ನವದೆಹಲಿ: ಬಿಹಾರ ಚುನಾವಣೆಯ ಫಲಿತಾಂಶ ಬಿಜೆಪಿ ಮರ್ಮಾಘಾತ ಉಂಟಾಗಿದ್ದು ಆತ್ಮಾವಲೋಕನಕ್ಕೆ ಸಿದ್ಧತೆ ನಡೆಸಿದೆ.
ನ.9 ರ ಸಂಜೆ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಪ್ರಧಾನಿ ಮೋದಿ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಆತ್ಮಾವಲೋಕನದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿಕೆ ನೀಡಿದ್ದು ಬಿಜೆಪಿಯಲ್ಲಿ ಗಂಭೀರ ಮರು ಚಿಂತನೆ ನಡೆಯುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಬಿಹಾರ ಚುನಾವಣಾ ಫಲಿತಾಂಶದಿಂದ ಪ್ರಧಾನಿ ಮೋದಿ ಅವರ ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿಯೊಂದು ಚುನಾವಣೇಯಿಂದಲೂ ನಾವು ಹಲವು ವಿಷಯಗಳನ್ನು ಕಲೀಯುತ್ತೇವೆ, ಬಿಹಾರ ಚುನಾವಣೆಯಿಂದಲೂ ನಾವು ಪಾಠ ಕಲಿಯಬೇಕಿದ್ದು ಬಿಜೆಪಿ ತನ್ನ ಕಾರ್ಯನಿರ್ವಹಣಾ ಶೈಲಿಯ ಬಗ್ಗೆ ಗಂಭೀರವಾಗಿ ಮರು ಚಿಂತನೆ ನಡೆಸುವ ಅಗತ್ಯವಿದೆ ಎಂದಿದ್ದಾರೆ.