ಡಿ.ಕೆ.ಶಿವಕುಮಾರ್ 
ರಾಜಕೀಯ

ಟೀಕೆ ನಿಲ್ಸಿ; ವಿದ್ಯುತ್ ಕೊಡ್ಸಿ

ಬಿಜೆಪಿ ಮುಖಂಡರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ...

ಬೆಂಗಳೂರು: ಬಿಜೆಪಿ ಮುಖಂಡರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ವಿಚಾರ ಸಂಬಂಧ ವಿವಿಧ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು,  ಬಿಜೆಪಿಯವರು ಅಧಿಕಾರದಲ್ಲಿದ್ದಾಗಲೂ ಲೋಡ್ ಶೆಡ್ಡಿಂಗ್ ನಡೆದಿತ್ತು. ಆದರೆ ಅವರು ನಮಗಿಂತ ಹೆಚ್ಚಿನ ದರ ಕೊಟ್ಟು ವಿದ್ಯುತ್ ಖರೀದಿಸಿದ್ದರು ಎಂದು ತಿರುಗೇಟು ನೀಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಿದ್ಯುತ್ ಕ್ಷಾಮ ಸಂದರ್ಭದಲ್ಲಿ ಪ್ರತಿ ಯೂನಿಟ್‍ಗೆ ರು. 7ರಂತೆ ಖರೀದಿಸಿದ್ದರು. ಆದರೆ ನಾನು ರು.5ಕ್ಕೆ ಖರೀದಿಸಿದ್ದೇನೆ. ಬಿಜೆಪಿ ನಾಯಕರು ವಿನಾಕಾರಣ ಮಾತನಾಡುವುದನ್ನು ನಿಲ್ಲಿಸಲಿ. ಬಿಜೆಪಿ ಸರ್ಕಾರವಿದ್ದಾಗ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಲೋಡ್ ಶೆಡ್ಡಿಂಗ್ ಜಾರಿ ಮಾಡಿದ್ದರು. ಆದರೆ ದುಬಾರಿ ದರಕ್ಕೆ ವಿದ್ಯುತ್ ಖರೀದಿ ಮಾಡಿದ್ದರು. ಆದರೆ ನಾವು ಜನರ ದುಡ್ಡು ವಿನಾಕಾರಣ ವ್ಯರ್ಥವಾಗಲು ಬಿಡುವುದಿಲ್ಲ ಎಂದರು. ಯಾವ ಕಾರಣಕ್ಕಾಗಿ ಇವರು ಪ್ರತಿ ಯೂನಿಟ್‍ಗೆ ರು.7 ಕೊಟ್ಟು ಖರೀದಿ ಮಾಡಿದರು? ನಮಗೆ ಒಂದು ಯೂನಿಟ್ ವಿದ್ಯುತ್ ಅನ್ನು ರು.5 ಗೆ ಖರೀದಿಸುವುದು ಹೇಗೆ ಸಾಧ್ಯವಾಗುತ್ತದೆ? ಬಿಜೆಪಿ ನಾಯಕರಿಗೆ ರಾಜ್ಯದ ಜನರ ಕುರಿತು ಕಳಕಳಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಉತ್ತರ ಭಾರತದ ರಾಜ್ಯಗಳಿಂದ ಕರ್ನಾಟಕಕ್ಕೆ ವಿದ್ಯುತ್ ತರಲು ಕಾರಿಡಾರ್ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಿ ಎಂದು ಸವಾಲೆಸೆದರು. ರಾಜ್ಯದ ಜನರ ಕುರಿತು ಇವರಿಗೆ ನಿಜವಾಗಿಯೂ ಕಾಳಜಿ ಇದ್ದರೆ ಇವರು ನಮಗೆ ಕಾರಿಡಾರ್ ಕೊಡಿಸಲಿ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಲಿ. ಅದನ್ನು ಬಿಟ್ಟು ಟೀಕೆ ಮಾಡುವುದು ಸದಾನಂದ ಗೌಡರಿಗಾಗಲೀ, ಪ್ರಹ್ಲಾದ್ ಜೋಷಿ ಅವರಿಗಾಗಲೀ ಶೋಭೆ ತರುವುದಿಲ್ಲ ಎಂದು ಹೇಳಿದರು.

ಭಿನ್ನಾಭಿಪ್ರಾಯವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಭಿನ್ನಾಭಿಪ್ರಾಯ ಇರುವ ಕಾರಣಕ್ಕಾಗಿ ರಾಜ್ಯಕ್ಕೆ ಕತ್ತಲೆ ಭಾಗ್ಯ ಬಂದಿದೆ ಎಂದು ಇವರು ಹೇಳುತ್ತಾರೆ. ಆದರೆ ಇದು ಶುದ್ಧ ಸುಳ್ಳು. ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.ಬುಧವಾರ ರಾತ್ರಿಯಿಂದ ಇಂದಿನ ಬೆಳಗಿನ ಜಾವದ ತನಕ ಕೇಂದ್ರ ಸರ್ಕಾರ 200 ಮೆಗಾವ್ಯಾಟ್ ವಿದ್ಯುತ್ ಪೂರೈಸುತ್ತಿದೆ. ಅದೇ ರೀತಿ ಉಡುಪಿ ಉಷ್ಣ ವಿದ್ಯುತ್ ಸ್ಥಾವರದಿಂದಲೂ ಲಭ್ಯವಾಗುತ್ತಿದೆ. ಮೈಸೂರು, ಗುಲ್ಬರ್ಗದಲ್ಲಿ ಮಳೆಯಾಗಿದ್ದರಿಂದ 200 ಮೆಗಾವ್ಯಾಟ್ ಗೂ ಹೆಚ್ಚಿನ ಬೇಡಿಕೆ ಕಡಿಮೆಯಾಗಿದೆ. ಇದೆಲ್ಲವನ್ನೂ ನೋಡಿದರೆ ಸೆಪ್ಟೆಂಬರ್ ಹದಿನೈದರ ನಂತರ ಪರಿಸ್ಥಿತಿ ಮತ್ತಷ್ಟು ಸುಧಾರಿಸಬಹುದು. ಯಾವ್ಯಾವ ಕಾಲದಲ್ಲಿ ಲೋಡ್ ಶೆಡ್ಡಿಂಗ್ ಮಾಡುತ್ತೇವೆ ಎಂದು ಕಳೆದ ತಿಂಗಳೇ ವೇಳಾಪಟ್ಟಿ ಹೊರಡಿಸಲಾಗಿತ್ತು. ಈಗ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದರು. ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಶುರುವಾದ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಪ್ರತಿನಿತ್ಯ ರು. 200 ಕೋಟಿ ನಷ್ಟ ಅನುಭಸುತ್ತಿವೆ ಎಂಬ ಮಾತನ್ನು ಸಾರಾಸಗಟಾಗಿ ತಳ್ಳಿ ಹಾಕಿದ ಅವರು, ಅವೆಲ್ಲ ಶುದ್ಧ ಸುಳ್ಳು. ಒಂದು ದಿನ ಸರಿಯಾಗಿ ಮಳೆ ಬಂದರೆ ನಮಗೆ ರು. 10000 ಕೋಟಿ ಉಳಿತಾಯವಾಗುತ್ತದೆ. ಹಾಗಂತ ನಾವು ಹೇಳುತ್ತಾ ಕೂತರೆ ಮಳೆ ಬರುತ್ತದೆಯೇ? ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತದೆಯೇ? ಎಂದೂ ಪ್ರಶ್ನಿಸಿದರು.

ಶೀಘ್ರ ಪ್ರಾರಂಭ: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇವೆ. ರಾಮನಗರದ ಸಮೀಪ ಜಾಗ ಹುಡುಕುವ ಕೆಲಸ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಕಾಮಗಾರಿ ಪುನಾರಂಭವಾಗಲಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!