ನವದೆಹಲಿ: ನವೆಂಬರ್ 5 ರಂದು ಪ್ರಕಟವಾಗಿದ್ದ ಬಿಹಾರದ ಚುನಾವಣೋತ್ತರ ಸಮೀಕ್ಷೆ ಬಗ್ಗೆ ಬಿಜೆಪಿ ಪ್ರತಿಕ್ರಿಯಿಸಿದ್ದು, ವಿಧಾನಸಭಾ ಫಲಿತಾಂಶ ನರೇಂದ್ರ ಮೋದಿ ಸರ್ಕಾರಕ್ಕೆ ಜನಾದೇಶವಾಗುವುದಿಲ್ಲ ಎಂದು ಹೇಳಿದೆ.
ಬಿಹಾರದಲ್ಲಿ 5 ಹಂತಗಳ ಚುನಾವಣೆ ಮುಕ್ತಾಯಗೊಂಡಿದ್ದು ನ.5 ರಂದು ಹೊರಬಿದ್ದಿದ್ದ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಮೋದಿ ನೇತೃತ್ವದ ಬಿಜೆಪಿಗಿಂತ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟವೇ ಬಹುಮತ ಪಡೆಯಲಿದೆ ಎಂದು ಹೇಳಿದ್ದವು.
"ಬಿಹಾರದ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ಷಮತೆ ಕುರಿತ ಜನಾದೇಶವಾಗುವುದಿಲ್ಲ. ಆದರೆ ಖಂಡಿತವಾಗಿಯೂ ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್ ಅವರ ಜಂಗಲ್ ರಾಜ್ ಗೆ ಜನಾದೇಶವಾಗಲಿದೆ ಎಂದು ಬಿಜೆಪಿ ಹೇಳಿದೆ.
ಬಿಹಾರದ ಫಲಿತಾಂಶ ಜನಾದೇಶವಾಗುವುದೇ ಆದರೆ ಅದು ಲಾಲು ಪ್ರಸಾದ್ ಯಾದವ್ ಹಾಗೂ ನಿತೀಶ್ ಕುಮಾರ್ ಅವರ ಜಂಗಲ್ ರಾಜ್ ಗೆ ಸೀಮಿತವಾಗಿರಲಿದೆ ಎಂದು ಮಾಧ್ಯಮಗಳಿಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.