ರಾಜಕೀಯ

ಮೋದಿ ಸರ್ಕಾರಕ್ಕೆ ಒಕ್ಕೂಟ ವ್ಯವಸ್ಥೆ ಬಲಪಡಿಸುವ ಕನಸು

Rashmi Kasaragodu

ಬೆಂಗಳೂರು: ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ- ಕೇಂದ್ರಗಳ ಸಂಬಂಧ ಸುಧಾರಣೆಗೆ ಮೋದಿ ಸರ್ಕಾರ ಒತ್ತು ನೀಡಿದೆ. ಹೀಗಾಗಿ ಕೇಂದ್ರವು ರಾಜ್ಯಗಳಿಗೆ ಶೇ. 62ರಷ್ಟು ಅನುದಾನ ವನ್ನು ನೇರವಾಗಿ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚು ಹಣ ಬಿಡುಗಡೆಯಾಗುತ್ತಿರಲಿಲ್ಲ, ಪಂಚವಾರ್ಷಿಕ ಯೋಜನೆಗಳಲ್ಲೇ ಹೆಚ್ಚಿನ
ಅನುದಾನ ನಿರೀಕ್ಷಿಸಬೇಕಾಗಿತ್ತು. ಕಳೆದ ವರ್ಷ ಶೇ. 32ರಷ್ಟಿದ್ದ 14ನೇ ಹಣಕಾಸು ಆಯೋಗದ ಅನುದಾನವನ್ನುಈ ಬಾರಿ ಶೇ. 42ಕ್ಕೆ ಹೆಚ್ಚಳ ಮಾಡಿದೆ. ಇದಲ್ಲದೆ ಕೇಂದ್ರದ
ತೆರಿಗೆ ಸಂಗ್ರಹಣೆ ಹಣದ ಭಾಗವೂ ರಾಜ್ಯಕ್ಕೆ ದೊರೆಯಲಿದೆ. ರಾಜ್ಯ ಸರ್ಕಾರ ತಮಗೆ ಬೇಕಾದ ಯೋಜನೆಗಳನ್ನು ರೂಪಿಸಿ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು. ಕಲ್ಲಿದ್ದಲು, ಗಣಿ, ಟೆಲಿಕಾಂ ಹರಾಜಿನಲ್ಲಿ ರಾಜ್ಯಗಳಿಗೆ ರು.  2ಲಕ್ಷ ಕೋಟಿಗೂ ಹೆಚ್ಚು ಹಣ ಹರಿದು ಬಂದಿದೆ. ಹಿಂದುಳಿದ ರಾಜ್ಯಗಳಿಗೆ ಶೇ. 75ರಷ್ಟು ಹಣ ಕೇಂದ್ರದಿಂದ ದೊರೆಯುತ್ತದೆ. ಪ್ರಥಮ ಬಾರಿಗೆ ರಾಜ್ಯಗಳ ಸಬಲೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಧ್ಯವಿರುವ ಎಲ್ಲ ಅವಕಾಶವನ್ನು ನೀಡಿದ್ದಾರೆ ಎಂದರು.
ವೋಟ್ ಬ್ಯಾಂಕ್ ಬಜೆಟ್: ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯನವರದ್ದು ವೋಟ್‍ಬ್ಯಾಂಕ್ ಬಜೆಟ್. ಕೇಂದ್ರದಿಂದ ರಾಜ್ಯಕ್ಕೆ ಅನುದಾನ
ಕಡಿತವಾಗಿಲ್ಲ. ಹೆಚ್ಚಿನ ಅನುದಾನ ದೊರೆತಿದೆ ಎಂದು ಹೇಳಿದರು.


ಇಂದಿನ ತಾಂತ್ರಿಕ ಯುಗದಲ್ಲಿ ಬಿಬಿಎಂಪಿ ವಿಭಜನೆ ಬೇಕಿಲ್ಲ. ಪಾಲಿಕೆಗೆ ಅಭಿವೃದ್ಧಿಗಾಗಿ ಹೆಚ್ಚಿನ ಹಣ ಹರಿದು ಬಂದಿದೆ. ಆಧುನಿಕ ತಂತ್ರಜ್ಞಾನದಲ್ಲಿ ಅಂಗೈ ಯಲ್ಲೇ ಮಾಹಿತಿ ದೊರೆ ಯುತ್ತದೆ. ಬೆಂಗಳೂರು ನಗರಕ್ಕೆ ಉತ್ತಮ ಆಡಳಿ ತ ದೊರೆಯ ಬೇಕೆಂದರೆ ಬಿಬಿಎಂಪಿ ವಿಭಜನೆ ಬೇಕಿಲ್ಲ. ವಿಭಜಿಸಿದರೆ ಮತ್ತೆ ಮೂರು ವರ್ಷ ಯೋ ಜನಾ ಪಟ್ಟಿ ತಯಾರಿಕೆಗೆ ಸಮಯ ವ್ಯರ್ಥವಾಗುತ್ತದೆ. ಇರುವ ತಂತ್ರಜ್ಞಾನ ಸಮರ್ಪಕವಾಗಿ ಬಳಸಿಕೊಂಡು ಕಾರ್ಯ ನಿರ್ವಹಿಸಬೇಕು.
- ಡಿ.ವಿ ಸದಾನಂದಗೌಡ, ಕೇಂದ್ರ ಸಚಿವ

SCROLL FOR NEXT