ದೇವದುರ್ಗ: ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರ ಮಿದುಳಿಗೂ ನಾಲಿಗೆಗೆ ಲಿಂಕ್ ತಪ್ಪಿದೆ. ಬಿಜೆಪಿಯವರ ಸುಳ್ಳು ಮಾತಿಗೆ ಕಿವಿಗೊಡಬೇಡಿ'ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಬಸವರಾಜ ಪಾಟೀಲ ಇಟಗಿ ಪರ ದೇವದುರ್ಗದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಲು ಸಿದ್ದರಾಮಯ್ಯ ಎದ್ದು ನಿಲ್ಲುತಿದ್ದಂತೆ ಕಪ್ಪು ಬಾವುಟ ಪ್ರದರ್ಶಿಸಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಧಿಕ್ಕಾರ ಕೂಗಿದರು. ಕೂಡಲೇ ಪ್ರತಿಭಟನಾಕಾರರ ಗುಂಪನ್ನು ಪೊಲೀಸರು ಚದುರಿಸಿದರು.
ಐಐಟಿ ತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರವೇ ಕಾರ್ಯಕರ್ತರು ಗುರುವಾರ ಕಪ್ಪು ಬಾವುಟ ಪ್ರದರ್ಶಿಸಿದರು.
ಐಐಟಿ ಕೈ ತಪ್ಪಲು ಕಾರಣರಾದವರ ವಿರುದ್ಧ ಘೋಷಣೆ ಕೂಗಿ ಎಂದ ಸಿದ್ದರಾಮಯ್ಯ, 'ಬಿಜೆಪಿ ಸುಳ್ಳುಗಳನ್ನು ಹರಿಬಿಡುತ್ತಿದೆ. ಇದರ ಬಗ್ಗೆ ಗಮನ ಹರಿಸ ಬೇಡಿ,' ಎಂದು ಸಿದ್ದರಾಮಯ್ಯ ಹೇಳಿದರು.