ರಾಜಕೀಯ

ಅತ್ಯಾಚಾರಿಗಳನ್ನು ನಪುಂಸಕರನ್ನಾಗಿಸಿ: ಕೆ.ಎಸ್ ಈಶ್ವರಪ್ಪ

Shilpa D

ವಿಧಾನಪರಿಷತ್: ಅತ್ಯಾಚಾರ ನಿಯಂತ್ರಣ ಕೈಗೊಳ್ಳಲು ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಹೇಳುವ ಸರ್ಕಾರ, ಕಠಿಣ ಕ್ರಮ ಏನೆಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಕೇಳಿದ್ದಾರೆ.

`ಒಂದು ದೇಶದಲ್ಲಿ ಅತ್ಯಾಚಾರ ಎಸಗಿದ ಆಪಾದಿತನನ್ನ ನಪುಂಸಕನಾಗಿಸಲಾಗುತ್ತದೆ. ಇಲ್ಲೂ ಆ ಕ್ರಮವನ್ನೇಕೆ ಕೈಗೊಳ್ಳಬಾರದು? ಇಂಜೆಕ್ಷನ್ ನೀಡಿದರೆ ಅತ್ಯಾಚಾರ ಮಾಡಿದವನೂ ಏಳಬಾರದು,

ಬೇರೆ ಏನೂ ಏಳಬಾರದು' ಎಂದು ಕಠೋರ ಅಭಿಪ್ರಾಯವನ್ನು ಈಶ್ವರಪ್ಪ ಹೊರಹಾಕಿದರು.ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಮುಖ್ಯಮಂತ್ರಿ ಕಠಿಣ ಶಿಕ್ಷೆ ಕೊಡುತ್ತೇವೆಂದು ಮಾತ್ರ ಹೇಳುತ್ತಿದ್ದಾರೆಯೇ ಹೊರತು ಯಾವ ಶಿಕ್ಷೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಿದರೆ ಎಲ್ಲವೂ ಸರಿಯಾಗುತ್ತದೆ ಎಂದು ಸಲಹೆ ನೀಡಿದರು.

ನ್ಯಾಯಾಲಯಗಳಲ್ಲಿ ಡೇಟ್ ಸಿಗುತ್ತದೆಯೇ ವಿನಾ ನ್ಯಾಯ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೇ, ಉಗ್ರಪ್ಪ ಸಮಿತಿ ಹೊರತಾಗಿ ಶಾಸಕರು, ತಜ್ಞರ ಒಂದು ತಂಡ ರಚಿಸಿ ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರ ಸಲಹೆ ಪಡೆದುಕೊಳ್ಳಲಿ ಎಂದು ಸಲಹೆ ನೀಡಿದರು.

SCROLL FOR NEXT