ಸಾಂದರ್ಭಿಕ ಚಿತ್ರ 
ರಾಜಕೀಯ

ಪರಿಷತ್ ಚುನಾವಣೆ ಫಲಿತಾಂಶ: 'ಕೈ' ಜಯಭೇರಿ

ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯಾಗಿದ್ದ ರಾಜ್ಯ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಬುಧವಾರ...

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯಾಗಿದ್ದ ರಾಜ್ಯ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಬುಧವಾರ ಬೆಳಗ್ಗೆ ಆರಂಭವಾಗಿದ್ದು ಹಲವು ಕ್ಷೇತ್ರಗಳ ಫಲಿತಾಂಶ ಹೊರ ಬಿದ್ದಿದೆ. ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಡಿ.27ರಂದು ಮತದಾನ ನಡೆದಿತ್ತು.

ಈಗಾಗಲೇ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಬಿಜೆಪಿ ನಾಲ್ಕು ಹಾಗೂ ಜೆಡಿಸ್ 1 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬೆಂಗಳೂರು ನಗರ ವಿಧಾನಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಗೆಲುವು ಸಾಧಿಸುವುದರೊಂದಿಗೆ ಆಡಳಿತರೂಢ ಕಾಂಗ್ರೆಸ್ ಪಕ್ಷ ಶುಭಾರಂಭ ಮಾಡಿದೆ. ಇನ್ನೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ರವಿ ಗೆಲುವು ಸಾಧಿಸಿದ್ದಾರೆ.

ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರ(ದ್ವಿಸದಸ್ಯ)ದಲ್ಲಿ ಎರಡನೆ ಸ್ಥಾನಕ್ಕೆ ನಡೆದ ಎರಡನೆ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಈಗಾಗಲೇ ಗೆಲುವು ಸಾಧಿಸಿದ್ದಾರೆ. ಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಪಿ.ಸುನೀಲ್ ಸುಬ್ರಮಣಿ 683 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ.
 
ಧಾರವಾಡ ದ್ವಿಸದಸ್ಯ ಕ್ಷೇತ್ರದ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿಯ ಪ್ರದೀಪ್‌ ಶೆಟ್ಟರ್‌ ಹಾಗೂ ಕಾಂಗ್ರೆಸ್‌ನ ಶ್ರೀನಿವಾಸ್‌  ಮಾನೆ ಜಯಗಳಿಸಿದ್ದಾರೆ.

ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಅವರು 3607 ಮತಗಳನ್ನು ಪಡೆದರೆ, ಬಿಜೆಪಿಯ ಪ್ರದೀಪ್‌ ಶೆಟ್ಟರ್‌ 3254 ಮತಗಳನ್ನು ಪಡೆದು ಜಯಗಳಿಸಿದರು.

ಬೀದರ್‌ನ ಕಾಂಗ್ರೆಸ್ ಅಭ್ಯರ್ಥಿ ವಿಜಯಸಿಂಗ್‌ ಅವರು 2,329 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ. ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿ ವಿವೇಕ್ ರಾವ್ ಪಾಟೀಲ್ ಜಯ ಸಾಧಿಸಿದ್ದಾರೆ.

ರಾಯಚೂರು–ಕೊಪ್ಪಳ ಕ್ಷೇತ್ರದ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಕಾಂಗ್ರೆಸ್‌ನ ಬಸವರಾಜ ಪಾಟೀಲ ಇಟಗಿ  ಗೆಲುವು ಗಳಿಸಿದ್ದಾರೆ

ವಿಜಯಪುರ-ಬಾಗಲಕೋಟೆ ಮೊದಲ ಪ್ರಾಶಸ್ಱದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್. ಪಾಟೀಲ್ ಗೆಲುವು, ಎರಡನೇ ಪ್ರಾಶಸ್ಱದಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ ಬಸವರಾಜ ಪಾಟೀಲ್ ಯತ್ನಾಳ್ ಗೆದ್ದಿದ್ದು, ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಮೈಸೂರು- ಚಾಮರಾಜನಾಗರ ದ್ವಿಸದಸ್ಯ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಧರ್ಮಸೇನಾಗೆ ಗೆಲುವು ಸಾಧಿಸಿದ್ದಾರೆ. ಮೈಸೂರು ಕ್ಷೇತ್ರದಿಂದ ಜೆಡಿಎಸ್ ನ ಸಂದೇಶ್ ನಾಗರಾಜ್ ಗೆಲುವು ಸಾಧಿಸಿದ್ದಾರೆ.

ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಎ. ಗೋಪಾಲ ಸ್ವಾಮಿ ಜಯ, ಜೆಡಿಎಸ್​ನ ಪಟೇಲ್ ಶಿವರಾಂಗೆ ಸೋಲನುಭವಿಸಿದ್ದಾರೆ. ಚಿತ್ರದುರ್ಗ- ಕಾಂಗ್ರೆಸ್ ಅಭ್ಯರ್ಥಿ ರಘು ಆಚಾರ್ ಗೆಲುವು ಸಾಧಿಸಿದ್ದಾರೆ. ಬಳ್ಳಾರಿಯಲ್ಲಿ ಕಾಂಗ್ರೆಸ್​ನ ಕೆ.ಸಿ. ಕೊಂಡಯ್ಯ ಜಯ ಸಾಧಿಸಿದ್ದಾರೆ.
ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಆರ್. ಮನೋಹರ್ ಹಾಗೂ ಮಂಡ್ಯದಲ್ಲಿ ಜೆಡಿಎಸ್ ನ ಅಪ್ಪಾಜಿ ಗೌಡ ಜಯ ಸಾಧಿಸಿದ್ದಾರೆ.

ಜಯ ಸಾಧಿಸಿದವರು
  • ಬೆಂಗಳೂರು ಗ್ರಾಮಾಂತರ: ಎಸ್.ರವಿ (ಕಾಂಗ್ರೆಸ್)
  •  ಬೆಂಗಳೂರು ನಗರ: ಎಂ.ನಾರಾಯಣಸ್ವಾಮಿ (ಕಾಂಗ್ರೆಸ್)
  •  ಉತ್ತರ ಕನ್ನಡ: ಎಸ್.ಎಲ್.ಘೋಟ್ನೇಕರ್ (ಕಾಂಗ್ರೆಸ್)
  •  ದಕ್ಷಿಣ ಕನ್ನಡ: ಕೆ.ಪ್ರತಾಪ್‌ಚಂದ್ರ ಶೆಟ್ಟಿ (ಕಾಂಗ್ರೆಸ್)
  •  ದಕ್ಷಿಣ ಕನ್ನಡ: ಕೋಟಾ ಶ್ರೀನಿವಾಸ ಪೂಜಾರಿ (ಬಿಜೆಪಿ
  •  ಕೊಡಗು: ಎಂ.ಪಿ.ಸುನೀಲ್ ಸುಬ್ರಮಣಿ (ಬಿಜೆಪಿ
  •  ಚಿಕ್ಕಮಗಳೂರು: ಎಂ.ಕೆ.ಪ್ರಾಣೇಶ್ (ಬಿಜೆಪಿ)
  •  ಧಾರವಾಡ ದ್ವಿಸದಸ್ಯ ಕ್ಷೇತ್ರ:  ಶ್ರೀನಿವಾಸ ಮಾನೆ(ಕಾಂಗ್ರೆಸ್‌), ಪ್ರದೀಪ್‌ ಶೆಟ್ಟರ್( ಬಿಜೆಪಿ) 
  • ಬೀದರ್‌: ವಿಜಯಸಿಂಗ್‌( ಕಾಂಗ್ರೆಸ್ )
  • ಬೆಳಗಾವಿ: ವಿವೇಕ್ ರಾವ್ ಪಾಟೀಲ್ (ಪಕ್ಷೇತರ ) ಮಹಾಂತೇಶ್ ಕವಟಗಿ ಮಠ್  (ಬಿಜೆಪಿ)
  • ರಾಯಚೂರು–ಕೊಪ್ಪಳ: ಬಸವರಾಜ ಪಾಟೀಲ ಇಟಗಿ 
  • ಮೈಸೂರು- ಚಾಮರಾಜನಾಗರ ದ್ವಿಸದಸ್ಯ ಕ್ಷೇತ್ರ: ಧರ್ಮಸೇನಾ (ಕಾಂಗ್ರೆಸ್)
  • ಹಾಸನ- ಎಂ.ಎ. ಗೋಪಾಲ ಸ್ವಾಮಿ(ಕಾಂಗ್ರೆಸ್ )
  • ಚಿತ್ರದುರ್ಗ- ರಘು ಆಚಾರ್(ಕಾಂಗ್ರೆಸ್ )
  • ಬಳ್ಳಾರಿ- ಕೆ.ಸಿ. ಕೊಂಡಯ್ಯ (ಕಾಂಗ್ರೆಸ್) 
  • ಕೋಲಾರ-   ಸಿ.ಆರ್. ಮನೋಹರ್(ಜೆಡಿಎಸ್)
  • ಮಂಡ್ಯ- ಅಪ್ಪಾಜಿಗೌಡ (ಜೆಡಿಎಸ್)
  • ಮೈಸೂರು- ಸಂದೇಶ್ ನಾಗರಾಜ್ (ಜೆಡಿಎಸ್)
  • ಶಿವಮೊಗ್ಗ- ಪ್ರಸನ್ನ ಕುಮಾರ್ (ಕಾಂಗ್ರೆಸ್)
  • ಕಲಬುರಗಿ- ಬಿಜಿ ಪಾಟೀಲ್( ಬಿಜೆಪಿ)
  • ವಿಜಯಾಪುರ- ಎಸ್ ಆರ್ ಪಾಟೀಲ್( ಕಾಂಗ್ರೆಸ್)
  • ತುಮಕೂರು- ಬೆಮೆಲ್ ಕಾಂತರಾಜು(ಜೆಡಿಎಸ್ )

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

SCROLL FOR NEXT