ನವದೆಹಲಿ: ತಮಿಳುನಾಡಿಗೆ ಸಂಕಷ್ಟ ಸೂತ್ರದಡಿ ನೀರು ಹರಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ನ್ಯಾಯಾಧಿಕರಣದ ಆದೇಶದಂತೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸುತ್ತಿ ಲ್ಲ. ಸಂಕಷ್ಟ ಸೂತ್ರದಡಿ ಲಭ್ಯ ನೀರನ್ನು ಉಭಯ ರಾಜ್ಯಗಳು ಹಂಚಿಕೊಳ್ಳಬೇಕು, ಅದರಂತೆ ನೀರು ಹರಿಸಲಾಗುತ್ತಿದೆ. ಅದು ಅನಿವಾರ್ಯ ಎಂದು ಹೇಳಿದರು. ರಾಜ್ಯದ ಜಲಾಶಯಗಳಲ್ಲಿ ಶೇ.50 ರಷ್ಟು ಮಾತ್ರ ನೀರು ಇದೆ. ಕೆಆರ್‍ಎಸ್ ನಲ್ಲಿ 49 ಟಿಎಂಸಿ ನೀರು ಸಂಗ್ರಹ ಇರಬೇಕಿತ್ತು. ಈಗ 25 ಟಿಎಂಸಿ ಮಾತ್ರವ ಇದೆ. ಈ ಪೈಕಿ ಡೆಡ್ ಸ್ಟೋರೇಜ್ ಕಳೆದರೆ ನಮಗೆ 25 ಟಿಎಂಸಿ ಪೂರ್ಣಬಳಕೆಗೆ ಸಿಗುವುದಿಲ್ಲ ಎಂದರು.
ಮಧ್ಯಂತರ ಅರ್ಜಿ: ಮಹಾದಾಯಿ ನ್ಯಾಯಾಧಿಕರಣಕ್ಕೆ ಶೀಘ್ರ ಎರಡು ಮಧ್ಯಂತರ ಅರ್ಜಿ ಸಲ್ಲಿಸಲಾಗುತ್ತದೆ. ಈ ಸಂಬಂಧ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಕಾನೂನು ತಜ್ಞ ಫಾಲಿ ನಾರಿಮನ್ ಜತೆ ಚರ್ಚಿಸಿದ್ದಾರೆ.
ಐಐಟಿ ರಾಜ್ಯದ ಹಿತಾಸಕ್ತಿ: ಧಾರವಾಡಕ್ಕೆಐಐಟಿ ಮಂಜೂರಾದ ನಂತರವೂ ರಾಯಚೂರಿಲ್ಲೇ ಪ್ರಾರಂಭಿಸಬೇಕು ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದನ್ನು ಸಿದ್ದರಾಮಯ್ಯ ಸಮ ರ್ಥಿಸಿಕೊಂಡಿದ್ದಾರೆ. ರಾಜ್ಯದ ಹಿತಾಸಕ್ತಿ ಮತ್ತು ಹಿಂದುಳಿ ದ ಪ್ರದೇಶದ ಹಿತಾಸಕ್ತಿ ಗಮ ನದಲ್ಲಿಟ್ಟುಕೊಂಡು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಧಾರವಾಡದಲ್ಲಿ ಈಗಾಗಲೇ ಐಐಐಟಿ ಇದೆ. ರಾಯಚೂರು ಹಿಂದುಳಿದ ಪ್ರದೇಶವಾದ್ದರಿಂದ ಅಲ್ಲಿ ಐಐಟಿ ಸ್ಥಾಪನೆ ಆದರೆ, ಆ ಪ್ರದೇಶ ಮುಂದುವರೆಯುತ್ತದೆ. ಕೇಂದ್ರ ಮನಸ್ಸು ಮಾಡಿದರೆ, ರಾಯಚೂರಿಗೆ ಐಐಟಿ ಸ್ಥಾಪಿಸಲು ಬೇಕಾಗುವ ಎಲ್ಲ ಮೂಲಭೂತ ಸೌಲಭ್ಯವನ್ನ ಒದಗಿಸಬಹುದು ಎಂದರು.
ಕೇಂದ್ರಕ್ಕೆ ಪತ್ರ ಬರೆದಿದ್ದು ರಾಜ ಕೀಯವಾಗಿ ತಪ್ಪು ನಿರ್ಧಾರವೇನಲ್ಲ ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos