ರಾಜಕೀಯ

ಯೋಗ ವಿರೋಧಿಯಲ್ಲ: ಆಂಜನೇಯ

Srinivasamurthy VN

ಚಿತ್ರದುರ್ಗ: ತಾವಾಗಲೀ, ರಾಜ್ಯ ಸರ್ಕಾರವಾಗಲೀ ಯೋಗ ವಿರೋಧಿ ಅಲ್ಲ. ಆದರೆ, ಇದನ್ನು ಬಲವಂತವಾಗಿ ಯಾವುದೇ ಧರ್ಮೀಯರ ಮೇಲೆ ಹೇರುವ ಕೆಲಸ ಮಾಡಬಾರದು ಮತ್ತು ಅದರಲ್ಲಿ ರಾಜಕೀಯ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಹೇಳಿದರು.

ನಗರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಅಂಜನೇಯ ಯೋಗ ವಿರೋಧಿ ಎಂದು ಮಾಧ್ಯಮಗಳಲ್ಲಿ ಬಂದಿದೆ. ಆದರೆ, ನಾನು ಯೋಗ ವಿರೋಧಿಯಲ್ಲ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಯಾರ ಮೇಲೂ ಯೋಗ ಬಲವಂತ ಹೇರಬಾರದು. ಕ್ರೀಡೆ, ವ್ಯಾಯಾಮ ಅವರ ಇಷ್ಟಕ್ಕೆ ಬೀಡಬೇಕು. ಬಲವಂತವಾಗಿ ಇದನ್ನೇ ಮಾಡುವಂತೆ ಒತ್ತಡ ಹೇರುವುದು ಸರಿಯಲ್ಲ. ಯೋಗ ಬೇಕು. ಆದರೆ, ಅದರಲ್ಲಿ ರಾಜಕೀಯ ಇರಬಾರದು ಎಂದು ಸ್ಪಷ್ಟಪಡಿಸಿದರು.

ನಮ್ಮ ಪುರಾತನ ಪರಂಪರೆಯ ಯೋಗವನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಸಬೇಕಿದೆ. ಮುಂಚೆ ನಾನು ಯೋಗ ಮಾಡುತ್ತಿರಲಿಲ್ಲ. ಕಳೆದ ಡಿಸೆಂಬರ್‍ನಿಂದ ಯೋಗಾಭ್ಯಾಸ ಕೈಗೊಂಡಿದ್ದೇನೆ. ಈವರೆಗೆ 3-4 ಶಿಬಿರಗಳಲ್ಲಿ ಭಾಗವಹಿಸಿ ಸರಳ ಆಸನಗಳನ್ನು ಕಲಿತಿದ್ದೇನೆ. ಇದಕ್ಕೂ ಮುನ್ನ ಹೊಲದಲ್ಲಿ ಕೆಲಸ ಮಾಡುವ ಮೂಲಕ ದೇಹ ದಂಡಿಸುತ್ತಿದ್ದೆ. ಸಚಿವನಾದ ಮೇಲೆ ಅದು ಸಾಧ್ಯವಾಗದಿದ್ದರಿಂದ ಪ್ರತಿ ನಿತ್ಯ ವಾಕಿಂಗ್ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದೇನೆ ಎಂದರು.

SCROLL FOR NEXT