63 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿರುವ ಬಿಹಾರ ಮಾಜಿ ಸಿಎಂ ಮಾಂಝಿ
ಬಿಹಾರ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅಸ್ತಿ ವಿವರ ಘೋಷಿಸಿದ್ದು, 63 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಪಾಟ್ನಾ:ಬಿಹಾರ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅಸ್ತಿ ವಿವರ ಘೋಷಿಸಿದ್ದು, 63 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಮಾಂಝಿ, 13 ಲಕ್ಷ ರೂಪಾಯಿ ಮೌಲ್ಯದ ಮನೆ, 10 ವರ್ಷಗಳ ಹಿಂದಿನ ಅಂಬಾಸಿಡರ್ ಕಾರ್, 2011 ರ ಮಾಡೆಲ್ ನ ಮಹೀಂದ್ರಾ ಸ್ಕಾರ್ಪಿಯೋ ಎಸ್.ಯು.ವಿ ಯನ್ನು ಹೊಂದಿದ್ದಾರೆ.
ಮಾಂಝಿಯ ತಂದೆ ಗಯಾ ಜಿಲ್ಲೆಯ ಗ್ರಾಮದಲ್ಲಿ ಭೂರಹಿತ ಕಾರ್ಮಿಕನನಾಗಿದ್ದರು. ಕೆಲ ವರ್ಷಗಳ ಹಿಂದೆ 37 ಲಕ್ಷ ರೂ ಮೌಲ್ಯದ ಕೃಷಿ ಭೂಮಿಯ ಒಡೆಯನಾಗಿದ್ದರು.
ಈ ವರ್ಷ ತಮ್ಮ ವಯಸ್ಸು ಹಾಗೂ ಆಸ್ತಿ ಬಗ್ಗೆ ಜಿತನ್ ರಾಮ್ ಮಾಂಝಿ ತಪ್ಪು ಮಾಹಿತಿ ವಿವಾದಕ್ಕೀಡಾಗಿದ್ದರು. ಹಿಂದುಸ್ಥಾನ್ ಅವಾಂ ಮೋರ್ಚಾದ ಅಧ್ಯಕ್ಷರಾಗಿರುವ ಜಿತನ್ ರಾಮ್ ಮಾಂಝಿ, ಎರಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.