ವಿಧಾನಸಭೆ: ಬೇಸಿಗೆ ಈಗಷ್ಟೇ ಆರಂಭವಾಗಿದೆ, ಆದರೆ 3979 ಗ್ರಾಮಗಳಲ್ಲಿ ಕುಡಿಯುವ ನೀರೇ ಇಲ್ಲ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾದಿಕಾರಿಗಳೂ ತಲೆ ಕೆಡಿಸಿಕೊಳ್ಳುತ್ತಲೇ ಇಲ್ಲ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ಕುಡಿಯುವ ನೀರು ಒದಗಿಸುವ ವಿಚಾರ ದಲ್ಲಿ ಸರ್ಕಾರ ಕೂಡ ನಿರ್ಲಕ್ಷ್ಯ ತಳೆದಿದೆ ಎಂಬುದು ಅವರ ನೇರ ಆರೋಪ.
ಕುಡಿ ಯುವ ನೀರಿನ ಸಮಸ್ಯೆ ಬಗ್ಗೆ ಸೋಮವಾರ ನಿಲುವಳಿ ಸೂಚನೆ ಮಂಡಿಸಿದ ಪ್ರತಿಪಕ್ಷ ನಾಯಕರು, ನಂತರ ಅದನ್ನು ಸ್ಪೀಕರ್ ಚರ್ಚೆಗೆ ಅವಕಾಶ ಮÁಡಿಕೊಟ್ಟ ನಂತರ ರಾಜ್ಯ ದಲ್ಲಿನ ಕುಡಿಯುವ ನೀರಿನ ದುಸ್ಥಿತಿಯನ್ನು ಸದನದಲ್ಲಿ ಅನಾವರಣಗೊಳಿಸಿದರು.
ಈ ಘಟಕಗಳನ್ನು ದುರಸ್ತಿ ಮಾಡಲು ಸರ್ಕಾರ ಮುಂದಾಗಿಲ್ಲ. ಅಲ್ಲದೆ, ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸುವುದು ಪ್ರಕಟಣೆಗೇ ನಿಂತಿದೆ. 13-14ರಲ್ಲಿ
1000 ಘಟಕ ಸ್ಥಾಪಿಸುತ್ತೇವೆ ಎಂದಿದ್ದರು. ಬಜೆಟ್ ಸಾಧನೆಯಲ್ಲಿ ಕೇವಲ 650 ಘಟಕಗಳು ಕಾರ್ಯಾರಂಭವಾಗಿವೆ ಎಂದಿದ್ದಾರೆ. ಈಗ 4 ಸಾವಿರ ಘಟಕ ಎಂದು
ಹೇಳುತ್ತಿದ್ದಾರೆ. ಹಿಂದೆ ಹೇಳಿರುವುದ್ದನ್ನೇ ಪೂರೈಸದೆ ನೀರಿನ ಹಾಹಾಕಾರಕ್ಕೆ ಕಾರಣವಾಗಿದ್ದಾರೆ ಎಂದರು. ರಾಜ್ಯ ಸರ್ಕಾರಕ್ಕೆ ಕುಡಿಯುವ ನೀರಿನ ಯೋ ಜನೆಗಳ
ಅನುಷ್ಠಾನದ ಬಗ್ಗೆ ಗಾಂಭೀರ್ಯವಿಲ್ಲ. ಕೇವಲ ಟ್ಯಾಂಕರ್‍ಗಳಲ್ಲಿ ನೀರು ನೀಡಿ ತಾತ್ಕಾಲಿಕ ಪರಿಹಾರಕ್ಕಷ್ಟೇ ಸೀಮಿತವಾಗಿದೆ. ಎತ್ತಿನಹೊಳೆ, ಭದ್ರಾ, ಹೇಮಾ ವತಿ
ಸೇರಿದಂತೆ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದ ಬಗ್ಗೆ ಬಜೆಟ್‍ನಲ್ಲಿ ತನ್ನ ಬದ್ಧತೆಯನ್ನೇ ಸರ್ಕಾರ ತೋರಿಲ್ಲ. ಶಾಶ್ವತ ಪರಿಹಾರ ಕಲ್ಪಿಸುವ
ದೂರದೃಷ್ಟಿಯೂ ಈ ಸರ್ಕಾರಕ್ಕಿಲ್ಲ ಎಂದು ಶೆಟ್ಟರ್ ತರಾಟೆಗೆ ತೆಗದುಕೊಂಡರು.
ಬೆಂಗಳೂರು ನಗರ 169
ಬೆಂ. ಗ್ರಾಮಾಂ ತರ 45
ಬಳ್ಳಾರಿ 283
ಬೀದರ್ 21
ಚಿತ್ರದುರ್ಗ 481
ಚಿಕ್ಕಬಳ್ಳಾಪುರ 527
ಧಾರವಾಡ 12
ಕಲಬುರಗಿ 362
ಹಾಸನ 952
ಹಾವೇರಿ 82
ಕೊಡಗು 13
ಕೋಲಾರ 348
ಕೊಪ್ಪಳ 147
ಮೈಸೂರು 15
ರಾಯಚೂರು 92
ರಾಮನಗರ 35
ತುಮಕೂರು 5
ಉತ್ತರ ಕನ್ನಡ 100
ಉಡುಪಿ 84
ಯಾದಗಿರಿ 210
ಹೃದಯವೇ ಬತ್ತಿಹೋಗಿದೆ!
ಪ್ರತಿಪಕ್ಷ ನಾಯಕರು ಅತ್ಯಂತ ಪ್ರಮುಖವಾದ ವಿಷಯ ಮಾತನಾಡುತ್ತಿದ್ದಾರೆ. ಕುಡಿಯಲು ನೀರಿಲ್ಲ ಎಂಬ ದುಸ್ಥಿತಿ ಹೇಳುತ್ತಿದ್ದಾರೆ.ಆದರೆ ಈ ಸದನದ ಚಿತ್ರ ನೋಡಿ. ಹೃದಯವೇ ಬತ್ತಿ ಹೋಗಿದೆ. ಶಾಸಕರು ಯಾರಿಗೂ ಕುಡಿಯುವ ನೀರಿನ ಬಗ್ಗೆ ಆಸಕ್ತಿಯೇ ಇಲ್ಲದಂತಾಗಿದೆ.
ಸ್ಪೀಕರ್ ಕಾಗೋಡು ತಿಮ್ಮಪ್ಪ
(ಸದನದಲ್ಲಿ ಶಾಸಕ ಸಂಖ್ಯೆ ಕಡಿಮೆಇದ್ದದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಾ)