ಸಾಂದರ್ಭಿಕ ಚಿತ್ರ 
ರಾಜಕೀಯ

14 ಸಾವಿರ ಕಟ್ಟಡಗಳಿಗೆ ಕರೆಂಟ್, ನೀರು ಕಟ್

ರಾಜ್ಯದಲ್ಲಿ ಅಗ್ನಿ ದುರಂತಗಳನ್ನು ತಡೆಗಟ್ಟಲು ರಕ್ಷಣಾ ಕ್ರಮಗಳನ್ನುಕೈಗೊಳ್ಳದ 14 ಸಾವಿರಕ್ಕೂ ಹೆಚ್ಚು ಬಹು ಮಹಡಿ ಕಟ್ಟಡಗಳಿಗೆ ತಕ್ಷಣದಿಂದಲೇ ವಿದ್ಯುತ್ ...

ಬೆಂಗಳೂರು: ರಾಜ್ಯದಲ್ಲಿ ಅಗ್ನಿ ದುರಂತಗಳನ್ನು ತಡೆಗಟ್ಟಲು ರಕ್ಷಣಾ ಕ್ರಮಗಳನ್ನು
ಕೈಗೊಳ್ಳದ 14 ಸಾವಿರಕ್ಕೂ ಹೆಚ್ಚು ಬಹು  ಮಹಡಿ ಕಟ್ಟಡಗಳಿಗೆ ತಕ್ಷಣದಿಂದಲೇ ವಿದ್ಯುತ್ ಹಾಗೂ ನೀರು ಸರಬರಾಜು ನಿಲ್ಲಿಸಲು ಸರ್ಕಾರ ನಿರ್ಧರಿಸಿದೆ. ಬಹುಮಹಡಿ ಕಟ್ಟಡಗಳು ಅಗ್ನಿ ದುರಂತ ತಡೆಗಟ್ಟಲು ರಕ್ಷಣಾ ಕ್ರಮಗಳ ನ್ನು ಕೈಗೊಳ್ಳಬೇಕು ಮತ್ತು ಅದನ್ನು ಅಗ್ನಿಶಾಮಕ ದಳ ಪರಿಶೀಲಿಸಬೇಕು.
ಆನಂತರ ಅವರು ನಿರಾಕ್ಷೇಪಣಾ ಪತ್ರ ನೀಡಿದ ನಂತರವೇ ನೀರು, ವಿದ್ಯುತ್ ನೀಡುವಂತೆ ಜಲಮಂಡಳಿ ಹಾಗೂ ವಿದ್ಯುತ್ ಕಂಪನಿಗಳಿಗೆ ಪತ್ರ ಬರೆಯುತ್ತೆ ೀವೆ. ಅದೇ ರೀತಿ ಈಗಾಗಲೇ ಅಗ್ನಿ ದುರಂತಗಳನ್ನು ತಡೆಗಟ್ಟಲು ರಕ್ಷಣಾ ಕ್ರಮಗಳನ್ನು ಕೈಗೊಳ್ಳದ ಬಹುಮಹಡಿ ಕಟ್ಟಡಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಪವರ್ ಕಟ್ ಮಾಡಬೇಕು.
ನೀರು ಸರಬರಾಜನ್ನು ಕಟ್ ಮಾಡಬೇಕು ಎಂದು ಆದೇಶ ನೀಡಿದ್ದೇವೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಸುದ್ದಿಗಾರರಿಗೆ ಗುರುವಾರ ತಿಳಿಸಿದರು.
ಬೆಂಗಳೂರಲ್ಲೇ ಅಧಿಕ: ಬಹುಮಹಡಿ ಕಟ್ಟಡಗಳ ಈಗಾಗಲೇ ಅಗ್ನಿಶಾಮಕ ದಳದ ಡಿಜಿಪಿ ಇಂತಹ ಕಟ್ಟಡಗಳ ಸರ್ವೆ ಕಾರ್ಯ ನಡೆಸಿದ್ದಾರೆ. ರಾಜ್ಯದಲ್ಲಿ ಸುಮಾರು 14 ಸಾವಿರ ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳಿಲ್ಲ. ಇದರಲ್ಲಿ ಶೇ.80ರಷ್ಟು ಕಟ್ಟಡಗಳು ಬೆಂಗಳೂರಿನಲ್ಲೇ ಇವೆ ಎಂದರು.
ಕಟ್ಟಡಗಳನ್ನು ನಿರ್ಮಿಸುವಾಗ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ಪ್ರಾಥಮಿಕ ಹಂತದ ನಿರಾಕ್ಷೇಪಣಾ ಪತ್ರ ನೀಡಿರುತ್ತದೆ. ಆದರೆ, ಕಟ್ಟಡ ಕಾಮಗಾರಿ ಪೂರ್ಣಗೊಂಡ ನಂತರ ಸಂಬಂಧಪಟ್ಟ ಕಟ್ಟಡಗಳ ಮಾಲೀಕರು ಅಗ್ನಿಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಇಂತಹ ಪ್ರಮಾಣ ಪತ್ರ ಪಡೆದೆವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.ಯಾವ ಕಾರಣಕ್ಕೂ ಇಂತಹವರಿಗೆ ನೀರು
ಸರಬರಾಜು ಮಾಡಬಾರದು, ವಿದ್ಯುತ್ ಸಂಪರ್ಕ ನೀಡಬಾರದು ಎಂದು ಸೂಚಿಸಲಾಗಿದೆ ಎಂದರು.
ಅಗ್ನಿಶಾಮಕ ಘಟಕಕ್ಕೆ ಬೇಡಿಕೆ: ರಾಜ್ಯದ ನಾನಾ ಭಾಗಗಳಲ್ಲಿ ಅಗ್ನಿಶಾಮಕ ದಳವನ್ನು ಪ್ರಾರಂಭಿಸುವಂತೆ ಮನವಿಗಳು ಬರುತ್ತಿವೆ. ಈಗ ಮಂಜೂರಾಗಿರುವ 20 ಅಗ್ನಿಶಾಮಕ
ದಳದ ಠಾಣೆಗಳನ್ನು ಸ್ಥಾಪಿಸುತ್ತೇವೆ. ಅಗ್ನಿಶಾಮಕ ದಳದಲ್ಲಿ ಈಗ 3,500 ಸಿಬ್ಬಂದಿಯಿದ್ದು ಈ ಪೈಕಿ ಶೇ.10ರಷ್ಟು ಮಂದಿ ಪ್ರತಿ ವರ್ಷ ತರಬೇತಿಗಾಗಿ ಹೋಗಬೇಕಾಗುತ್ತದೆ. 500 ಮಂದಿ
ಗೃಹ ರಕ್ಷಕ ದಳದ ಸಿಬ್ಬಂದಿ ನೇಮಕಕ್ಕೆ ಕೋರಿಕೆ ಇದ್ದು, ಪರಿಶೀಲಿಸಲಾಗುತ್ತಿದೆ ಎಂದರು.



ಸಿಐಡಿ ವರದಿ ಶೀಘ್ರ

ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧ ಅತ್ಯಾಚಾರ ಪ್ರಕರಣದ ತನಿಖೆ ಕಾನೂನುಬದ್ಧವಾಗಿ ನಡೆಯುತ್ತಿದೆ. ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದೆ. ಅದಲ್ಲದೆ ಪ್ರಕರಣ ನ್ಯಾಯಾಲಯದಲ್ಲೂ ಇದೆ. ಸಿಐಡಿ ವರದಿ ಸಲ್ಲಿಕೆ ಅಂತಿಮ ಹಂತದಲ್ಲಿದೆ. ಅದನ್ನು ಮುಚ್ಚಿ ಹಾಕಲು ಸರ್ಕಾರ ಯತ್ನಿಸುತ್ತಿದೆ ಎಂಬ ಆರೋಪ ಸುಳ್ಳು ಎಂದು ಜಾರ್ಜ್ ಸ್ಪಷ್ಟಪಡಿಸಿದರು. ಅತ್ಯಾಚಾರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಈಗಾಗಲೇ ಒಂದು ಸಮಿತಿ ರಚಿಸಲಾಗಿದೆ. ಅದು ವರದಿ ನೀಡಿ ಕಾನೂನಿನಲ್ಲಿ ಯಾವ ಮಾರ್ಪಾಡು ತರಬೇಕು ಎಂದು ಶಿಫಾರಸು ಮಾಡುತ್ತದೋ ಎಂಬುದನ್ನು
ಗಮನಿಸೋಣ. ಅತ್ಯಾಚಾರ ಪ್ರಕರಣಗಳು ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದಲ್ಲೇ ಹೆಚ್ಚಾಗಿವೆ. ಇಂತಹ ಬಹುತೇಕ ಪ್ರಕರಣಗಳಲ್ಲಿ ಅತ್ಯಾಚಾರಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT