ಬೆಂಗಳೂರು: ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ವಿಚಾರದಲ್ಲಿ ಪ್ರತಿಪಕ್ಷಗಳು ಬಿಲ್ಡರ್‍ಗಳಿಂದ `ಸೂಟ್‍ಕೇಸ್' ಪಡೆದಿವೆ. ಪ್ರತಿಪಕ್ಷದಲ್ಲಿರುವ 2ನೇ ಹಂತದ ನಾಯಕರಿಗೆ ಸೂಟ್‍ಕೇಸ್ ಹೋಗಿವೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಪುನರುಚ್ಛರಿಸಿದ್ದಾರೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಗುರುವಾರ ಭೂ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸದಾಶಿವನಗರದ ಗೆಸ್ಟ್ ಹೌಸ್‍ನಲ್ಲಿ ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, `ಒತ್ತುವರಿ ತೆರವು ಕಾರ್ಯಾಚರಣೆಗೆ ವಿರೋಧಿಸುತ್ತಿರುವ ಪ್ರತಿಪಕ್ಷಗಳು ಬಿಲ್ಡರ್‍ಗಳಿಂದ ಸೂಟ್‍ಕೇಸ್ ಪಡೆದಿವೆ ಎಂದು ತಾವು ಪೂರ್ವಗ್ರಹದಿಂದ ಹೇಳಿರಲಿಲ್ಲ. ಅತ್ಯಂತ ವಿಶ್ವಾಸಾರ್ಹವಾದ ಮೂಲಗಳೇ ಇದನ್ನು ಸ್ಪಷ್ಪಪಡಿಸಿವೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಸುರೇಶ್ ಕುಮಾರ್ ತಮಗೊಂದು ಪತ್ರ ಬರೆದಿದ್ದಾರೆ. ಹಾಗೆಯೇ ಮಾಧ್ಯಮಕ್ಕೂ ಪ್ರತಿಕ್ರಿಯಿಸಿದ್ದಾರೆ.
ಅವರು ಹೇಳುವ ಹಾಗೆ ತಾವು ರಾಜಕೀಯ ಮಾಡುವುದಕ್ಕೆ ಇದೇ ವಿಷಯ ಬೇಕಾಗಿಲ್ಲ. ಸತ್ಯ ವಿಚಾರಗಳನ್ನು ಎಲ್ಲಿಯಾದರೂ ಹೇಳುತ್ತೇನೆ' ಎಂದು ತಿರುಗೇಟು ನೀಡಿದರು. ಇದು ಚುನಾವಣೆ ತಂತ್ರ: ಭೂ ಒತ್ತುವರಿ ವಿರುದಟಛಿ ಧ್ವನಿ ಎತ್ತಿರುವ ಪ್ರತಿಪಕ್ಷಗಳ ಧೋರಣೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎದುರೇ ತರಾಟೆಗೆ ತೆಗೆದುಕೊಂಡ ದೊರೆಸ್ವಾಮಿ, `ಬಿಬಿಎಂಪಿ ಚುನಾವಣೆಯ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಭೂ ಒತ್ತುವರಿ ವಿರುದ್ಧ ಮಾತನಾಡುತ್ತಿವೆ' ಎಂದು ಕಿಡಿಕಾರಿದರು