ವಜುಬಾಯಿ ವಾಲಾ 
ರಾಜಕೀಯ

ಗವರ್ನರ್ ವಜುಬಾಯಿ ವಾಲಾ ವಾಹನ ಖರೀದಿಗೆ 94 ಲಕ್ಷ ರೂ.!

ರಾಜ್ಯಪಾಲರ ಉಪಯೋಗಕ್ಕಾಗಿ ವಾಹನಗಳ ಖರೀದಿಗೆ 94 ಲಕ್ಷ ರೂ. ಹೈಕೋರ್ಟ್‌ ನ್ಯಾಯಮೂರ್ತಿಗಳ ವಾಹನ ಖರೀದಿಗೆ 5.60 ಕೋಟಿ ರೂ....

ವಿಧಾನಸಭೆ: ರಾಜ್ಯಪಾಲರ ಉಪಯೋಗಕ್ಕಾಗಿ ವಾಹನಗಳ ಖರೀದಿಗೆ 94 ಲಕ್ಷ ರೂ. ಹೈಕೋರ್ಟ್‌ ನ್ಯಾಯಮೂರ್ತಿಗಳ ವಾಹನ ಖರೀದಿಗೆ 5.60 ಕೋಟಿ ರೂ., ಕೃಷಿ ಇಲಾಖೆಗೆ ವಾಹನಗಳ ಖರೀದಿಗೆ 78 ಲಕ್ಷ ರೂ. ಸೇರಿದಂತೆ 6,785.51 ಕೋಟಿ ರೂ. ಮೊತ್ತದ ಪೂರಕ ಅಂದಾಜುಗಳ ಎರಡನೇ ಕಂತು ಗುರುವಾರ ಮಂಡನೆಯಾಗಿದ್ದು, ಇದರಿಂದಾಗಿ ರಾಜ್ಯದ ಬಜೆಟ್‌ ಗಾತ್ರ 1,50,205 ಕೋಟಿ ರೂ.ಗಳಿಗೆ ಏರಿಕೆಯಾದಂತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರಕ ಅಂದಾಜು ಮಂಡಿಸಿದ್ದು, ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ನೀಡಲು 2 ಕೋಟಿ ರೂ., ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ವಿಧವಾ ವೇತನ ನೀಡಲು 1.50 ಕೋಟಿ ರೂ. ಮೀಸಲಿಡಲಾಗಿದೆ.

ವಿಧಾನಪರಿಷತ್‌ ಸಚಿವಾಲಯದ ಆಧುನೀಕರಣಕ್ಕೆ 68 ಲಕ್ಷ ರೂ., ಶಾಸಕರಿಗೆ 16 ಕಾರು ಖರೀದಿಸಲು 1.80 ಕೋಟಿ ರೂ., ದೆಹಲಿಯಲ್ಲಿರುವ ಕರ್ನಾಟಕದ ನಿವಾಸಿ ಆಯುಕ್ತರು, ಸಿಬ್ಬಂದಿಯ ವೈದ್ಯಕೀಯ ವೆಚ್ಚ ಮರು ಪಾವತಿಗೆ 25 ಲಕ್ಷ ರೂ., ಕುಮಾರ ಕೃಪ ಅತಿಥಿ ಗೃಹಕ್ಕೆ 10 ಲಕ್ಷ ರೂ. ಹೆಚ್ಚುವರಿಯಾಗಿ ಪೂರಕ ಅಂದಾಜಿನಲ್ಲಿ ಒದಗಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ