ರಾಜಕೀಯ

ಮಹದಾಯಿ ಬಗ್ಗೆ ಸಿಎಂ ದ್ವಿಮುಖ ನೀತಿ: ಪ್ರಹ್ಲಾದ ಜೋಶಿ

ಶಿವಮೊಗ್ಗ: ಪ್ರಕರಣ ನ್ಯಾಯಾಧಿಕರಣದ ಮುಂದಿದೆ, ಏನೂ ಮಾಡಲು ಆಗುವುದಿಲ್ಲ ಎಂದಿದ್ದ ಮುಖ್ಯಮಂತ್ರಿ ಈಗ ಪ್ರಧಾನಿಯತ್ತ ತೇರಿಸುವ ಮೂಲಕ ದ್ವಿಮುಖ ನೀತಿಯನ್ನು ತೋರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಟೀಕಿಸಿದರು.

ರಾಜ್ಯ ಸರ್ಕಾರಕ್ಕೆ ರಾಜಿ ಸಂಧಾನದ ಬಗ್ಗೆ ಒಲವಿಲ್ಲ. ಈ ಹಿಂದೆ ಹುಬ್ಬಳ್ಳಿಗೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರು ಕಳಸಾ-ಬಂಡೂರಿ ವಿವಾದ ನ್ಯಾಯಾಧಿಕರಣದ ಮುಂದೆ ಇದೆ. ಇದನ್ನು ನಾನು ಸೇರಿದಂತೆ ಪ್ರಧಾನಿಗಳು ಏನೂ ಮಾಡಲಾಗದು ಎಂದಿದ್ದರು. ಈಗ ರೈತರು ಬೀದಿಗಿಳಿದ ಪರಿಣಾಮ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಇದರಿಂದ ತಮ್ಮ ಮಾತನ್ನು ಬದಲಿಸಿ ಪ್ರಧಾನಮಂತ್ರಿಗಳ ಕಡೆಗೆ ಬೆರಳು ತೋರಿಸುತ್ತಿದ್ದಾರೆ.  

ರಾಜಿ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಒಟ್ಟಿಗೆ ಮಾಡಬೇಕು ಎಂದು ಪತ್ರಿಕಾ- ಗೋಷ್ಠಿಯಲ್ಲಿ ಹೇಳಿದರು. ``ಮಹದಾಯಿ, ಕಳಸಾ- ಬಂಡೂರಿ ವಿವಾದಕ್ಕೆ ಕಾಂಗ್ರೆಸ್ ಕಾರಣ. ಪ್ರಧಾನಿ ಬಳಿಗೆ ಸರ್ವಪಕ್ಷಗಳ ನಿಯೋಗದ ಸಂದರ್ಭದಲ್ಲಿ ನಾನು,ಯಡಿಯೂರಪ್ಪ ಬಾಯಿ ಮುಚ್ಚಿಕೊಂಡಿದ್ದೆವು ಎಂದು ಆರೋಪಿಸುತ್ತಿರುವುದನ್ನು ನೋಡಿದರೆ ಸಿಎಂ ಆ ಸಂದರ್ಭದಲ್ಲಿ ನಿದ್ದೆ ಮಾಡುತ್ತಿದ್ದರೆಂದು ಕಾಣುತ್ತದೆ. ವೀರಪ್ಪ ಮೊಯ್ಲಿ ನಂತರ ಮಹಾಸುಳ್ಳುಗಾರರು ಎಂದರೆ ಸಿದ್ದರಾಮಯ್ಯನವರೇ ಎಂದು ಲೇವಡಿ ಮಾಡಿದರು.

ಅಂತರರಾಜ್ಯಗಳ ವಿವಾದವನ್ನು ಬಗೆಹರಿಸುವುದು ಪ್ರಧಾನಿಗಳ ಕೆಲಸವಲ್ಲ. 2006ರಲ್ಲೇ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಸುಪ್ರೀಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಅದರಂತೆಯೇ ನಡೆಯುತ್ತಿದೆ. ನ್ಯಾಯಾಧಿಕರಣದಲ್ಲೇ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ಅದರ ಹೊರತಾಗಿ ಸಂಬಂಧಪಟ್ಟ ರಾಜ್ಯಗಳು ರಾಜಿ ಸಂಧಾನದ ವಾತಾವರಣ ಮಾಡಿಕೊಂಡಲ್ಲಿ ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಿ ಪರಿಹಾರ ಸೂಚಿಸಬಹುದು. ಇದನ್ನು ಸರ್ವಪಕ್ಷಗಳ ನಿಯೋಗಕ್ಕೂ ಪ್ರಧಾನಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು.

SCROLL FOR NEXT