ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಮುಖ್ಯಮಂತ್ರಿಗೆ ತಕ್ಕ ಉತ್ತರ ನೀಡಿ ಜೆಡಿಎಸ್ ಬದುಕಿದೆಯೇ ಇಲ್ಲವೇ ಎಂದು ತೋರಿಸುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣಾ ಗಿಮಿಕ್ ಮನಮಗೂ ಗೊತ್ತಿದೆ. ಯುದಟಛಿಕ್ಕೆ ಬರಲಿ, ಆಗ ತಕ್ಕ ಉತ್ತರ ನೀಡುತ್ತೇವೆ. ಜೆಡಿಎಸ್ ಕಚೇರಿ ಕಿತ್ತು ಕೊಂಡು ಪಕ್ಷವನ್ನು ಮುಗಿಸಿ ಬಿಡುತ್ತೇನೆ ಎಂದು ಬೀಗುತ್ತಿದ್ದಾರೆ. ಆದರೆ, ಕಚೇರಿ ತೊರೆದ ಪಕ್ಷ ಇನ್ನೂ ಬದುಕಿದೆ. ಜೆಡಿಎಸ್ ಜೀವಂತವಾಗಿದೆ ಎಂದು ಜನ ಗ್ರಾಪಂ ಚುನಾವಣೆಯಲ್ಲಿ ತೋರಿಸಿದ್ದಾರೆ.
ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ತಕ್ಕ ಉತ್ತರ ನೀಡುತ್ತೇವೆ. ನಮ್ಮ ಪಕ್ಷ ರಾಜ್ಯ, ದೇಶ ಆಳಿರುವ ಅನುಭವ ಹೊಂದಿದೆ. ಚುನಾವಣೆಯಲ್ಲಿ ಏನೆಂದು ತೋರಿಸುತ್ತೇವೆ ಎಂದು ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಕಳಪೆ ಸಾಧನೆ ಮÁಡಿದೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದರು.
ನಾನು, ಕುಮಾರಸ್ವಾಮಿ ಸೇರಹಿದಂತೆ ಯಾರೂ ದುಡ್ಡಿನ ಮೂಟೆ ಹೊತ್ತುಕೊಂಡು ಹೋಗಿ ಜನರಿಗೆ ನೀಡಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಸಲಿಲ್ಲ. ಆಯಾ ಭಾಗದ ಶಾಸಕರು, ಕಾರ್ಯಕರ್ತರು ದುಡಿದಿದ್ದಾರೆ. ಜನ ಸ್ವಯಂ ಪ್ರೇರಿತವಾಗಿ ಪಕ್ಷ ಬೆಂಬಂಲಿಸಿದ್ದಾರೆ. ದುಡ್ಡಿನ ಮೂಟೆ ಹೊತ್ತೊಯ್ದವರು ಯಾರೆಂದು ಜನರಿಗೆ ಗೊತ್ತಿದೆ.
ಜೆಡಿಎಸ್ ನಾಶ ಮಾಡುತ್ತೇವೆ ಎಂದವರಿಗೆ ಜನ ಪಾಠ ಕಲಿಸುತ್ತಾರೆ. ಗ್ರಾಪಂ ಚುನಾವಣೆಯಲ್ಲಿ 34 ಸಾವಿರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಉ ಗೆದ್ದಿದ್ದಾರೆ ಎಂದು ಸಿಎಂ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಇನ್ನುಳಿದ 20 ಸಾವಿರ ಗ್ರಾ.ಪಂ ಸದ್ಯರು ಯಾವ ಪಕ್ಷದವರು? ಕಚೇರಿ ಕಿತ್ತುಕೊಂಡರೇನು ಪಕ್ಷ ನಾಶವಾಗಲಿಲ್ಲ. ಬಾಡಿಗೆಗೆ ಶೆಡ್ಡು ಹಾಕಿಕೊಂಡು ಪಕ್ಷ ಕಟ್ಟುತ್ತಿದ್ದೇವೆ ಎಂದರು.
ಚುನಾವಣೆ ಬಂದಾಗ ನೆನಪಾಯ್ತೇ?
ಇಷ್ಟು ದಿನ ಬೆಂಗಳೂರನ್ನು ಮರೆತಿದ್ದ ಸಿಎಂ ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದ್ದಂತೆ ನಗರ ಪ್ರದಕ್ಷಿಣ ಆರಂಭಿಸಿದ್ದಾರೆ. ಈಗ ಅವರಿಗೆ ಪ್ರಜೆಗಳ ನೆನಪಾಗಿದ್ದು, ಈ ಮೂಲಕ ಜನರನ್ನು ಮರುಳು ಮಾಡಲು ಮುಂದಾಗಿದ್ದಾರೆ. ಇಷ್ಟು ದಿನ ಇವರು ಎಲ್ಲಿ ಹೋಗಿದ್ದರು ಎಂದು ಹೇಳಬೇಕು? ಚುನಾವಣೆ ಸಮೀಪಿಸುತ್ತಿದ್ದಂತೆ ನಗರ ಪ್ರದಕ್ಷಿಣೆ ಮಾಡುವುದು, ನೂರಾರು ಕೋಟಿ ಹಣ ಬಿಡುಗಡೆ ಮಾಡುವುದು ಎಲ್ಲವೂ ಚುನಾವಣೆಯ ಗಿಮಿಕ್ ಎಂದರು.
ಮುನೇಶ್ವರ ಬಡಾವಣೆಯಲ್ಲಿ ಭಾನುವಾರ ಏರ್ಪಡಿಸಿದ್ದ `ಸಂಚಾರಿ ಶುದ್ಧ ಕುಡಿಯುವ ನೀರಿನ ಘಟಕ'ವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಲೋಕಾರ್ಪಣೆ ಮಾಡಿದರು.