ಕುಣಿಗಲ್: ದಕ್ಷ ಅಧಿಕಾರಿ ಡಿ.ಕೆ. ರವಿ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರಸಿಬಿಐಗೆ ವಹಿಸದಿದ್ದಲ್ಲಿ, ನಾನಾಸಂಘ ಟನೆಗಳ ಸಹಕಾರದೊಂದಿಗೆ ದೊಡ್ಡ
ಕೊಪ್ಪಲು ಗ್ರಾಮದಿಂದ ರಾಜಭವನದವರೆಗೆ ಪಾದ ಯಾತ್ರೆ ನಡೆಸಲು ಜೆಡಿಎಸ್ ನಿರ್ಧರಿಸಿದೆ.
ಸಿಐಡಿ ತನಿಖೆಯಿಂದ ಸತ್ಯ ಹೊರ ಬರುತ್ತದೆ ಎಂದು ನಿರೀಕ್ಷಿಸಲಾಗದು. ಸೋಮವಾರ ದೊಳಗೆ ಸರ್ಕಾರ ಪ್ರಕರಣ ವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಇಲ್ಲದಿ
ದ್ದರೆ , ಶಾಸಕ ಡಿ.ನಾಗ ರಾಜಯ್ಯ ನೇತೃತ್ವದಲ್ಲಿ ದೊಡ್ಡಕೊಪ್ಪಲು ಗ್ರಾಮದಲ್ಲಿರುವ ರವಿ ಅವರ ಸಮಸ್ಯೆ ಯಿಂದ ಬೆಂಗಳೂರು ರಾಜ ಭವನದವರೆಗೆ ಪಾದಯಾತ್ರೆ ನಡೆಸಲಾಗುವುದು. ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ನಂತರ, ಮಹಾತ್ಮ ಗಾಂಧಿ ಪ್ರತಿಮೆ ಮುಂದೆ
ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳ ಲಾಗುವುದು ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್. ಹರೀಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.