ಸಿದ್ದರಾಮಯ್ಯ 
ರಾಜಕೀಯ

ಸಂಪುಟ ಪುನಾರಚನೆಗೆ ಆಗ್ರಹ: ಸಿಎಂ ಭೇಟಿ ಮಾಡಿದ ಶಾಸಕರು

ಕಾಮರಾಜ್ ಸೂತ್ರದ ಆಧಾರದ ಮೇಲೆ ಸಂಪುಟ ಪುನಾರಚನೆ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯ ...

ಬೆಂಗಳೂರು: ಕಾಮರಾಜ್ ಸೂತ್ರದ ಆಧಾರದ ಮೇಲೆ ಸಂಪುಟ ಪುನಾರಚನೆ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ. ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ತಂತ್ರ ರೂಪಿಸಲು ಒಕ್ಕಲಿಗ ಶಾಸಕರು ಹೋಟೆಲ್‍ನಲ್ಲಿ ಸಭೆ ನಡೆಸಿದ ಬೆನ್ನಲ್ಲೇ ಶಾಸಕರ ನಿಯೋ ಗ ಸಿದ್ದರಾಮಯ್ಯ ಅವರ ಜತೆ ಭೇಟಿ ನಡೆಸಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ . ಆರಂಭದಲ್ಲಿ 60 ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಾರೆ ಸುದ್ದಿ ಸೃಷ್ಟಿಯಾಗಿತ್ತು.
ಆದರೆ ಸಾಯಂಕಾಲದ ಹೊತ್ತಿಗೆ ಅದು 25ಕ್ಕೆ ಇಳಿಯಿತು. ಆದರೆ ಕೊನೆಯಲ್ಲಿ ಕೆಲವು ಶಾಸಕರು ಬಿಡಿಬಿಡಿಯಾಗಿ ಸಿದ್ದರಾಮಯ್ಯ ನವರನ್ನು ಭೇಟಿ ಮಾಡಿದರು. ಹಿರಿಯ
ಶಾಸಕ ಕೆ. ಬಿ. ಕೋಳೀವಾದ ಅವರಂತೂ ತಮಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಪಟ್ಟು ಹಿಡಿದು ಬಂದರು. ಆದರೆ, ಶಾಸಕರ ನಿಯೋಗ ಮಾತ್ರ ಸಂಪುಟ ವಿಸ್ತರಣೆ,
ಪುನಾರಚನೆ ವಿಚಾರವನ್ನು ಬಿಟ್ಟು ಹೊಸ ದಾಗಿ ಸಂಪುಟ ರಚನೆ ಮಾಡುವಂತೆ ಆಗ್ರಹಿ ಸಿದ್ದಾರೆ. ಕಾಮರಾಜ್ ಸೂತ್ರದ ಪ್ರಕಾರ ಎಲ್ಲರಿಗೂ ಅಧಿಕಾರ ಹಂಚಿಕೆಯಾಗಲಿ.
ಈಗಿರುವ ಸಚಿವರ ಪೈಕಿ  ಬೆರಳೆಣಿಕೆಯಷ್ಟು ಮಾತ್ರ  ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ಸ್ ಭವಿಷ್ಯ ಮತ್ತೆ ರೂಪುಗೊಲ್ಲಬೇಕಿದ್ದರೆ  ಇವರೆಲ್ಲರನ್ನೂ ಕೈ ಬಿಡಬೇಕು. ಹೀಗಾಗಿ ಸಂಪುಟವನ್ನು ಹೊಸದಾಗಿ ರಚಿಸಬೇಕು. ನಿಗಮ-ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷರಿಗೆ ನಿಗದಿ ಮಾಡಿ ರುವ ಅವಧಿ ಸಚಿವರಿಗೂ ಅನ್ವಯವಾಗಲಿ ಎಂದು ಆಗ್ರಹಿಸಿದ್ದಾರೆ.
ಏ.4 ರಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಲಿದ್ದಾರೆ. ಅವರು  ವಾಪಾಸ್ ಆದ ನಂತರ ಶಾಸಕರ ನಿಯೋ ಗ  ದೆಹಲಿಗೆ ತೆರಳಿ ಸಂಪುಟವನ್ನು ಹೊಸದಾಗಿ
ರಚಿಸಲು ಸಿಎಂಗೆ ಸಂಪೂರ್ಣ ಸಹಾಯ ನೀಡಿ. ನಾವು ಅವರ ಕೈ ಬಲಪಡಿಸುತ್ತೇವೆ ಎಂದು ಆಗ್ರಹಿಸಲು ಮುಂದಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ