ಬೆಂಗಳೂರು: ವಿಧಾನ ಪರಿಷತ್ ಸದಸ್ಯೆ ಡಾ. ಜಯಮಾಲಾ ಅವರನ್ನು ಲೈಂಗಿಕ ಕಾರ್ಯಕರ್ತೆಯರ ನೀತಿ ರೂಪಿಸುವ ಸಲುವಾಗಿನ ಅಧ್ಯಯನ ಸಮಿತಿ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿ ಸಚಿವ ಸ್ಥಾನದ ಗೌರವ ನೀಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಈ ವಿಷಯ ತಿಳಿಸಿದ್ದು, ಜಯಮಾಲಾ ರಿಗೆ ರಾಜ್ಯ ಸಚಿವ ಸ್ಥಾನಮಾನ ಲಭಿಸಲಿದೆ. ಲೈಂಗಿಕ ಕಾರ್ಯಕರ್ತೆಯರು, ಲೈಂಗಿಕ ಅಲ್ಪಸಂಖ್ಯಾತರು, ಮಾಜಿ ದೇವದಾಸಿಯರನ್ನು ಮುಖ್ಯ ವಾಹಿನಿಗೆ ತರಲು ನೀತಿ ರೂಪಿಸುವ ಜವಾಬ್ದಾರಿಯನ್ನು ಈ ಸಮಿತಿಗೆ ನೀಡಲಾಗಿದೆ.
ಏಡ್ಸ್ ನಿಯಂತ್ರಣ ಮಂಡಳಿ ಜಂಟಿ ನಿರ್ದೇಶಕಿ ಡಾ.ಲೀಲಾ ಸಂಪಿಗೆ ಸಮಿತಿ ಕಾರ್ಯದರ್ಶಿ, ನಿವೃತ್ತ ಎಡಿಜಿಪಿ ಕೆ.ವಿ.ಆರ್.ಠ್ಯಾಗೋರ್, ದು. ಸರಸ್ವತಿ, ರೂಪಾ ಹಾಸನ್, ವಸಂತ ಬನ್ನಾಡಿ, ಒಡನಾಡಿ ಸಂಸ್ಥೆ, ಶಾಂತಮ್ಮ ಮದ್ದೂರು, ಶ್ರೀಪಾದ ಶೆಟ್ಟಿ, ಮೀನಾಕ್ಷಿ ಬಾಳಿ, ಮಾಳಮ್ಮ, ಸೇರಿದಂತೆ 15 ಸದಸ್ಯರನ್ನು ನೇಮಿಸಲಾಗಿದೆ.