ರಾಜಕೀಯ

ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಪ್ರಧಾನಿ ಮೌನ ಉದ್ದೇಶಪೂರ್ವಕ: ಶಶಿ ತರೂರ್

Srinivas Rao BV

ನವದೆಹಲಿ: ಕೇಂದ್ರ ಸಚಿವರು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದರು ಮೌನ ವಹಿಸಿರುವ ಪ್ರಧಾನಿಯನ್ನು ಕಾಂಗ್ರೆಸ್ ನಾಕಯಕ ಶಶಿ ತರೂರ್ ಪ್ರಶ್ನಿಸಿದ್ದಾರೆ.
ನವದೆಹಲಿಯ ತಾಜ್ ಹೊಟೆಲ್ ನಲ್ಲಿ ಆಯೋಜಿಸಲಾಗಿದ್ದ ಜೈಪುರ ಸಾಹಿತ್ಯ ಹಬ್ಬ ಆರ್ಯಕ್ರಮದಲ್ಲಿ ಮಾತನಾಡಿದ ಶಶಿ ತರೂರ್  ಹಲವು ಬಿಜೆಪಿ ನಾಯಕರು, ಕೇಂದ್ರ ಸಚಿವರ ಹೇಳಿಕೆಗಳು ದೇಶದಲ್ಲಿ ಅಪಾಯಕಾರಿ ವಾತಾವರಣ ನಿರ್ಮಿಸಿದೆ. ಪ್ರಧಾನಿ ನರೇಂದ್ರ ಮೋದಿ, ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿರುವ ಸಂಸದ, ಸಚಿವರ ರಾಜೀನಾಮೆ ಪಡೆಯಬಹುದಿತ್ತು. ಆದರೆ ಉದ್ದೇಶಪೂರ್ವಕವಾಗಿಯೆ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. 
ವಿವಾದಾತ್ಮಕ ಹೇಳಿಕೆಗಳು ಒಪ್ಪಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಅಂತಹ ನಾಯಕರಿಂದ ರಾಜೀನಾಮೆ ಪಡೆಯಬಹುದಿತ್ತು. ಆದರೆ ಮೋದಿ ಮೌನಕ್ಕೆ ಶರಣಾಗಿದ್ದಾರೆ. ರಾಜಕೀಯ ತಂತ್ರಗಾರಿಕೆ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದಾರೆ. ಕೇಂದ್ರ ಸರ್ಕಾರ ವೈವಿಧ್ಯತೆಯನ್ನು ಗೌರವಿಸುವುದು ಹಾಗೂ ಸ್ವೀಕರಿಸುವಂತೆ ದೇಶದ ಜನರಲ್ಲಿ ಒಗ್ಗಟ್ಟು ಮುಡಿಸಬೇಕು ಎಂದು ಶಶಿ ತರೂರ್ ಆಗ್ರಹಿಸಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಆಡ್ವಾಣಿ ಆಪ್ತರಾಗಿದ್ದ ಸುಧೀಂದ್ರ ಕುಲಕರ್ಣಿ, ಬಿಜೆಪಿಯಲ್ಲಿ ಜಾತ್ಯಾತೀತತೆಗೆ ಬೆಲೆ ಇಲ್ಲದಿರುವುದೇ ತಾವು ಪಕ್ಷ ತೊರೆಯಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ.

SCROLL FOR NEXT