ಎಚ್ ಡಿ ಕುಮಾರಸ್ವಾಮಿ- ಬಿಎಸ್ ಯಡಿಯೂರಪ್ಪ
ಮೈಸೂರು: ಬರ ಪರಿಸ್ಥಿತಿ ಕುರಿತು ಪ್ರವಾಸ ಕೈಗೊಳ್ಳುವುದರ ಬದಲು ಬರ ಪರಿಹಾರಕ್ಕಾಗಿ ಹೆಚ್ಚು ಹಣ ಬಿಡುಗಡೆ ಮಾಡಲು ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯಿಸಿ ಎಂದು ಬಿಜೆಪಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಪ್ರಚಾರಕ್ಕಾಗಿ ಬಿಜೆಪಿ ಬರ ಪ್ರವಾಸ ಕೈಗೊಂಡಿದ್ದು, ಅದಕ್ಕಾಗಿ 12 ತಂಡಗಳನ್ನು ರಚಿಸಿದೆ. ಪ್ರಚಾರಕ್ಕಾಗಿ ಈ ರೀತಿ ನಾಟಕವಾಡುವುದನ್ನು ನಿಲ್ಲಿಸಿ, ತಮ್ಮದೇ ಕೇಂದ್ರ ಸರ್ಕಾರ ಬರ ಪರಿಹಾರಕ್ಕಾಗಿ ಹೆಚ್ಚು ಹಣ ಬಿಡುಗಡೆ ಮಾಡುವಂತೆ ಬಿಜೆಪಿ ಒತ್ತಡ ಹೇರಲಿ ಎಂದು ಅವರು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಬರ ಪ್ರವಾಸ ಎಂದು ನೆಪ ಹೇಳಿ ಊರೂರು ಸುತ್ತುವ ಬದಲು, ನಗರ ಮತ್ತು ಗ್ರಾಮೀಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದಿದ್ದಾರೆ. ಯಡಿಯೂರಪ್ಪನವರು ಬರ ಪ್ರವಾಸಕೈಗೊಳ್ಳುತ್ತೇವೆ ಎಂದು ಘೋಷಣೆ ಮಾಡುತ್ತಿದ್ದಂತೆ ಕಾಂಗ್ರೆಸ್ ಬರ ಪ್ರವಾಸ ಕೈಗೊಂಡಿದೆ ಎಂದು ಕಿಡಿ ಕಾರಿದ್ದಾರೆ.
ಕಳೆದ 15-20 ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಪರಿಸ್ಥಿತಿ ಸರಿಯಿಲ್ಲ, ನೀರಿಲ್ಲದೇ ಜನ ಪರದಾಡುತ್ತಿದ್ದಾರೆ. ಕೆಲವು ನದಿಗಳು ಬತ್ತಿ ಹೋಗಿದ್ದರೆ, ಜಲಾಶಯಗಳಲ್ಲಿ ನೀರು ಖಾಲಿಯಾಗಿದೆ. ಕೊಳವೆ ಬಾವಿ ಕೊರಸಿ ನೀರು ಪೂರೈಕೆ ಮಾಡಬೇಕೆಂದರೆ ಭೂಮಿಯೊಳಗೂ ನೀರು ಸಿಗುತ್ತಿಲ್ಲ ಎಂದು ಅವರು ವಿಷಾಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics