ಮೈಸೂರು: ರಾಜ್ಯ ಸರ್ಕಾರದ ಮೌಲ್ಯಮಾಪನ ನಡೆಸಬೇಕು ಎಂಬುದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ವೈಯಕ್ತಿಕ ಅಭಿಪ್ರಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸಲಾಗುತ್ತಿದೆ. ಈ ವಿಚಾರ ಎಸ್.ಎಂ.ಕೃಷ್ಣ ಅವರಿಗೆ ಗೊತ್ತಿರಬಹುದು ಅಥವಾ ಗೊತ್ತಿಲ್ಲದೆ ಇರಬಹುದು.
ಸರ್ಕಾರದ ಮೌಲ್ಯಮಾಪನ ಆಗ ಬೇಕು ಎಂಬುದು ಅವರ ವೈಯಕ್ತಿಕ ಅಭಿಪ್ರಾಯ ಎಂದರು.
ಅನ್ನಭಾಗ್ಯ ಯೋಜನೆ ಗರೀಬಿ ಹಠಾವೋ (ಬಡತನ ನಿರ್ಮೂಲನೆ) ಮುಂದುವರಿದ ಭಾಗ ಎಂದು ಎಸ್.ಎಂ. ಕೃಷ್ಣ ಅವರು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅವರ ಹೇಳಿಕೆಗೆ ತಮ್ಮ ಸಹಮತವಿದೆ. ಇದನ್ನು ಹೊರತುಪಡಿಸಿ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುವುದು ಸರಿಯಲ್ಲ.
ನೇಪಾಳದ ಭೂಕಂಪ ಮಾಡುವುದು ಸರಿಯಲ್ಲ. ನೇಪಾಳದ ಭೂಕಂಪ ಸಂತ್ರಸ್ತರ ನೆರವಿಗಾಗಿ ಕರ್ನಾಟಕ ರಾಜ್ಯ ಸರ್ಕಾರದಿಂದ ರು. 5 ಕೋಟಿ ಪರಿಹಾರವನ್ನು ಚೆಕ್ ಮೂಲಕ ಕಳುಹಿಸಲಾಗಿದೆ ಎಂದರು.