ಎಂ.ಬಿ. ಪಾಟೀಲ್ 
ರಾಜಕೀಯ

ಬೃಹತ್ ನೀರಾವರಿ ಯೋಜನೆಗಳಿಗೆ ರು. 32,775 ಕೋಟಿ ವೆಚ್ಚ

ರಾಜ್ಯದಲ್ಲಿ ಜಲಸಂಪನ್ಮೂಲ ಇಲಾಖೆಯ ಬೃಹತ್ ನೀರಾವರಿ ಯೋ ಜನೆಗಳಿಗೆ ಈವರೆಗೆ ರು. 32,775.32 ಕೋಟಿ ವೆಚ್ಚ ಮಾಡಲಾಗಿದೆ. ಈ ಮೂಲಕ ...

ವಿಧಾನಸಭೆ: ರಾಜ್ಯದಲ್ಲಿ ಜಲಸಂಪನ್ಮೂಲ ಇಲಾಖೆಯ ಬೃಹತ್ ನೀರಾವರಿ ಯೋ ಜನೆಗಳಿಗೆ ಈವರೆಗೆ ರು. 32,775.32 ಕೋಟಿ ವೆಚ್ಚ ಮಾಡಲಾಗಿದೆ. ಈ ಮೂಲಕ 24,14,835 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸಾಮಥ್ರ್ಯ ಕಲ್ಪಿಸಲಾಗಿದೆ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಕಾಂಗ್ರೆಸ್‍ನ ರಮೇಶ್‍ಕುಮಾರ್ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 33ಯೋಜನೆಗಳನ್ನು ಕೈಗೊಳ್ಳಲಾಗಿದೆ. 9,90,017 ಹೆಕ್ಟೇರ್‍ಗೆ ಯೋ ಜನೆಗಳಿಂದ ನೀರಾವರಿಕಲ್ಪಿಸಬೇಕಿದೆ. ರಾಜ್ಯದ ಉಳಿದಿರುವ ಯೋಜನೆಗಳಿಗೆ ರು. 1.17 ಲಕ್ಷ ಅಗತ್ಯ ಇದೆ. ಈ ಹಿಂದೆ 40 ಸಾವಿರ ಕೋಟಿ ಪ್ರತಿವರ್ಷ ನೀಡಬೇಕು ಎಂದು ಅಂದಾಜು ಮಾಡಲಾಗಿತ್ತು. 5-7 ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಉದ್ದೇಶ ಇದೆ ಎಂದರು. `ಎಷ್ಟು ದಿನ ರ್ರೀ ಕಾಯೋದು, ನಾವು ಕಾಯೋ ಲ್ಲ.
`ಕೋಚಿಬೆಂ' ಜಿಲ್ಲೆಗಳಿಗೆ ಒಂದು ನಯಾಪೈಸೆಯನ್ನೂ ಈ ಬಾರಿ ನೀಡಿಲ್ಲ. 10 ಸಾವಿರ ಕೋಟಿ ಎಂದು ಹೇಳುತ್ತೀರಿ. ಎತ್ತಿನಹೊಳೆಗೇ 12,500 ಕೋಟಿ ಬೇಕು. ನಮ್ಮ ಜಿಲ್ಲೆಗಳು ಕೃಷ್ಣಾಗೆ ಬರೊಲ್ಲ ಎನ್ನುತ್ತೀರಿ. ಯು ಆರ್ ರಾಂಗ್. ಕೃಷ್ಣಾ ಬೇಸಿನ್‍ಗೆ ನಾವೂ ಬರುತ್ತೀವಿ. ನಮಗೆ ನೀರು ಹಕ್ಕು . ಅದನ್ನು ಕೊಡಬೇಕು. ನೀವು ಹೀಗೆ ಮುಂದುವರಿದರೆ ನಾವೆಲ್ಲ ಸತ್ತೇ ಹೋಗಿರುತ್ತೀವಿ.
ಸ್ವಲ್ವ ಜವಾಬ್ದಾರಿಯಿಂದ ಸಚಿವರು ಉತ್ತರಿಸಬೇಕು. ಕ್ರಿಯಾ  ಯೋಜ ನೆ ಇಲ್ಲದೆ ಯೋಜನೆ ಏಕೆ ರೂಪಿಸುತ್ತೀರಿ' ಎಂದು ರಮೇಶ್‍ಕುಮಾರ್ ತೀವ್ರವಾಗ್ದಾಳಿ ನಡೆಸಿದರು. ಕೃಷ್ಣಾ ಶೇರ್ ನಮಗೂ ಇದೆ,  ಅದನ್ನು ಕೊಡಿ ಎಂದು ಒತ್ತಾಯಿಸಿದರು . ಪರಿಶೀಲಿಸುತ್ತೇವೆ ಎಂದು ಸಚಿವರು ಮಾತು ಮುಗಿಸಿದರು.



ಏಕೆ ವೆಚ್ಚ ಮಾಡಿಲ್ಲ?

2013-14ನೇ ಸಾಲಿನ ಬಜೆಟ್‍ನಲ್ಲಿ ಜಲಸಂಪನ್ಮೂಲ ಇಲಾಖೆಗೆ ಮೀಸಲಿಟ್ಟ ಹಣ ರು. 8402.96 ಕೋಟಿ. ಇದರಲ್ಲಿ ಬಿಡುಗಡೆ ಆಗಿದ್ದು, ವೆಚ್ಚ ಮಾಡಿದ್ದು ರು. 6730.28 ಕೋಟಿ. ಇನ್ನುಳಿದ ಹಣ ಏಕೆ ವೆಚ್ಚ ಮಾಡಲಾಗಿಲ್ಲ? ಈ ಪ್ರಶ್ನೆಯನ್ನು ಸದಸ್ಯ ಪಿ. ರಾಜೀವ್ ಹಾಗೂ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸಚಿವ ಎಂ.ಬಿ. ಪಾಟೀಲ್ ಅವರನ್ನು ಬಾರಿ ಬಾರಿ ಕೇಳಿದರೂ ಅವರಿಂದ ಉತ್ತರವೇ ಬರಲಿಲ್ಲ. ಕೇಂದ್ರ ಎಐಬಿಪಿಯಲ್ಲಿ ಹಣ ಬಿಡುಗಡೆ ಆಗಿಲ್ಲ. ಅದಕ್ಕಾಗಿ ಇಲ್ಲಿಯೂ ಆಗಿಲ್ಲ ಎಂದರು. `ಮೀಸಲು ಹಣ ಏಕೆ ಬಿಡುಗಡೆ ಆಗಲಿಲ್ಲ' ಅದನ್ನು ಹೇಳಿ ಎಂದು ಸ್ಪೀಕರ್ ನಾಲ್ಕು ಬಾರಿ ಕೇಳಿದರೂ ಇದೇ ಉತ್ತರ ಬಂತು. ಮುಂದಿನ ವರ್ಷದಿಂದ ಹೀಗೆ ಮಾಡಬೇಡಿ. ಬಜೆಟ್‍ನಲ್ಲಿ ಮೀಸಲಿಟ್ಟ ಅಷ್ಟೂ ಹಣ ವೆಚ್ಚ ಮಾಡ್ರೀ ಎಂದು ಸ್ಪೀಕರ್ ತಾಕೀತು ಮಾಡಿ ಚರ್ಚೆಗೆ ತೆರೆ ಎಳೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!