ರಾಜಕೀಯ

ಪ್ರತ್ಯೇಕ ರಾಜ್ಯ ನನ್ನ ಉದ್ದೇಶ ಅಲ್ಲ: ಶಾಸಕ ನಡಹಳ್ಳಿ ಯೂಟರ್ನ್

Lingaraj Badiger

ಬೆಳಗಾವಿ: ಪ್ರತ್ಯೇಕ ರಾಜ್ಯದ ಬೇಡಿಕೆ ಹಾಗೂ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ತಮ್ಮದೇ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರು ಇದೀಗ ಯೂಟರ್ನ್ ಹೊಡಿದ್ದಾರೆ.

ಈ ಕುರಿತು ಇಂದು ವಿಧಾನಸಭೆಯಲ್ಲಿ ಸ್ಪಷ್ಟನೆ ನೀಡಿದ ದೇವರಹಿಪ್ಪರಗಿಯ ಶಾಸಕ, ಪ್ರತ್ಯೇಕ ರಾಜ್ಯ ನನ್ನ ಉದ್ದೇಶ ಅಲ್ಲ. ತಾರತಮ್ಯದ ವಿರುದ್ಧ ಹಾಗೂ ಅಖಂಡ ಕರ್ನಾಟಕದ ಪರವಾಗಿ ನನ್ನ ಹೋರಾಟ ಎಂದಿದ್ದಾರೆ.

ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರೋಧಿ ಅಲ್ಲ. ನನ್ನ ಮಾತಿನಿಂದ ಸಿಎಂಗೆ ನೋವಾಗಿದ್ದರೆ ಕ್ಷಮೆ ಕೇಳುವೆ ಎಂದು ನಡಹಳ್ಳಿ ಹೇಳಿದ್ದಾರೆ.

ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿದ್ದ ಶಾಸಕ ನಡಹಳ್ಳಿ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದಿಂದ ಅಮಾನತು ಮಾಡಲಾಗಿದೆ. ಅಲ್ಲದೆ ನಡಹಳ್ಳಿಯನ್ನು ಪಕ್ಷದಿಂದಲೇ ಉಚ್ಚಾಟಿಸುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಶಿಫಾರಸು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ನಡಹಳ್ಳಿ ಪ್ರತ್ಯೇಕ ರಾಜ್ಯ ನನ್ನ ಉದ್ದೇಶ ಅಲ್ಲ, ತಾರತಮ್ಯದ ವಿರುದ್ಧ ನನ್ನ ಹೋರಾಟ ಎಂದು ಹೇಳುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಯತ್ನ ಮಾಡಿದ್ದಾರೆ.

SCROLL FOR NEXT