ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಶೆಟ್ಟರ್ ಕೇಂದ್ರ ನೀತಿಯನ್ನು ಸರಿಯಾಗಿ ಓದಲಿ: ಉಗ್ರಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾಡಿರುವ ಆರೋಪದ ವಿರುದ್ಧ ಕಿಡಿಕಾರಿರುವ...

ಉಗ್ರಪ್ಪ
Mainashree
Updated On : 14 Apr 2016, 2:06 am
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾಡಿರುವ ಆರೋಪದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ವಕ್ತಾರ ವಿ ಎಸ್ ಉಗ್ರಪ್ಪ, ಶೆಟ್ಟರ್ ಅವರು ಮೊದಲು ಕೇಂದ್ರ ಸರ್ಕಾರದ ನೀತಿಯನ್ನು ಸರಿಯಾಗಿ ಓದಲಿ ಎಂದು ಹೇಳಿದ್ದಾರೆ. 
ಕೇಂದ್ರ ಸರ್ಕಾರವು ಸಚಿವರಿಗೆ ರೂಪಿಸಿರುವ ನೀತಿ ಸಂಹಿತೆ ಪ್ರಕಾರ ಸಚಿವರ ಕುಟುಂಬಸ್ಥರಿಗೆ ಯಾವುದೇ ಸರ್ಕಾರಿ ಗುತ್ತಿಗೆ ನೀಡುವಂತಿಲ್ಲ. ಆದರೆ ಮುಖ್ಯಮಂತ್ರಿಗಳು ತಮ್ಮ ಪುತ್ರನ ಕಂಪನಿಗೆ ಗುತ್ತಿಗೆ ನೀಡು ಅಕ್ರಮವೆಸಗಿದ್ದಾರೆಂದು ಜಗದೀಶ್ ಶೆಟ್ಟರ್ ಆರೋಪಿಸಿದ್ದರು. 
ಜಗದೀಶ್ ಶೆಟ್ಟರ್ ಆರೋಪವನ್ನು ತಳ್ಳಿ ಹಾಕಿರುವ ಉಗ್ರಪ್ಪ, ಮೊದಲು ಕೇಂದ್ರ ಸರ್ಕಾರ ನೀತಿಯನ್ನು ಶೆಟ್ಟರ್ ಸರಿಯಾಗಿ ಓದಲಿ, ಅವರ ಹೇಳಿಕೆಯ ಪ್ರಕರಾವೇ ಗಮನಿಸಿದರು, ಸಿದ್ದರಾಮಯ್ಯ ಪುತ್ರ ವಯಸ್ಕನಾಗಿದ್ದು, ತಂದೆಯ ಮೇಲೆ ಅವಲಂಬಿತವಾಗಿಲ್ಲ. ಹಾಗಾಗಿ, ಸಿಎಂ ಕುಟುಂಬ ಸದಸ್ಯನೆಂದು ಯತೀಂದ್ರ ಅವರನ್ನು ಪರಿಗಣಿಸಲಾಗುವುದಿಲ್ಲ ಎಂದು ಸಮರ್ಥನೆ ನೀಡಿದ್ದಾರೆ. 

Advertisement

Advertisement

ಇಂತಹ ಆರೋಪಗಳನ್ನು ಮಾಡುವುದರ ಬದಲು, ಸರ್ಕಾರಿ ವೈದ್ಯಕೀಯ ಸಂಸ್ಥೆಗಳಿಗಿಂತ ಶೇ.20ರಷ್ಟು ಕಡಿಮೆ ವೆಚ್ಚದಲ್ಲಿ ಲ್ಯಾಬ್ ನಿರ್ಮಾಣ ಮಾಡಲು ಮುಂದೆ ಬಂದಿರುವ ಯತೀಂದ್ರ ಅವರಿಗೆ ನೀವು ಶುಭ ಕೋರಬೇಕು ಎಂದು ಶೆಟ್ಟರ್ ಗೆ ಉಗ್ರಪ್ಪ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments