ಪಾಟ್ನಾ: ಚುನಾವಣಾ ಕಣವಾಗಿರುವ ಬಿಹಾರದಲ್ಲಿ ಜೆಡಿಯು ಬಂಡಾಯ ನಾಯಕ, ಮಾಜಿ ಸಚಿವ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬಿಹಾರದಲ್ಲಿ ಈಗಾಗಲೇ ಎರಡು ಹಂತದ ಚುನಾವಣೆ ಮುಕ್ತಾಯಗೊಂಡಿದ್ದು ಮೂರನೆ ಹಂತದ ಚುನಾವಣೆ ನಡೆಯಬೇಕಿದೆ. ಚುನಾವಣೆ ವೇಳೆ ಜೆಡಿಯು ನಾಯಕ ಭೀಮ್ ಸಿಂಗ್ ಬಿಜೆಪಿಗೆ ಸೇರ್ಪಡೆಗೊಂಡಿರುವುದು ಜೆಡಿಯುಗೆ ಹಿನ್ನಡೆ ಉಂಟಾದಂತಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಮಂಗಲ್ ಪಾಂಡೆ ನೇತೃತ್ವದಲ್ಲಿ ಭೀಮ್ ಸಿಂಗ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಹಾರ ವಿಧಾನಪರಿಷತ್ ನ ಜೆಡಿಯು ಸದಸ್ಯರಾಗಿದ್ದ ಸಿಂಗ್, ಮುಖ್ಯಮಂತ್ರಿ ನಿತೀಶ್ ಕುಮಾರ್ ಅಹಂಕಾರಿಯಾಗಿದ್ದರಿಂದ ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ 28 ರಂದು ಬಿಹಾರದಲ್ಲಿ ಮೂರನೇ ಹಂತದ ಚುನಾವಣೆ ನಡೆಯಲಿದೆ.