ಬೆಂಗಳೂರು: ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಸಮರ ಸಾರಿದೆ. ಯೋಜನೆ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ವಾಸ್ತವ ಮರೆಮಾಚುತ್ತಿದ್ದು, ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿರುವ ಜೆಡಿಎಸ್, ಜನರಿಗೆ ಸತ್ಯ ತಿಳಿಸುವ ಪ್ರಶ್ನೆಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್‍ಗೆ ಕೇಳಿದೆ.
- 1967 ರಲ್ಲಿ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆ ವಿಚಾರದಲ್ಲಿ, ಅಂದಿನ ಕೇಂದ್ರ ಸರ್ಕಾರ ಆಂಧ್ರಪ್ರದೇಶ ನಾಗಾರ್ಜುನ ಸಾಗರ ಅಣೆಕಟ್ಟನ್ನು ಕಟ್ಟಿದ ಮೇಲಷ್ಟೇ ಕೃಷ್ಣಾ ನದಿ ನ್ಯಾಯ ಮಂಡಳಿ ರಚಿಸಲು ಮುಂದಾಯಿತು. ಇದಕ್ಕೆ ಯಾವ ಪಕ್ಷ ಹೊಣೆ? ಟಿ ಕೃಷ್ಣ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರ ಕೇಂದ್ರದ ಹಣದ ನೆರವುಯಾಚಿಸಿತು. ಅಂದಿನ ಪ್ರಧಾನಿ ಇಂದಿರಾರನ್ನು ಬಿಜಾಪುರಕ್ಕೆ ಕರೆಸಿ ಚಿನ್ನದ ತುಲಾಭಾರ ಮಾಡಿ ಹಣಕಾ ಸಿನ ಭಿಕ್ಷೆ ಬೇಡಿತು. ಆದರೆ ಸಹಾಯ ದೊರೆಯಲಿಲ್ಲ. ಇದನ್ನು ಕಾಂಗ್ರೆಸ್ ಮರೆಮಾಚಲು ಸಾಧ್ಯವೇ? ಟಿ ಬೆಳಗಾವಿ ಗಡಿ ಸಮಸ್ಯೆ ವಿವಾದದಲ್ಲಿ ಮಹಾಜನ್ ಆಯೋಗವು ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗ ಎಂದಿತು. ಆದರೆ ವರದಿ ಜಾರಿಯಾಗಲಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಮಹಾರಾಷ್ಟ್ರ ಒಲವಿಗೆ ವಿವಾದ ಜೀವಂತವಾಗಿಟ್ಟಿರುವು ದು ನಿಜವಲ್ಲವೇ?
- ಕಾವೇರಿ ನ್ಯಾಯ ಮಂಡಳಿ 1992ರಲ್ಲಿ ಮಧ್ಯಂತರ ತೀರ್ಪು ನೀಡಿದಾಗ ಗೆಜೆಟ್ ಪ್ರಕಟಣೆ ಮಾಡಬೇಕೆಂದು ತಮಿಳುನಾಡಿನ ಜಯಲಲಿತಾ ಉಪವಾಸ ಕುಳಿತರು. ಅಂದಿನ ನೀರಾವರಿ ಸಚಿವ ವಿ.ಸಿ.ಶುಕ್ಲಾ ಜಯಾ ಬಳಿ ಬಂದು ಗೆಜೆಟ್ ಪ್ರಕಟಣೆ ಪ್ರತಿ ನೀಡಿ ಉಪವಾಸ ಅಂತ್ಯ ಮಾಡಿದರು. ಈ ಅನ್ಯಾಯಕ್ಕೆ ಯಾರು ಹೊಣೆ?
- 1996ರಲ್ಲಿ ಸಂಯುಕ್ತ ರಂಗ ಸರ್ಕಾರವಿದ್ದಾಗ ರಾಜ್ಯದಲ್ಲಿ ರೈಲ್ವೆ ನೇಮಕಾತಿ ಮಂಡಳಿಯಿದ್ದು, ಅದಕ್ಕೆ ಕನ್ನಡಿಗರೇ ಅಧ್ಯಕ್ಷರಾದರು. ಆದರೆ ನಂತರ ಬಂದ ಎನ್‍ಡಿಎ ಸರ್ಕಾರ ಚೆನ್ನೈಗೆ ಸ್ಥಳಾಂತರಿಸಿ ಕನ್ನಡೇತರರು ಅಧ್ಯಕ್ಷರಾಗುವಂತೆ ಮಾಡಿತು. ಬಿಜೆಪಿ ಇದಕ್ಕೆ ಏನೆನ್ನುತ್ತದೆ?
- ಬೆಂಗಳೂರಿನ ಕಾವೇರಿ 4ನೇ ಹಂತದ ಯೋಜನೆಗೆ ಕಾವೇರಿ ನ್ಯಾಯ ಮಂಡಳಿ ಅಡ್ಡಿ ಮಾಡಿತ್ತು. ಆಗ ಪ್ರಧಾನಿ ದೇವೇಗೌಡರು ನ್ಯಾಯ ಮಂಡಳಿ ಅಡ್ಡಿಯಾಗಬಾರದು ಎಂದು ನಿಲುವು ತಾಳಿ ಯೋಜನೆಗೆ ಹಾದಿ ಸುಗಮ ಮಾಡಿದರು. ಅವರಿಗೆ ಸಾಧ್ಯವಾಗಿದ್ದು, ಇಂದು ಕಳಸಾ ಬಂಡೂರಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರಿಗೇಕೆ ಸಾಧ್ಯವಿಲ್ಲ?
ಸಾಲ ಮಾಡಿಯಾದರೂ ಸಾಲ ಮನ್ನಾ ಮಾಡಿ ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡದೆ ರೈತರಿಗೆ ಭವಿಷ್ಯವಿಲ್ಲ. ಆದ್ದರಿಂದ ಸರ್ಕಾರ ಸಾಲ ಮಾಡಿಯಾದರೂ, ರೈತರ ಸಾಲ ಮನ್ನಾ ಮಾಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿರುವ ಅವರು, ``ಬರ ಪರಿಹಾರಕ್ಕೆ ಸಚಿವ ಕೃಷ್ಣ ಬೈರೇಗೌಡ, ರು.500 ಕೋಟಿಗಾಗಿ ಕೇಂದ್ರದಿಂದ ನೆರವು ಬೇಡಿದ್ದಾರೆ. ಅದನ್ನು ಕೇಂದ್ರ ಕೊಡುತ್ತಿಲ್ಲ. ಆದರೆ ಬಿಜೆಪಿ ನಾಯಕರು ಹಣದ ಕೊರತೆ ಎಷ್ಟಾದರೂ ಕೇಂದ್ರದಿಂದ ಕೊಡಿಸುವುದಾಗಿ ಸುಳ್ಳು ಹೇಳುತ್ತಿದ್ದಾರೆ. ರೈತ ಚೈತನ್ಯಯಾತ್ರೆ ಮಾಡುತ್ತಿರುವ ಬಿಜೆಪಿ ನಾಯಕರನ್ನು ಜನ ಹಿಡಿದು ಬಾರಿಸಬೇಕು'' ಎಂದು ಕಿಡಿಕಾರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics