಂದ ಬೆಂಗಳೂರು ಗಾರ್ಬೇಜ್ ಸಿಟಿಯಾಗಿ ಪರಿವರ್ತನೆ.
- ನಗರದಲ್ಲಿ 20,000 ಅನಧಿಕೃತ ಜಾಹೀರಾತು ಫಲಕಗಳಿದ್ದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು.
- ಅಕ್ರಮ-ಸಕ್ರಮ ಜಾರಿಯಾಗುವವರೆಗೆ ಖಾತಾ ನೋಂದಣಿ ಮಾಡಬಾರದೆಂಬ ನಿಯಮವಿದ್ದರೂ ಮಹಾದೇವಪುರ, ಬೊಮ್ಮನಹಳ್ಳಿ, ಯಲಹಂಕ, ದಾಸರಹಳ್ಳಿ ಮತ್ತು ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶುಲ್ಕ ಕಟ್ಟದೇ ಖಾತಾ ಪರಿವರ್ತನೆ.
- ಬಿಜೆಪಿಯ ಕೆಲ ಮೇಯರ್‍ಗಳು ಹಾಗೂ ಸದಸ್ಯರು ಸರ್ಕಾರಿ ಜಮೀನನ್ನು ಅಕ್ರಮವಾಗಿ ಪಡೆದಿರುವುದು.
- ಬಿಬಿಎಂಪಿ ತೋಟಗಾರಿಕೆ ಇಲಾಕೆಯಲ್ಲಿ ರು.108 ಕೋಟಿ ಅವ್ಯವಹಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics