ಕೋಲಾರ: ಮಹಾದಾಯಿ ನೀರಿನ ಹಕ್ಕಿಗಾಗಿ ಕಳೆದ 55 ದಿನಗಳಿಂದ ನಡೆಯುತ್ತಿ-ರುವ ಹೋರಾಟಕ್ಕೆ ತೆರೆ ಎಳೆಯಲು ಪ್ರಧಾನಿ ಮೋದಿ ಅವರ ಮಧ್ಯಸ್ಥಿಕೆ ಅನಿವಾರ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲೆಯ ವೇಮಗಲ್‍ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಯಾರೂ ರಾಜಕೀಯ ಬೆರಸಿ ಮಾತನಾಡುವುದು ಸರಿಯಲ್ಲ. ಕರ್ನಾಟಕದ ಜನತೆ ನೀರಿನ ಹಕ್ಕು ಹೇಳುವುದರಲ್ಲಿ ತಪ್ಪಿಲ್ಲ. ವಿವಾದ ಸೌಹಾರ್ದಯುತವಾಗಿ ಬಗೆಹರಿಯಬೇಕಾದರೆ ಪ್ರಧಾನಿ ಮೋದಿಯವರು ಕೂಡಲೇ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಸಭೆ ಕರೆಯಬೇಕು. ಈ ವಿಷಯದಲ್ಲಿ ಕಾನೂನು ತೊಡಕುಗಳು ಏನಾದರೂ ಇದ್ದರೆ ಪರಸ್ಪರ ಮಾತುಕತೆ
ಮೂಲಕ ನಿವಾರಣೆಗೆ ವೇದಿಕೆ ಕಲ್ಪಿಸಬೇಕು. ಆದರೆ, ಪ್ರಧಾನಿ ಮೋದಿ ಹೋರಾಟದ ಸ್ವರೂಪ ಹಾಗೂ ಜನತೆಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ನಿರ್ಲಕ್ಷ್ಯ: ಪ್ರಧಾನಿಯ ನಿರ್ಲಕ್ಷ್ಯದಿಂದಲೇ ಹೋರಾಟ ತೀವ್ರಗೊಳ್ಳುತ್ತಿದೆ. ಇನ್ನೂ ಕಾಲ ಮಿಂಚಿಲ್ಲ, ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸ,ಬೇಕು ಎಂದು ಹೇಳಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಹಾದಾಯಿ ವಿವಾದ ಬಗೆಹರಿಸಿಲ್ಲವೆಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.