ಸಂಗ್ರಹ ಚಿತ್ರ 
ರಾಜಕೀಯ

ನಾವು ಹೆಚ್ಚಿನ ಸಂಬಳ ಪಡೆಯುತ್ತಿದ್ದೇವಾ? ಸ್ಪೀಕರ್ ಹಾಗೂ ಸಿಎಂ ಗೆ ಶಾಸಕರ ಪತ್ರ

ದೆಹಲಿ ಹಾಗೂ ತೆಲಂಗಾಣ ರಾಜ್ಯದ ಶಾಸಕರಂತೆ ನಮಗೂ ವೇತನ ಹೆಚ್ಚಿಸಿ ಎಂದು ರಾಜ್ಯ ಶಾಸಕರು ಸಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್ ಕೆ.ಬಿ ಕೋಳಿವಾಡ...

ಬೆಂಗಳೂರು: ದೆಹಲಿ ಹಾಗೂ ತೆಲಂಗಾಣ ರಾಜ್ಯದ ಶಾಸಕರಂತೆ ನಮಗೂ ವೇತನ ಹೆಚ್ಚಿಸಿ ಎಂದು ರಾಜ್ಯ ಶಾಸಕರು ಸಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್ ಕೆ.ಬಿ ಕೋಳಿವಾಡ ಅವರಿಗೆ ಪತ್ರ ಬರೆದಿದ್ದಾರೆ.

ಈಗಾಗಲೇ ಶಾಸಕರು ಹೆಚ್ಚಿನ ವೇತನ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಹೀಗಾಗಿ ತಾವು ಹೆಚ್ಚು ವೇತನ ಪಡೆಯತ್ತಿಲ್ಲ ಎಂಬುದನ್ನು ರಾಜ್ಯದ ನಾಗರಿಕರಿಗೆ ತಿಳಿಸುವ ಸಲುವಾಗಿ ಶಾಸಕರ ಒಂದು ಗುಂಪು ಪತ್ರ ಬರೆದಿದೆ.

ದೆಹಲಿ ಹಾಗೂ ತೆಲಂಗಾಣ ಸರ್ಕಾರಗಳು ಇತ್ತೀಚೆಗೆ ತಮ್ಮ ಶಾಸಕರ ವೇತನ ಹೆಚ್ಚಿಸಿದ್ದು, ಕರ್ನಾಟಕ ರಾಜ್ಯದ ಶಾಸಕರ ದುಃಖಕ್ಕೆ ಕಾರಣವಾಗಿದೆ. ದೇಶದ ಎಲ್ಲಾ ರಾಜ್ಯಗಳ ಶಾಸಕರುಗಳಿಗಿಂತ ಕರ್ನಾಟಕ ಶಾಸಕರು ಹೆಚ್ಚಿನ ವೇತನ ಪಡೆಯುತ್ತಿದ್ದ ಕಾಲವಿತ್ತು.

15 ಜನರ ಶಾಸಕರ ಗುಂಪೊಂದು ಪತ್ರ ಬರೆದಿದ್ದು ಜೊತೆಗೆ ತೆಲಂಗಾಣ ಹಾಗೂ ದೆಹಲಿ ಶಾಸಕರ ವೇತನ ಪಟ್ಟಿಯನ್ನು ಕೂಡ ಲಗತ್ತಿಸಿ ಸಿಎಂ ಹಾಗೂ ಸ್ಪೀಕರ್ ಗೆ ರವಾನಿಸಿದೆ. ಇತ್ತೀಚೆಗೆ ನಡೆದ ಮುಂಗಾರು ಅಧಿವೇಶದಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಟಾರ್ಗೆಟ್ ಮಾಡಿಕೊಂಡ ವಿರೋಧ ಪಕ್ಷದ ಶಾಸಕರು ಒಂದು ದಿನವೂ ಅಧಿವೇಶನ ಸರಾಗವಾಗಿ ನಡೆಯಲು ಬಿಡಲಿಲ್ಲ,

ಕೆ.ಜೆ ಜಾರ್ಜ್ ಅವರ ರಾಜೀನಾಮೆಗೆ ಒತ್ತಾಯಿಸಿ ಸದನವನ್ನು ಮುಂದೂಡವಂತೆ ಮಾಡಿದ್ದವು. ಈಗ ತಮ್ಮ ವೇತನ ಹೆಚ್ಚಿಸುವಂತೆ ಮಾಡಿರುವ ಪ್ರಸ್ತಾಪದಿಂದ ಶಾಸಕರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವುದರಲ್ಲಿ ಸಂಶಯವಿಲ್ಲ.

ಹೀಗಾಗಲೇ ರಾಜ್ಯದ ಶಾಸಕರು ಹೆಚ್ಚಿನ ವೇತನ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರಲ್ಲಿ ತಪ್ಪು ಗ್ರಹಿಕೆ ಮೂಡಿದೆ. ಹಾಗಾಗಿ ಈ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲು ತಾವು ಸ್ಪೀಕರ್ ಗೆ ವೇತನ ಹೆಚ್ಚಿಸುವಂತೆ ಪತ್ರ ಬರೆದಿರುವುದಾಗಿ ಜೆಡಿಎಸ್ ಶಾಸಕ ಬಿಬಿ ನಿಂಗಯ್ಯ ತಿಳಿಸಿದ್ದಾರೆ. ಬೇರೆ ರಾಜ್ಯಗಳ ಶಾಸಕರ ವೇತನದ ಜೊತೆಗೆ ನಾವು ಪಡೆಯುತ್ತಿರುವ ಸಂಬಳವನ್ು ಹೋಲಿಕೆ ಮಾಡಿ. ಪ್ರಕಟಿಸಿದರೇ ನಾಗರಿಕರಿಗೆ ನಾವು ಹೆಚ್ಚಿನ ವೇತನ ಪಡೆಯುತ್ತಿದ್ದೇವೆ ಎಂಬ ತಪ್ಪು ಪರಿ ಕಲ್ಪನೆ ಹೋಗುತ್ತದೆ ಎಂದು ಅವರು ಹೇಳಿದ್ದಾರೆ.

ತೆಲಂಗಾಣ ಶಾಸಕರು ಪ್ರಸಕ್ತವಾಗಿ 2.5 ಲಕ್ಷ ವೇತನ ಪಡೆಯುತ್ತಿದ್ದಾರೆ. ಮೂಲ ವೇತನ 20 ಸಾವಿರ, ಕ್ಷೇತ್ರ ಭತ್ಯೆ 2.3 ಲಕ್ಷ ಸೇರಿ ಒಟ್ಟು 2.5 ಲಕ್ಷ ಪಡೆಯುತ್ತಿದ್ದಾರೆ. ಇನ್ನು ದೆಹಲಿ ಶಾಸಕರು 2.10 ಲಕ್ಷ ವೇತನ ಪಡೆಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

FlyDubai ವಿಮಾನ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ: ಇದು ನನ್ನ ವೈಯಕ್ತಿಕ ನಂಬಿಕೆ; ಡೊನಾಲ್ಡ್ ಟ್ರಂಪ್

ಕಾಕ್‌ಪಿಟ್ ದಾಳಿ ಬಳಿಕ 150ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಫ್ಲೈದುಬೈ ವಿಮಾನವನ್ನು ಹೊಡೆದುರುಳಿಸಲು ಇಸ್ರೇಲ್ ಸಿದ್ಧವಾಗಿತ್ತು: ವರದಿ

ಸೌದಿ ಮಿಲಿಟರಿ ಕಾರ್ಯಾಚರಣೆಗೆ ಹೌತಿ ಬಂಡುಕೋರರ ತಿರುಗೇಟು: ರಿಯಾದ್ ವಿಮಾನ ನಿಲ್ದಾಣ, ಅರಾಮ್ಕೊ ಸಂಸ್ಕರಣಾಗಾರ ಗುರಿಯಾಗಿಸಿಕೊಂಡು ದಾಳಿ!

ರಾಜ್ಯದಲ್ಲಿ ಮಳೆ ಮತ್ತೆ ಚುರುಕು: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ ಕಾಲ ಮಳೆ ಸಾಧ್ಯತೆ..!

ಬೆಂಗಳೂರಿನಲ್ಲಿ ವರುಣ ಆರ್ಭಟ: 17.3 ಮಿ.ಮೀ. ಮಳೆಗೆ ಬೆಂಗಳೂರು ತತ್ತರ; ಹಲವೆಡೆ ಜಲಾವೃತ, ಮರಗಳು ಧರೆಗೆ..!