ಬೆಂಗಳೂರು: `ಏ ಅಶೋಕ, ನಿನೇನು ವಿಜಯನಗರ ಸಾಮ್ರಾಟ ಎಂದು ತಿಳಿದುಕೊಂಡಿದ್ದೀಯಾ? ಶುದ್ಧ ರಾಜಕಾರಣದ ಸಿಎಂ ಸಿದ್ದರಾಮಯ್ಯರನ್ನು ರಣಹೇಡಿ ಎಂದು ಕರೆಯುವ ನಿನಗೆ ಮಾನ-ಮರ್ಯಾದೆ ಏನಾದರೂ ಇದೆಯಾ ? ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ ಅವರನ್ನು ಶಾಸಕ ಎಸ್.ಟಿ.ಸೋಮಶೇಖರ್ ಅವರು ತರಾಟೆಗೆ ತೆಗೆದುಕೊಂಡ ಪರಿ ಇದು. ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ
ಬಿಜೆಪಿ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಅಶೋಕ ಹಾಗೂ ವಿಧಾನ ಪರಿಷತ್ ಸದಸ್ಯ ಜಗ್ಗೇಶ್ ಅವರ ವಿರುದ್ಧ ಏಕ ವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
`ಏ ಅಶೋಕ, ನೀನೇನು ವಿಜಯನಗರದ ಸಾಮ್ರಾಟನಾ? ನಿನಗೆ ಮಾನ-ಮರ್ಯಾದೆ, ಸ್ವಾಭಿಮಾನಏನಾದರೂ ಇದೆಯಾ? ನೀನೊಬ್ಬ ರಣ ಹೇಡಿ. ನಿನ್ನನ್ನು ಈ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಎಂದು ಕರೆಯುವುದಕ್ಕೆ ನಾಚಿಕೆಯಾಗುತ್ತದೆ. ಜೆಡಿಎಸ್ ಜತೆ ನೀವು ಹೊಂದಾಣಿಕೆ ಮಾಡಿಕೊಂಡರೆ ಮಾತ್ರ ನೈತಿಕ, ನಾವು ಹೊಂದಾಣಿಕೆ ಮಾಡಿಕೊಂಡರೆ
ಅನೈತಿಕವೇ ? ನಮ್ಮ ಕಾರ್ಪೋರೇಟರ್ ಗಳನ್ನು ಮತ್ತೆ ಆಪರೇಷನ್ ಕಮಲಕ್ಕೆ ಒಳಪಡಿಸಲು ಮುಂದಾಗಿದ್ದೀರಿ. ಇದಕ್ಕೆ ಸಂಬಂಧಪಟ್ಟ ರೆಕಾಡ್ರ್ಸ್ ನಮ್ಮ ಬಳಿ
ಇದೆ. ಆದರೆ ಪದ್ಮಾವತಿ ಅಮರನಾಥ್ ವಿರುದ್ಧ ರು. 10 ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದ್ದೀರಲ್ಲ. ನ್ಯಾಯಾಲಯ ದಲ್ಲಿ ನಮಗೆ ಸೋಲಾದರೆ ಕಾಂಗ್ರೆಸ್‍ನ ಎಲ್ಲ ಕಾರ್ಯಕರ್ತರು ಒಂದೊಂದು ರೂಸಂಗ್ರಹಿಸಿ ನ್ಯಾಯಾಲಯಕ್ಕೆ ಪಾವತಿಮಾಡುತ್ತೇವೆ' ಎಂದರು.
ಆತ್ಮಗೌರವ ಎಷ್ಟಕ್ಕೆ ಮಾರಿಕೊಂಡಿರಿ ?: ಕಾಂಗ್ರೆಸ್ ಪಕ್ಷವನ್ನು ನೀಲಿ ಚಿತ್ರಗಳ ತಾರೆಸನ್ನಿ ಲಿಯೋನ್‍ಗೆ ಹೋಲಿಸಿದ ನಟ ಜಗ್ಗೇಶ್ ಅವರಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಹೇಳುವ ಯೋಗ್ಯತೆ ಇಲ್ಲ. 2008ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಕ್ಕಿಲ್ಲ ಎಂದು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ನೀನು ಆಪರೇಷನ್ ಕಮಲ ಸಂದರ್ಭದಲ್ಲಿ
ಆತ್ಮಗೌರವವನ್ನು ಎಷ್ಟಕ್ಕೆ ಮಾರಿಕೊಂಡೆ ಎಂದು ಪ್ರಶ್ನಿಸಿದರು.
ಕಾಮನ್‍ಸೆನ್ಸ್ ಇಲ್ಲ : ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಬಿಜೆಪಿಯವರಿಗೆ ಕಾಮನ್‍ಸೆನ್ಸ್ ಇಲ್ಲ. ಎಲ್ಲರಿಗಿಂತ ಹೆಚ್ಚು ಸೀಟು ಗೆದ್ದವರುಮೇಯರ್ ಆಗಬಹುದು ಎಂಬುದು ಅವರ ಲೆಕ್ಕಾಚಾರ. ಆದರೆ ಕೆಎಂಸಿ ಕಾಯ್ದೆ ಪ್ರಕಾರ 133 ಮತ ಪಡೆದವರು ಮಾತ್ರ ಮೇಯರ್ ಆಗಲು ಸಾಧ್ಯ. ಐದು ವರ್ಷ ಆಡಳಿತ ನಡೆಸಿದ ಇವರಿಗೆ ಈ ಸಾಮಾನ್ಯ ಜ್ಞಾನವೂ ಅರ್ಥವಾಗಿಲ್ಲ ಎಂದು ವ್ಯಂಗ್ಯವಾಡಿದರು. ಪ್ರತಿಭಟನೆಯಲ್ಲಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸಚೇತಕ ಆರ್.ವಿ.ವೆಂಕಟೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಇದ್ದರು.
ಇನ್ನೂ ಆಪರೇಷನ್ ಯತ್ನ
ಕಾಂಗ್ರೆಸ್ ಸದಸ್ಯರಿಗೆ ಆಪರೇಷನ್ ನಡೆಸಲು ಬಿಜೆಪಿ ಇನ್ನೂ ಯತ್ನ ನಡೆಸುತ್ತಿದೆ. ನಾಗವಾರ ವಾರ್ಡ್ ಸದಸ್ಯೆ ಇರ್ಷಾದ್ ಬೇಗಂ ಅವರಿಗೆ ಬಿಜೆಪಿ ಮುಖಂಡರು ಕರೆ ಮಾಡಿ ಆಮಿಶವೊಡ್ಡಿದ್ದಾರೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಆರೋಪಿಸಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಇಷ್ಟೆಲ್ಲ ಬೆಳವಣಿಗೆಗಳಾದರೂ
ಬಿಜೆಪಿಯವರಿಗೆ ಬುದ್ಧಿ ಬಂದಿಲ್ಲ ಎಂದು ಆರೋಪಿಸಿದರು. ಕುದುರೆ ಕಟ್ಟಿ ಇದೇ 11ರಂದು ನಡೆಯುವ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ. ಈ ದಂಡಯಾತ್ರೆ ದ್ಯೋತಕವಾಗಿ ನಾವು ಕುದುರೆ ಬಿಟ್ಟಿದ್ದೇವೆ. ತಾಕತ್ತಿದ್ದರೆ ಕಟ್ಟಿ ಎಂದು ಎನ್ ಎಸ್‍ಯುಐ ಅಧ್ಯಕ್ಷ ಮಂಜುನಾಥ್ ಬಿಜೆಪಿ ಮುಖಂಡರಿಗೆ ಸವಾಲು ಹಾಕಿದ್ದಾರೆ. ಇದು ನಮ್ಮ
ಅಶ್ವಮೇಧದ ಕುದುರೆ. ಆರ್. ಅಶೋಕ ಅವರಿಗೆ ಸಾಮರ್ಥ್ಯವಿದ್ದರೆ ಇದನ್ನು ಕಟ್ಟಿ, ಬಿಜೆಪಿಯವರನ್ನು ಮೇಯರ್‍ನ್ನಾಗಿ ಗೆಲ್ಲಿಸಿಕೊಳ್ಳಲಿ ಎಂದು ಹೇಳಿದರು.