ವಿಧಾನ ಪರಿಷತ್ ಸದಸ್ಯೆ ತಾರಾ (ಸಂಗ್ರಹ ಚಿತ್ರ) 
ರಾಜಕೀಯ

ಗೃಹ ಇಲಾಖೆಯನ್ನು ತೊಳೆಯಿರಿ

ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು, ಹದಗೆಟ್ಟ ಕಾನೂನು ವ್ಯವಸ್ಥೆ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿ ಗಮನ ಸೆಳೆದ ಬಿಜೆಪಿ ಸದಸ್ಯೆ ತಾರಾ ಅನುರಾಧ ಗುರುವಾರದ ಸದನ ಶೂರೆ.

ವಿಧಾನಪರಿಷತ್: ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು, ಹದಗೆಟ್ಟ ಕಾನೂನು ವ್ಯವಸ್ಥೆ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿ ಗಮನ ಸೆಳೆದ ಬಿಜೆಪಿ ಸದಸ್ಯೆ ತಾರಾ  ಅನುರಾಧ ಗುರುವಾರದ ಸದನ ಶೂರೆ.

ಅತ್ಯಾಚಾರ, ದೌರ್ಜನ್ಯ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಬೇಕೆಂದರೆ ಹೇಸಿಗೆ ಎನಿಸುತ್ತಿದೆ, ಅವಮಾನವಾಗುತ್ತಿದೆ, ದುಃಖವಾಗುತ್ತಿದೆ ಎಂದು ಮಾತನ್ನಾರಂಭಿಸಿದ ತಾರಾ, ಇಡೀ ಸದನವನ್ನು ಗಂಭೀರತೆಗೆ ಕೊಂಡೊಯ್ದರು. ಅವರ ಮಾತಿನ ಓಘ ಹೇಗಿತ್ತೆಂದರೆ, ಆಡಳಿತ ಪಕ್ಷದವರೂ ಆಸಕ್ತಿಯಿಂದ ಮಾತು ಆಲಿಸಿದರು.

ತಾರಾಗೆ ಮಾತನಾಡಲು ಎರಡು ನಿಮಿಷ ಹೆಚ್ಚು ಅವಕಾಶ ಕೊಡಿ ಎಂದು ಕೋರುವಷ್ಟರ ಮಟ್ಟಿಗೆ ತಮ್ಮ ಅವಕಾಶ ಬಳಸಿಕೊಂಡರು. ವಿಬ್‍ಗಯಾರ್ ಶಾಲೆಯಲ್ಲಿ ನಡೆದ ಘಟನೆ ನಂತರ ಮಾರ್ಗಸೂಚಿಯನ್ನು ಸರ್ಕಾರವೇನೋ ಸೂಚಿಸಿತು, ಆದರೆ  ಶಾಲೆಗಳು ಮಾರ್ಗಸೂಚಿಗಳನ್ನು ಅಳವಡಿಸಿಕೊಂಡಿಲ್ಲ. ಮೂರು ವರ್ಷಗಳಲ್ಲಿ 3 ಸಾವಿರ ಅತ್ಯಾಚಾರ ಪ್ರಕರಣ, 12 ಸಾವಿರ ಮಹಿಳೆ-ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಈ  ಪೈಕಿ ಕೆಲವೇ ಆರೋಪಿಗಳಿಗೆ ಶಿಕ್ಷೆಯಾಗಿದೆ

ಹೀಗಾದರೆ ಎಲ್ಲಿ ನ್ಯಾಯ ಕೇಳಬೇಕು ಎಂದು ಸರ್ಕಾರವನ್ನು ಪ್ರಶ್ನಿಸಿದರು. `ಏನ್ರಿ ಇದು, ಬೆಂಗಳೂರಿನಲ್ಲಿ 45 ದಿನಗಳಲ್ಲಿ ನಾಲ್ಕು ಗ್ಯಾಂಗ್ ರೇಪ್ ನಡೆಯುತ್ತದೆ ಎಂದರೆ ಏನರ್ಥ' ಎಂದು  ಭಾವೋದ್ವೇಗಕ್ಕೊಳಗಾಗಿ ಹೇಳಿದಾಗ ಇಡೀ ಸದನ ಮೌನವಾಗಿಬಿಟ್ಟಿತು. ವರ್ಷದಲ್ಲಿ 502 ಸರಗಳ್ಳತನ ಪ್ರಕರಣ ದಾಖಲಾಗಿದೆ. ಇದರಿಂದ ಮಹಿಳೆಯರು ಮನೆಯಿಂದ ಹೊರಗೆ  ಬಾರದಂತಾಗಿದೆ ಎಂದಾಗ ಗೃಹ ಸಚಿವರು ಮೂಗಿನ ಮೇಲೆ ಬೆರಳಿಟ್ಟು ಗಂಭೀರವಾಗಿ ಆಲಿಸುತ್ತಿದ್ದರು.

ಏನೇ ಘಟನೆ ನಡೆದಾಗಲೂ ಸರ್ಕಾರ ಸದನ ಸಮಿತಿ ಮಾಡಿ ಕೈತೊಳೆದುಕೊಳ್ಳುತ್ತೀರಾ, ರಚನೆಯಾದ ಸಮಿತಿಗೆ ಒಂದಷ್ಟು ಹಣ ಖರ್ಚು. ಇಲಾಖೆಯಲ್ಲಿ ಸಚಿವರು, ಅಧಿಕಾರಿಗಳು ಇರುತ್ತಾರಲ್ಲ, ಅವರೇನು ಮಾಡುತ್ತಾರೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ನಾನೊಂದು ಮಗುವಿನ ತಾಯಿಯಾಗಿ ದಯಮಾಡಿ ನಿಮ್ಮಲ್ಲಿ ವಿನಂತಿಸುತ್ತೇನೆ, ಎಂದು ಪರಮೇಶ್ವರ್ ಅವರನ್ನು ಕೋರಿದರು.

ಜಯಮಾಲ ಆಕ್ಷೇಪ
ವಿಧಾನ ಪರಿಷತ್:
ಅತ್ಯಾಚಾರ ತಡೆಗೆ ನೇಮಿಸಿರುವ ಸದನ ಸಮಿತಿಯು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಿದ್ದ ಶಾಸಕಿ ತಾರಾ ಅನುರಾಧಾ ಅವರ ಹೇಳಿಕೆಗೆ ಸದನ ಸಮಿತಿ ಅಧ್ಯಕ್ಷೆ ಜಯಮಾಲಾ ಆಕ್ಷೇಪ ವ್ಯಕ್ತಪಡಿಸಿದರು.
 
ತಾರಾ ಅನುರಾಧಾ ಅವರ ಹೇಳಿಕೆ ಸದನದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ. ಇಂತಹ ಮಾತುಗಳನ್ನು ಆಡಬಾರದು ಎಂದು ತಾಕೀತು ಮಾಡಿದರು. ರಾಜ್ಯ ಸರ್ಕಾರ ಕೂಡ ಅತ್ಯಾಚಾರ ಕೂಡ ಅತ್ಯಾಚಾರ ಎಸಗುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅವರ ಪುರುಷತ್ವ ಹರಣ ಮಾಡುವಂತೆ ಕ್ರಮ ಕೈಗೊಂಡವರೂ ಸರಿಯೇ. ಶಾಲೆಗಳಲ್ಲಿ ಅತ್ಯಾಚಾರ ಪ್ರಕರಣ  ಹೆಚ್ಚಾಗುತ್ತಿದ್ದು, ಶಿಕ್ಷಕರನ್ನು ನೇಮಿಸಿ ಕೊಳ್ಳುವಾಗ ಪೂರ್ವ ಪರ ವಿಚಾರಿಸಬೇಕು ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT