ಸಿಎಂ ಸಿದ್ದರಾಮಯ್ಯ ಜೊತೆ ಪುತ್ರ ಡಾ.ಯತೀಂದ್ರ 
ರಾಜಕೀಯ

ರಾಜಕೀಯ ಮುಳ್ಳಿನ ಹಾಸಿಗೆ, ದೂರ ಉಳಿಯಲು ಯತೀಂದ್ರನಿಗೆ ಸಲಹೆ ನೀಡಿದ್ದೆ:ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರ ಮೊದಲನೇ ಪುತ್ರ ರಾಕೇಶ್ ಅಕಾಲಿಕ ನಿಧನದ ನಂತರ ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಲು ಸಿಎಂ ಅವರ ಎರಡನೇ ಪುತ್ರ ಡಾ.ಯತೀಂದ್ರ ..

ಮೈಸೂರು: ಸಿದ್ದರಾಮಯ್ಯ ಅವರ ಮೊದಲನೇ ಪುತ್ರ ರಾಕೇಶ್ ಅಕಾಲಿಕ ನಿಧನದ ನಂತರ ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಲು ಸಿಎಂ ಅವರ ಎರಡನೇ ಪುತ್ರ ಡಾ.ಯತೀಂದ್ರ ಹವಣಿಸುತ್ತಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಯತೀಂದ್ರ ಇತ್ತೀಚೆಗೆ ವರುಣಾ ವಿಧಾನ ಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಜನರ ಕುಂದು ಕೊರೆತೆಗಳನ್ನು ಆಲಿಸಿದ್ದರು. ಯತೀಂದ್ರ ರಾಜಕೀಯ ಪ್ರವೇಶದ ಕುರಿತು ಸಿಎಂ ಸಿದ್ದರಾಮಯ್ಯ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ.

ನಾನು ಯತೀಂದ್ರನನ್ನು ರಾಜಕೀಯಕ್ಕೆ ಬರುವಂತೆ ಯಾವುತ್ತೂ ಹೇಳಲಿಲ್ಲ. ರಾಜಕೀಯದಲ್ಲಿ ಎದುರಾಗುವ ಹಲವು ಅಪಾಯಗಳ ಬಗ್ಗೆ ಆತನಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನಾನು ರಾಜಕೀಯದಲ್ಲಿ ಸಕ್ರಿಯನಾಗಲು ನೀವು ಸಹಾಯ ಮಾಡಬೇಕು ಎಂದು ಕೇಳಿದಾಗ ನನಗೂ ನಿಜಕ್ಕೂ ಆಘಾತವಾಯಿತು. ಯಾವಾದಗಲು ಜನರಿಂದ ದೂರ ಉಳಿಯುವ ಯತೀಂದ್ರ ತೀರಾ ಸಂಕೋಚ ಸ್ವಭಾವದ ವ್ಯಕ್ತಿ. ಆತನದು ವ್ಯವಸ್ಥಿತ ಜೀವನ. ಕ್ಯಾನ್ಸರ್ ಕಾಯಿಲೆ ಸಂಬಂಧ ದಿನಕ್ಕೆ ನಾಲ್ಕೈದು ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾರೆ.

ರಾಜಕೀಯ ಎಂಬುದು ಮುಳ್ಳಿನ ಹಾಸಿಗೆ. ಇಲ್ಲಿಗೆ ಇಳಿಯುವುದಕ್ಕೂ ಮುನ್ನ ಸರಿಯಾಗಿ ಯೋಚಿಸು, ಜನರ ಜೊತೆ ಆಸಕ್ತಿಯಿಂದ ಬೆರೆಯಬೇಕಾಗುತ್ತದೆ.  ಒಮ್ಮೆ ರಾಜಕೀಯಕ್ಕೆ ಬಂದು ಜನರ ಜೊತೆ ಒಡನಾಟ ಇಟ್ಟಕೊಂಡು, ಅವರ ಪ್ರೀತಿ ವಿಶ್ವಾಸ, ಗೌರವಗಳನ್ನು ಸಂಪಾದಿಸಿದರೇ ಇದರಿಂದ ಹೊರ ಹೋಗುವುದು ತುಂಬಾ ಕಷ್ಟ ಎಂದು ಯತೀಂದ್ರನಿಗೆ ಸಲಹೆ ನೀಡಿದ್ದೆ.
ಒಬ್ಬ ವೈದ್ಯನಾಗಿ ನೀನು ಒರಟು ರಾಜಕೀಯದಲ್ಲಿ ಇರುವುದು ಕಷ್ಟ ಎಂದು ಹೇಳಿದೆ. ನೀವು ವಕೀಲರಾಗಿ ಮುಂದುವರಿಯದೇ ಯಾಕೆ ರಾಜಕೀಯ ರಂಗಕ್ಕೆ ಬಂದಿರಿ ಎಂದು ಯತೀಂದ್ರ ನನಗೆ ಮರು ಪ್ರಶ್ನೆ ಹಾಕಿದಾಗ ನನ್ನಲ್ಲಿ ಆತನಿಗೆ ನೀಡಲು ಉತ್ತರವಿರಲಿಲ್ಲ ಎಂದು ಸಿದ್ದರಾಮಯ್ಯ ವಿವರಿಸಿದರು.

ಯತೀಂದ್ರ ದೈವ ಭಕ್ತ, ಶುದ್ದ ಸಸ್ಯಹಾರಿ, ಪ್ರತಿ ಸೋಮವಾರ ಉಪವಾಸ ವಿದ್ದು ಪ್ರತಿದಿನ ಪೂಜೆ ಪುನಸ್ಕಾರ ಮಾಡುತ್ತಾರೆ. ಆತನಿಗೆ ಜನತೆಯ ಸಮಸ್ಯೆಗಳನ್ನು ಕೇಳುವ ತಾಳ್ಮೆ ಇದೆ. ಅಂತಿಮವಾಗಿ ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು, ಯತೀಂದ್ರರ ರಾಜಕೀಯ ಭವಿಷ್ಯವನ್ನು ಅವರೇ ನಿರ್ಧರಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ