ರಾಜಕೀಯ

ತಾಲೂಕು ರಚನೆ ಘೋಷಣೆಗೆ ಈ ಬಜೆಟ್ನಲ್ಲಿ ರೂಪ

Rashmi Kasaragodu

ವಿಧಾನಪರಿಷತ್ತು: ಬಿಜೆಪಿ ಸರ್ಕಾರದ ಕೊನೆ ಅವಧಿಯಲ್ಲಿ ಘೋಷಣೆಯಾಗಿದ್ದ 43 ನೂತನ ತಾಲೂಕುಗಳಿಗೆ ಕಾಯಕಲ್ಪ ಕೊಡುವ ಕಾರ್ಯ ಮುಂಬರುವ ಬಜೆಟ್ನಲ್ಲಿ ಪ್ರಸ್ತಾಪವಾಗಲಿದೆ. ಸದಸ್ಯ ಆರ್.ಎಸ್.ಚೌಡರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್, ಜಗದೀಶ್ ಶೆಟ್ಟರ್ ಅವಧಿ ಯಲ್ಲಿ 43ನೂತನ ತಾಲೂಕುಗಳ ಘೋಷಣೆ ಮಾಡಲಾಯಿತು. ಆದರೆ, ಅಗತ್ಯ ಹಣಕಾಸು ನೆರವು ನೀಡಲಿಲ್ಲ. ಹೀಗಾಗಿ ಘೋಷಣೆಯಾಗಿಯೇ ಉಳಿಯಿತು. ತಾಲೂಕು ರಚನೆ ಸಂಬಂಧ ನಾಲ್ಕು ಸಮಿತಿಗಳು ನೀಡಿದ್ದ ವರದಿಯಲ್ಲಿ 38 ನೂತನ ತಾಲೂಕುಗಳ ಹೆಸರು ಒಂದಿಲ್ಲೊಂದು ವರದಿಯಲ್ಲಿ ಬಂದಿದೆ. ಆದರೆ, ಐದು ನೂತನ ಪ್ರಸ್ತಾಪಗಳು ಯಾವುದೇ ವರದಿಯಲ್ಲಿ ಇಲ್ಲ. ಇದನ್ನು ಏನು ಮಾಡಬೇಕು ಎಂದು ತೀರ್ಮಾನವಾಗಬೇಕು. ಒಂದು ತಾಲೂಕು ರಚನೆಯಾದರೆ ಅಧಿಕಾರಿ ನೇಮಕ, ವಾಹನ, ಕಟ್ಟಡ, ವಸತಿ ಗೃಹ ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ಈಗ 25 ಕೋಟಿಯಾದರೂ ಬೇಕಾಗಬಹುದು. ಹಂತಹಂತವಾಗಿ ನೂತನ ತಾಲೂಕುಗಳನ್ನು ಆಯ್ಕೆ  ಮಾಡಿ ಹಣ ಬಿಡುಗಡೆ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂದರು.

SCROLL FOR NEXT